ಹೊನ್ನಾವರ : ಮುಂದಿನ ಪೀಳಿಗೆಗಾಗಿಯಾದರೂ ಜಿಲ್ಲೆಯ ಕರಾವಳಿಯ ಈಗಿನ ಸ್ವಚ್ಛ ಸುಂದರ ಪರಿಸರವನ್ನು ಉಳಿಸಿಕೊಳ್ಳಬೇಕು. ಅಳಿವಿನ ಅಂಚಿನಲ್ಲಿರುವ ಕಡಲಾಮೆಗಳ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಬೇಕು ಎಂದು ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಡಾ.ಶಿವಕುಮಾರ ಮುಗದಾ ಹೇಳಿದರು.
ಅವರು ಹೊನ್ನಾವರ ಕಾಸಕೋಡ ಕಡಲತೀರದಲ್ಲಿ ಕಡಲಾಮೆ ಮರಿಗಳನ್ನು ಕಡಲಿಗೆ ಸೇರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.. ಹೊನ್ನಾವರದ ಕಾಸರಕೋಡ ಟೊಂಕದ ಕಡಲತೀರದಲ್ಲಿ ಈಗ ಏಲ್ಲೆಲ್ಲೂ ಪುತ್ರೋತ್ಸವ ಅಥವಾ ಪುತ್ರಿಯರ ಉತ್ಸವ. ಕಡಲಾಮೆ ಮರಿಗಳು ಮರಳಗೂಡಿನಿಂದ ಇಲ್ಲಿ ಬುದು ಬುದು ಮೇಲೆದ್ದು ಬರುತ್ತಿವೆ. ಇನ್ನು ಎರಡು ಮೂರು ವಾರಗಳ ಕಾಲ ಪ್ರತಿದಿನವೂ ಒಂದಿಷ್ಟು ಗೂಡುಗಳು ತೆರೆದುಕೊಳ್ಳುತ್ತಿರುತ್ತವೆ. ಒಂದೊAದರಿAದಲೂ ಹೊರಬರುವ ಪುಟ್ಟ ಪುಟ್ಟ ಆಮೆ ಮರಿಗಳು ಸಮುದ್ರವನ್ನು ಸೇರಲು ತವಕಿಸುವುದನ್ನು ನೋಡುವುದೇ ಚೆಂದ.ಇದು ಶನಿವಾರ ತಡರಾತ್ರಿ ಇಲ್ಲಿ ಗಣ್ಯರ ದಂಡೇ ನೆರೆದಿತ್ತು. ಫಿಸ್ ಫೆಸ್ಟಿವಲ್ ಮಾದರಿಯಲ್ಲಿ ಸಣ್ಣ ಉತ್ಸವವೇ ನಡೆದಂತಿತ್ತು. ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಡಾ. ಶಿವಕುಮಾರ ಮುಗದಾ ಮತ್ತು ಉ. ಕ. ಜಿಲ್ಲೆಯ ಮೀನುಗಾರಿಕೆ ಜಂಟಿ ನಿರ್ದೇಶಕ ಬಿಪಿನ್ ಬೋಪಣ್ಣ, ಸಹಾಯಕ ನಿರ್ದೇಶಕ ಚೇತನ, ಹೊನ್ನಾವರ ಎಸಿಎಫ್ ಸುದರ್ಶನ್, ಅರಣ್ಯ ಇಲಾಖೆಯ ವಿವಿಧ ಅಧಿಕಾರಿಗಳು, ಕಡಲ ವಿಜ್ಞಾನಿ ಡಾ.ಪ್ರಕಾಶ ಮೇಸ್ತ, ಮೀನುಗಾರರ ಪ್ರಮುಖರಾದ ರಾಜೇಶ ತಾಂಡೇಲ, ಗಣಪತಿ ಈಶ್ವರ ತಾಂಡೇಲ, ಆಮೆಗಳ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆಯೊಂದಿಗೆ ಸಹಕರಿಸುತ್ತಿರುವ ಜೈನಜಟಗೇಶ್ವರ ಸಂಘದ ಅಧ್ಯಕ್ಷ ಭಾಸ್ಕರ ತಾಂಡೇಲ್ ಪದಾಧಿಕಾರಿಗಳಾದ ರಮೇಶ್ ತಾಂಡೇಲ್, ವಿನಾಯಕ ತಾಂಡೇಲ್, ಸಚಿನ್ ತಾಂಡೇಲ್, ಕಾರ್ತಿಕ ತಾಂಡೇಲ್, ವಿನಾಯಕ, ರಾಹುಲ್, ಮನೋಜ್ ಮತ್ತು ನೂರಾರು ಸ್ಥಳೀಯರು ಮತ್ತು ವಿವಿಧ ವಿದ್ಯಾರ್ಥಿಗಳು ಸೇರಿದ್ದರು. ಎರಡು ಮರಳು ಗೂಡುಗಳಿಂದ ಸುಮಾರು ೧೮೨ ಕಡಲಾಮೆ ಮರಿಗಳು ಬುದು ಬುದು ಮೇಲೆದ್ದು ಬಂದAತೆ ಸ್ಥಳೀಯ ಮೀನುಗಾರರು ಮತ್ತು ಅರಣ್ಯ ಸಿಬ್ಬಂದಿಗಳು ಸೇರಿ ಅವುಗಳನ್ನು ನೀರಿನ ಟಬ್ಬುಗಳಲ್ಲಿ ಒಂದೊAದಾಗಿ ಸಂಗ್ರಹಿಸಿದರು. ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಆಮೆ ಮರಿಗಳನ್ನು ಸಮುದ್ರಕ್ಕೆ ಸೇರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಾಸರಕೋಡ ಕಡಲ ತೀರದ ಸುಂದರ ಪರಿಸರವನ್ನು ವೀಕ್ಸೀಸಿ ತಮ್ಮ ಸಂತೋಷವನ್ನು ಹಂಚಿಕೊAಡ ಅವರು ಮುಂದಿನ ಪೀಳಿಗೆಗಾಗೀಯಾದರೂ ಇಂತಹ ಸ್ವಚ್ಛ ಸುಂದರ ಪರಿಸರವನ್ನು ಉಳಿಸಿಕೊಳ್ಳಬೇಕು. ಎಂದ ಅವರು ಅಳಿವಿನ ಅಂಚಿನಲ್ಲಿರುವ ಅಪರೂಪದ ರಿಡ್ಲೆ ಜಾತಿಯ ಕಡಲಾಮೆಗಳ ಸಂರಕ್ಷಣೆಗೆ ಈಭಾಗದ ಜನರು ಆಸಕ್ತಿವಹಿಸುತ್ತಿರುವ ಬಗ್ಗೆ ತಮ್ಮ ಸಂತಸ ವ್ಯಕ್ತಪಡಿಸಿದರು. ಉಪಸ್ಥಿತರಿದ್ದ ಎಲ್ಲ ಗಣ್ಯರೊಂದಿಗೆ ಸೇರಿ ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಸೇರಿಸಿ ಸಂಭ್ರಮಿಸಿದರು. ಇದೊಂದು ಅಪರೂಪದ ಉತ್ತಮ ಕಾರ್ಯಕ್ರಮವಾಗಿತ್ತು ಮತ್ತು ಸಮುದ್ರ ಪರಿಸರಕ್ಕೆ ಮಹತ್ತರ ಕೊಡುಗೆ ನೀಡುತ್ತಿರುವ ಅಳಿವಿನ ಅಂಚಿನಲ್ಲಿರುವ ಅಪರೂಪದ ರಿಡ್ಲೆ ಜಾತಿಯ ಕಡಲಾಮೆಗಳ ಮಹತ್ವದ ಬಗ್ಗೆ ಮತ್ತು ಅವುಗಳ ಸಂರಕ್ಷಣೆಯ ಅಗತ್ಯಗಳ ಬಗ್ಗೆ ಕರಾವಳಿ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ನೀಡುವ ಬಗ್ಗೆ ಚಿಂತನೆ ನಡೆದರೆ ಹೆಚ್ಚು ಉಪಯುಕ್ತ ವಾಗಲಿದೆ ಎಂದು ಈ ಸಂದರ್ಭದಲ್ಲಿ ಡಾ. ಶಿವಕುಮಾರ ಮುಗಧಾ ಮಾತನಾಡುತ್ತ ಹೇಳಿದರು. ಕಾಸರಕೋಡ ಟೋಂಕ ಕಡಲತೀರದಲ್ಲಿ ೩೦ಕ್ಕೂ ಹೆಚ್ಚು ಕಡಲಾಮೆಗಳು ಮರಳು ಗೂಡುಗಳಲ್ಲಿ ಇಟ್ಟಿರುವ ಮೊಟ್ಟೆಗಳಿಂದ ಸುಮಾರು ಮೂರು ಸಾವಿರದಷ್ಟು ಕಡಲಾಮೆ ಮರಿಗಳು ಜನಿಸುವ ಸಾಧ್ಯತೆ ಇದ್ದು ಅವುಗಳನ್ನು ವೀಕ್ಷಿಸಲು ಬಯಸುವವರು ಸ್ಥಳೀಯ ಮೀನುಗಾರರನ್ನು ಮತ್ತು ಅರಣ್ಯ ಇಲಾಖೆಯನ್ನು ಹಾಗೂ ಕಡಲ ವಿಜ್ಞಾನಿ ಡಾ.ಪ್ರಕಾಶ ಮೇಸ್ತ ರವರನ್ನು ಸಂಪರ್ಕಿಸಿದರೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
More Stories
ಬಿ.ಎಸ್.ಎಸ್. ಮೈಕ್ರೊ ಪೈನಾನ್ಸ ಲಿಮೆಟಿಡ್ ವತಿಯಿಂದ ಪ್ರವಾಹ ಸಂತ್ರಸ್ಥರಿಗೆ ಪರಿಹಾರ ವಿತರಣೆ
ಮನೆಗೆ ಆಕಸ್ಮಿಕವಾಗಿ ಬೆಂಕಿ
ಹೊನ್ನಾವರದ ಎಸ್.ಡಿ.ಎಂ.ಪದವಿ ಕಾಲೇಜಿನ ಇಂಗ್ಲಿಷ್ ಲಿಟರರಿ ಕ್ಲಬ್ ಆಶ್ರಯದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಕೈಬರಹ ಪುಸ್ತಕ ‘ಬ್ಲೂಮ್’ ಬಿಡುಗಡೆ.