September 16, 2024

Bhavana Tv

Its Your Channel

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಸೆಂಟ್ರಲ್ ಶಾಲೆ ವಿದ್ಯಾರ್ಥಿ ಋತ್ವಿಕ್ ಮೇಸ್ತ

ಹೊನ್ನಾವರ ; ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಸೆಂಟ್ರಲ್ ಶಾಲೆಯ ವಿದ್ಯಾರ್ಥಿ ಋತ್ವಿಕ್ ಮೇಸ್ತ ಓಶೋಕಾಯಿ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಮತ್ತು ಕಾಲೇಜು ಇವರು ಮೈಸೂರಿನಲ್ಲಿ ಆಯೋಜಿಸಿದ ನೊಬೆಲ್ ವರ್ಲ್ಡ್ ರೆಕಾರ್ಡ್ ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆ ಮಾಡಿ ಉತ್ತಮ ಸಾಧನೆ ತೋರಿದ್ದಾನೆ.

ಆರನೇ ತರಗತಿ ವಿದ್ಯಾರ್ಥಿ ಋತ್ವಿಕ್ ಶಂಕರ ಮೇಸ್ತ ಅಂತಾರಾಷ್ಟ್ರೀಯ ಮಟ್ಟದಲ್ಲಿ 1.36 ಸೆಕೆಂಡಿನಲ್ಲಿ 1000 ಹೆಂಚುಗಳನ್ನು ಒಡೆಯುವ ಸ್ಪರ್ಧೆಯಲ್ಲಿ ವಿಶ್ವದಾಖಲೆ ಯೊಂದಿಗೆ ಚಿನ್ನದ ಪದಕ ಹಾಗೂ ಪ್ರಮಾಣ ಪತ್ರವನ್ನು ಪಡೆದಿರುತ್ತಾನೆ.
ಇವನು ಕರಾಟೆ ಶಿಕ್ಷಕ ಪ್ರಭಾಕರ ಗೌಡ ಇವರಲ್ಲಿ ತರಬೇತಿಯನ್ನು ಪಡೆದಿರುತ್ತಾನೆ. ಇವನ ಈ ಸಾಧನೆಗೆ ಎಂ.ಪಿ.ಇ. ಸೊಸೈಟಿಯ ಆಡಳಿತ ಮಂಡಳಿ ಅಧ್ಯಕ್ಷರು, ಸರ್ವ ಸದಸ್ಯರು, ಶಾಲಾ ಪ್ರಾಂಶುಪಾಲರು, ಎಲ್ಲಾ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಹಾಗೂ ಪಾಲಕರು ಅಭಿನಂದನೆ ಸಲ್ಲಿಸಿದ್ದಾರೆ.

error: