ಚಂದಾವರ ಸೀಮೆಯ ಶ್ರೀ ಹನುಮಂತ ದೇವರ ಪಲ್ಲಕ್ಕಿಯು ದಿನಾಂಕ 8- ಏಪ್ರಿಲ್ ರಿಂದ 18 ಎಪ್ರಿಲ್ 2023 ರಂದು ಹೊಳೆಗದ್ದೆ ಊರಿನ ಆರಾಧ್ಯ ದೇವರಾದ ಶ್ರೀ ಶಾಂತಿಕಾ ಪರಮೇಶ್ವರಿ ದೇವರ ಸನ್ನಿಧಿಯಲ್ಲಿ 10 ದಿನಗಳ ಕಾಲ ವಿರಾಜಮಾನರಾಗಿ ಸದ್ಭಕ್ತರ ಇಷ್ಟಾರ್ಥವನ್ನು ಪೂರೈಸಲಿದೆ.
ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯವರು ದೇವಸ್ಥಾನದ ಆವರಣದಲ್ಲಿ ಸಮಸ್ತ ಹನುಮ ಭಕ್ತರ ಸಭೆ ನಡೆಸಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು. ಆ ಕುರಿತು ಕಾರ್ಯಕ್ರಮದ ಯಶಸ್ವಿಗೆ ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲ ಸದ್ಭಕ್ತರ ಅಭಿಪ್ರಾಯಗಳನ್ನು ಪಡೆಯಲಾಯಿತು.
ಎ. ಆರ್. ಭಟ್ ರವರು ಪ್ರಾಸ್ತಾವಿಕ ಮಾತನಾಡಿ, 12 ವರ್ಷಗಳ ನಂತರ ಚಂದಾವರ ಸೀಮೆಯ ಶ್ರೀ ಹನುಮಂತ ದೇವರು ಸಕಲ ಜೀವಿಗಳಿಗೆ ಆಶ್ರಯದಾತನಾದ ಮುಖ್ಯಪ್ರಾಣನ ಆಗಮನ ಆಗುತ್ತಿದೆ. ಈ ಕಾರ್ಯಕ್ರಮ ಸಾಂಗವಾಗಿ ನೆರವೇರಲು ಸಾಕಷ್ಟು ಪೂರ್ವ ತಯಾರಿ ಆಗಬೇಕಾಗಿದೆ ಎಂದರು.
ಸೇವಾ ಸಮಿತಿಯ ಪ್ರಮುಖರಾದ ಸಚಿನ ನಾಯ್ಕರವರು ಮಾತನಾಡಿ, ಶ್ರೀ ಹನುಮಂತ ದೇವರ ಪಲ್ಲಕ್ಕಿ ಉತ್ಸವ ಇಡೀ ಊರಿಗೆ ಗೌರವ ತರುವಂತ ಧಾರ್ಮಿಕ ಕಾರ್ಯಕ್ರಮವಾಗಿದೆ. ಶ್ರೀ ದೇವರು ಇಲ್ಲಿಂದ ಹೊರಡುವ ಸಂದರ್ಭದಲ್ಲಿ ನಾವೆಲ್ಲರೂ ಸೇರಿ ನಿರ್ವಹಿಸಬೇಕಾದ ಜವಾಬ್ದಾರಿಗಳ ಕುರಿತು ತಿಳಿಸಿ, ಆರ್ಥಿಕ ಸಹಾಯಕ್ಕೆ ಪ್ರತಿಯೊಬ್ಬರು ಮುಂದಾಗಬೇಕು ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಸೇವಾ ಸಮಿತಿಯ ಪ್ರಮುಖರಾದ ಎಸ್. ಟಿ. ನಾಯ್ಕ್ ಮಾತನಾಡಿ, ಯಾವುದೇ ಸಮಾಜದ ಪೂಜೆ ಆದರೂ ಎಲ್ಲಾ ಸಮಾಜದವರು ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕಾದ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇಡೀ ಸಮಾಜವು ಸೇರಿ ಮಾಡುವ ಕೆಲಸದಲ್ಲಿ ಯಾರಿಂದಲೋ ಲೋಪವಾದರೆ ತಕ್ಷಣ ಸಂಬAಧಿಸಿದವರೊAದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಹತ್ತು ದಿನಗಳ ಕಾಲ ನಡೆಯುವ ಪ್ರಸಾದ ಭೋಜನ ತಯಾರಿಸುವ ಪಾಕತಜ್ಞ ಲಕ್ಕಣ್ಣ ಭಟ್ ಅವರು ಮಾತನಾಡಿ, ಊಟದ ವ್ಯವಸ್ಥೆಯಲ್ಲಿ ಆಗುವ ತೊಂದರೆಗಳಿಗೆ ಎಲ್ಲರೂ ಸ್ಪಂದಿಸಿ ಗೌರವದಿಂದ ಪ್ರಸಾದ ಭೋಜನ ಆಗಬೇಕು. ಎರಡು ದಿನ ಮೊದಲು ಆ ಸಮಾಜದವರು ಊಟ ಮಾಡುವ ಜನರ ಲೆಕ್ಕ ಹಾಗೂ ಪ್ರಸಾದ ಭೋಜನದಲ್ಲಿ ಯಾವೆಲ್ಲ ಐಟಂಗಳು ಇರಬೇಕು ಎಂದು ತಿಳಿಸಬೇಕು ಎಂದರು.
ಸಮಿತಿಯ ಪ್ರಮುಖರಾದ ರಾಮದಾಸ ಪೈ, ಜೆ.ಕೆ.ನಾಯ್ಕ ಖರ್ಚು ವೆಚ್ಚ ಮತ್ತು ದಾನಿಗಳಿಂದ ಸಂಗ್ರಹವಾದ ಹಣದ ಲೆಕ್ಕಾಚಾರ ನೀಡಿದರು.
ಶ್ರೀ ಹನುಮಂತ ದೇವರ ಪಲ್ಲಕ್ಕಿ ಉತ್ಸವದಲಿ ಭಕ್ತ ಮಹಾಜನರು ತಮ್ಮ ಸೇವೆಯನ್ನು ಉಚಿತವಾಗಿ ನೀಡುವುದಾಗಿ ಸಭೆಗೆ ತಿಳಿಸಿದರು. ಪಲ್ಲಕ್ಕಿಯೊಂದಿಗೆ ಬರುವ ಎಲ್ಲಾ ಭಕ್ತಮಹಾಜನರಿಗೆ ಪಾನಕದ ವ್ಯವಸ್ಥೆಯನ್ನು ಉಚಿತವಾಗಿ ಸೇವಾ ರೂಪದಲ್ಲಿ ನೀಡುವುದಾಗಿ ಜಗದೀಶ ಭಂಡಾರಿ, ಪೆಂಡಾಲ್, ಕುರ್ಚಿ, ಟೇಬಲ್, ಲೈಟಿಂಗ್ ವ್ಯವಸ್ಥೆಯನ್ನು ಅತಿ ಕಡಿಮೆ ಖರ್ಚಿನಲ್ಲಿ ಅಂದರೆ 50,000 ರೂಪಾಯಿ ವೆಚ್ಚದಲ್ಲಿ ನಿರ್ವಹಿಸುವ ಬಗ್ಗೆ ಸಚಿನ ನಾಯ್ಕ, ಊಟಕ್ಕೆ ಬೇಕಾದ ಪ್ಲೇಟು, ಹಾಗೂ ಇನ್ನುಳಿದ ಅಡುಗೆಸಾಮಾನಿನ ಪರಿಕರಗಳನ್ನು ಉಚಿತವಾಗಿ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನದ ಆಡಳಿತ ಮಂಡಳಿಯವರು ನೀಡುವುದಾಗಿಯೂ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊAಡಿರುವ ಪ್ರಾರಂಭದ ಮುಖಮಂಟಪದ ಖರ್ಚನ್ನು ಮೋಹನ ಕಾಮತ್ ಮತ್ತು ಅನಂತ ಕಾಮತ ಕುಟುಂಬದವರು ನೀಡುವುದಾಗಿಯೂ, ಇನ್ನುಳಿದ ಎರಡು ಮುಖ ಮಂಟಪ ಮತ್ತು ಅಲ್ಲಲ್ಲಿ ಪ್ರಮುಖ ಸ್ತಂಭಗಳನ್ನು ನಿರ್ಮಿಸುವ ಜವಾಬ್ದಾರಿಯನ್ನು ನಾಮಧಾರಿ ಸಮಾಜದ ಸೇವಾ ಸಮಿತಿಯ ಭಕ್ತರು ನಡೆಸಿಕೊಡುವುದಾಗಿ ತಿಳಿಸಿದರು.
ಹಾಲಕ್ಕಿ ಸಮಾಜದವರಿಂದ ಮೆರವಣಿಗೆ ಸಂದರ್ಭದಲ್ಲಿ ಚಂಡೆ ವಾದಕರಿಗೆ ತಗಲುವ ಖರ್ಚನ್ನು ಮೆರವಣಿಗೆ ಸಂದರ್ಭದಲ್ಲಿ ಆಗಮಿಸಿದ ಭಕ್ತ ಮಹಾಜನರಿಗೆ ಬೆತ್ತಗೇರಿಯ ಶ್ರೀಧರ್ ಭಟ್ಟರವರು ಅವಲಕ್ಕಿ ಪ್ರಸಾದವನ್ನು ಸೇವಾ ರೂಪದಲ್ಲಿ ನೀಡುವುದಾಗಿ ತಿಳಿಸಿದರು.
ರಸ್ತೆಯ ಎರಡು ಪಕ್ಕದಲ್ಲಿ ಪತಾಕೆ ಮತ್ತು ಬಾವುಟಕ್ಕಾಗಿ ತಗಲುವ ಖರ್ಚನ್ನು ಸಾರ್ವಜನಿಕರಿಂದ ಸಂಗ್ರಹಿಸಿದ ದೇಣಿಗೆಯಿಂದ ಬರಿಸುವುದಾಗಿ ಸಭೆಗೆ ತಿಳಿಸಿದರು.
ಹತ್ತು ದಿನಗಳ ಕಾಲ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಕೌಂಟರ್ ಅನ್ನು ತೆರೆದು ಭಕ್ತರಿಗೆ ಮಾಹಿತಿ ಮತ್ತು ದೇಣಿಗೆಯನ್ನು ಸಂಗ್ರಹಿಸುವಲ್ಲಿ ಸೇವಾ ಸಮಿತಿಯ ಪ್ರಮುಖರಾದ ಜೆ.ಕೆ.ನಾಯ್ಕ ಮತ್ತು ದಯಾನಂದ ದೇಶ ಭಂಡಾರಿ ಅವರು ನಡೆಸಿಕೊಡುವುದಾಗಿ ಸಭೆಗೆ ತಿಳಿಸಿದರು.
ವೇದಿಕೆಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಯರಾಮ್ ಭಟ್, ಸಮಾಜದ ಪ್ರಮುಖರಾದ ನಾಗರಾಜ ಗೌಡ, ಸುಭಾಷ್ ರೇವಣಕರ್, ಎಸ್ ಟಿ ನಾಯ್ಕ, ರಾಮದಾಸ ಪೈ, ಪಾಂಡುರAಗ ಪಟಗಾರ, ಮಾದೇವ ಹರಿಕಾಂತ್ರ, ನಾರಾಯಣ ವೈದ್ಯ, ಎ.ಆರ್. ಭಟ್, ದೇವೇಂದ್ರ ಶೇರುಗಾರ, ಸಚಿನ ನಾಯ್ಕ, ಪ್ರೊ. ಡಿ. ಡಿ.ಭಟ್,ವಿ.ಜಿ.ಹೆಗಡೆ ಮುಂತಾದವರು ಉಪಸ್ಥಿತರಿದ್ದರು. ಎಲ್ಲಾ ಸಮಾಜದ ಹಲವು ಹನುಮ ಭಕ್ತರು ಉಪಸಿದ್ಧರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವುದಾಗಿ ತಿಳಿಸಿದರು.
ಹತ್ತು ದಿನಗಳ ಕಾಲ ನಡೆಯುವ ಶ್ರೀ ಹನುಮಂತ ದೇವರ ಪಲ್ಲಕ್ಕಿ ಉತ್ಸವದ ಮೆರವಣಿಗೆಯು ಹೊಳೆಗದ್ದೆ, ನಾಯ್ಕರಕೇರಿ, ಅಂಬ್ಲೆಕೇರಿ, ಮುಡ್ಕಳಿ,ಗುಡಬಳ್ಳಿ, ಹರನೀರು, ಸುವರ್ಣಗದ್ದೆ, ಹೊರಭಾಗ, ಬೆತ್ತಗೇರಿ, ಹರಿಜನಕೇರಿ ಮುಂತಾದ ಪ್ರದೇಶಗಳಲ್ಲಿ ಸಂಚರಿಸಲಿದೆ.
ಕಷ್ಟ ಪರಿಹಾರಕ್ಕಾಗಿ ಪ್ರಶ್ನೆ ಕೇಳುವವರು ಹಾಗೂ ಶ್ರೀ ಮಾರುತಿ ದೇವರ ಪಲ್ಲಕ್ಕಿಯನ್ನು ಮನೆಗೆ ಕರೆಸಿಕೊಳ್ಳುವ ಭಕ್ತರು ಮೊದಲೇ ಪಾವತಿಯನ್ನು ಪಡೆಯತಕ್ಕದ್ದು ಎಂದು ತಿಳಿಸಲಾಗಿದೆ.
More Stories
ಬಿ.ಎಸ್.ಎಸ್. ಮೈಕ್ರೊ ಪೈನಾನ್ಸ ಲಿಮೆಟಿಡ್ ವತಿಯಿಂದ ಪ್ರವಾಹ ಸಂತ್ರಸ್ಥರಿಗೆ ಪರಿಹಾರ ವಿತರಣೆ
ಮನೆಗೆ ಆಕಸ್ಮಿಕವಾಗಿ ಬೆಂಕಿ
ಹೊನ್ನಾವರದ ಎಸ್.ಡಿ.ಎಂ.ಪದವಿ ಕಾಲೇಜಿನ ಇಂಗ್ಲಿಷ್ ಲಿಟರರಿ ಕ್ಲಬ್ ಆಶ್ರಯದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಕೈಬರಹ ಪುಸ್ತಕ ‘ಬ್ಲೂಮ್’ ಬಿಡುಗಡೆ.