September 16, 2024

Bhavana Tv

Its Your Channel

ಕುಮಟಾ-ಹೊನ್ನಾವರ ವಿಧಾನಸಭಾಕ್ಷೇತ್ರ ನಿವೇದಿತ್ ಆಳ್ವಾ ಸ್ಪರ್ಧೆಗೆ ಮುಸ್ಲಿಂ ಜಮಾತ್‌ನಿಂದ ತೀವ್ರ ವಿರೋಧ

ಹೊನ್ನಾವರ: ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಗಲೂ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಪ್ರಯತ್ನದಲ್ಲಿರುವ ನಿವೇದಿತ್ ಆಳ್ವಾರವರಿಗೆ ಹೊನ್ನಾವರ ಮುಸ್ಲಿಂ ಜಮಾತ್ ಅಧ್ಯಕ್ಷ ಆಝಾದ ಅಣ್ಣಿಗೇರಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಅವರು ಈ ಕುರಿತಂತೆ ಕರ್ನಾಟಕ ಪ್ರದೇಶಕಾಂಗ್ರೆಸ್ ಸಮಿತಿಯ ಉಸ್ತುವಾರಿಯಾಗಿರುವ ಎ.ಐ.ಸಿ.ಸಿ.ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾರಿಗೆ ಪತ್ರ ಬರೆದು, ನಿವೇದಿತ್ ಆಳ್ವಾ ಅವರಿಗೆ ಪಕ್ಷದ ಟಿಕೇಟ್ ನೀಡದೇ,ಕುಮಟಾ-ಹೊನ್ನಾವರ ಭಾಗದಲ್ಲಿ ಜನಪ್ರಿಯರಾಗಿರುವ ಶಿವಾನಂದ ಹೆಗಡೆಯವರಿಗೆ ಪಕ್ಷದ ಟಿಕೇಟ್ ನೀಡುವಂತೆ ಆಗ್ರಹಿಸಿದ್ದಾರೆ. ನಿವೇದಿತ್ ಆಳ್ವಾ ಕುಮಟಾ-ಹೊನ್ನಾವರ ವಿಧಾನಸಭಾಕ್ಷೇತ್ರಕ್ಕೆ ಹೊಸಬರಾಗಿದ್ದು, ಅವರಿಗೆ ಯಾವುದೇ ರಾಜಕೀಯ ಅನುಭವವಿಲ್ಲಾ ಮತ್ತು ಈ ಭಾಗದಲ್ಲಿ ಸಾರ್ವಜನಿಕರ ಸಂಪರ್ಕವೂ ಇಲ್ಲಾ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ನಿವೇದಿತ್ ಆಳ್ವಾರಂತಹ ಅನುಭವವಿಲ್ಲದವರನ್ನು ಕಾಂಗ್ರೆಸ್ ಪಕ್ಷ ಅಭ್ಯರ್ಥಿಯಾಗಿ ಘೋಷಿಸಿದರೇ, ಇದರಿಂದ ಭಾರತೀಯ ಜನತಾ ಪಕ್ಷ ಜಯಗಳಿಸುವುದರಲ್ಲಿ ಯಾವುದೇ ಸಂದೇಹವಿಲ್ಲಾ ಎಂದಿದ್ದಾರೆ. ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಆಯ್ಕೆಯಾಗುವುದನ್ನು ತಪ್ಪಿಸಬೇಕಾದರೇ, ಹೊನ್ನಾವರ ಮುಸ್ಲಿಂ ಜಮಾತ್ ಅನಿವಾರ್ಯವಾಗಿ ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿಗೆ ಬೆಂಬಲ ಸೂಚಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಆದುದರಿಂದ ಸ್ಥಳೀಯವಾಗಿ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಶಿವಾನಂದ ಹೆಗಡೆಯವರಿಗೆ ಕಾಂಗ್ರೆಸ್ ಪಕ್ಷ ಟಿಕೇಟ್ ಘೋಷಿಸಿದ್ದಲ್ಲಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಹೊನ್ನಾವರ ಮುಸ್ಲಿಂ ಜಮಾತ್ ಸಂಪೂರ್ಣ ಬೆಂಬಲಿಸುವುದಾಗಿ ರಣದೀಪ್ ಸಿಂಗ್ ಸುರ್ಜೆವಾಲಾರಿಗೆ ಬರೆದ ಪತ್ರದಲ್ಲಿ ಜಮಾಲ್ ಆಝಾದ ಅಣ್ಣಿಗೇರಿ ಆಗ್ರಹಿಸಿದ್ದಾರೆ.

error: