September 16, 2024

Bhavana Tv

Its Your Channel

ಭಾವನಾ ಡಿ ಎಚ್. ಬಿಎಸ್ ಇ ಇಂಟೀರಿಯರ್ ಡಿಸೈನಿಂಗ್ ನಲ್ಲಿ ಮಂಗಳೂರು ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ

ಹೊನ್ನಾವರ ; ಸಾಧನೆ ಎನ್ನುವುದು ಯಾರೊಬ್ಬರ ಸ್ವತ್ತಲ್ಲ ಕಷ್ಟ ಪರಿಶ್ರಮ ಸಾಧಿಸುವ ಛಲವಿದ್ದರೆ ಏನನ್ನಾದರೂ ಸಾಧಿಸಬಹುದು. ಅದೇ ರೀತಿ ಶೈಕ್ಷಣಿಕವಾಗಿಯೂ ಸಹ ನಮ್ಮಿಷ್ಟದ ಕೋರ್ಸ್ ಆಯ್ದುಕೊಂಡು ಶ್ರದ್ಧೆಯಿಂದ ಓದಿದರೆ ಗೆಲುವು ಕಟ್ಟಿಟ್ಟಬುತ್ತಿ ಎನ್ನುವುದಕ್ಕೆ ಉತ್ತಮ ಉದಾಹರಣೆ ಹೊನ್ನಾವರದ ಈ ಯುವತಿ. ಯಾರಿವರು ? ಏನಿವರ ಸಾಧನೆ ಅಂತೀರಾ? ಹಾಗಿದ್ರೆ ಈ ಸ್ಟೋರಿ ನೋಡಿ.

ಶೈಕ್ಷಣಿಕವಾಗಿ ಸ್ವ ಪ್ರಯತ್ನದ ಜೊತೆ ತಾಯಿಯ ಸಲಹೆ ಮಾರ್ಗದರ್ಶನದ ಜೊತೆ ಉಪನ್ಯಾಸಕರ ಸಹಕಾರದ ಮೇರೆಗೆ ಈ ಯುವತಿಯ ಸಾಧನೆ ಮೆಚ್ಚಲೆಬೇಕು ಓದಿನಲ್ಲಿ ತಮ್ಮ ಆಯ್ಕೆ ಮತ್ತು ಪರಿಶ್ರಮದಿಂದ ಅದ್ಭುತ ಸಾಧನೆ ಮಾಡಿ ತಾಲೂಕಿಗೆ ಕೀರ್ತಿ ತಂದವರು ಶಿಕ್ಷಕಿ ವಿಜಯಾ ಬಿ ಮುಡ್ಕಣಿ ಪುತ್ರಿ ಭಾವನಾ ಡಿ ಎಚ್. ಬಿಎಸ್ ಇ ಇಂಟೀರಿಯರ್ ಡಿಸೈನಿಂಗ್ ನಲ್ಲಿ ಮಂಗಳೂರು ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಇವರು ಹೊನ್ನಾವರ ಪಟ್ಟಣದ ನಿವಾಸಿಯಾಗಿರುವುದು ತಾಲೂಕಿನ ಹೆಮ್ಮೆಯಾಗಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹೊನ್ನಾವರಾದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ ಪದವಿಪೂರ್ವ ಶಿಕ್ಷಣವನ್ನು ಎಸ್ ಡಿ ಎಂ ಕಾಲೇಜಿನಲ್ಲಿ ಮುಗಿಸಿದ ಭಾವನಾ ಮುಂದಿನ ವಿದ್ಯಾಭ್ಯಾಸಕ್ಕಾಗಿ ಮಂಗಳೂರಿಗೆ ತೆರಳಿದರು. ಅಲ್ಲಿನ ಕರಾವಳಿ ಕಾಲೇಜಿನಲ್ಲಿ ಇಂಟೀರಿಯರ್ ಡಿಸೈನಿಂಗ್ ಕೋರ್ಸ್ ಆಯ್ದು ಕೊಂಡು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಥಮ ರಾಂಕ್ ಪಡೆದಿರುವ ಇವರು ತಮ್ಮ ಓದಿಗೆ ಸಿಕ್ಕ ಸಹಕಾರದ ಹಾಗೆ ತಮ್ಮ ಕೋರ್ಸ್ ಬಗ್ಗೆ ಹೇಳಿದರು

ಇವರು ಪ್ರತಿನಿತ್ಯ ದಿನ ಪತ್ರಿಕೆ ಓದುವುದು ಪರಿಸರ ಕಾಳಜಿಯ ಜೊತೆ ಹೆಚ್ಚಿನ ಸಮಯ ಅಧ್ಯಯನಕ್ಕೆ ಮೀಸಲಾಗಿಟ್ಟರು. ಮುಂಜಾನೆಗಿAತ ರಾತ್ರಿ ಸಮಯದಲ್ಲಿ ಹೆಚ್ಚು ಅಧ್ಯಯನ ಮಾಡಿ ಈ ಸಾಧನೆ ಮಾಡಿರುವುದು ವಿಶೇಷವಾಗಿದೆ.
ಇದೀಗ ಮಣಿಪಾಲದ ಉಡುಪಿ ಗ್ರೂಪ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಭಾವನ ಪದವಿಯಲ್ಲಿ ತಮ್ಮಿಷ್ಟದ ಕೋರ್ಸ್ ಆಯ್ದುಕೊಂಡು ಸಾಧನೆ ಗೈಯಬೇಕೆಂದಿರುವವರಿಗೆ ಉತ್ತಮ ಮಾದರಿಯಾಗಿದ್ದಾರೆ. ಇವರ ಸಾಧನೆಗೆ ಜಿಲ್ಲೆ ಹಾಗೂ ಹೊನ್ನಾವರ ತಾಲೂಕಿನ ಜನತೆಗೆ ಹೆಮ್ಮೆಯ ವಿಷಯವಾಗಿದೆ.

error: