September 16, 2024

Bhavana Tv

Its Your Channel

ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಸಂಸ್ಕೃತಿ ಸಂಸ್ಕಾರವನ್ನು ದಾಟಿಸುವ ಮಹತ್ಕಾರ್ಯಮಾತೆಯರಿಂದಾಗುತ್ತದೆ – ಡಾ.ನಿರ್ಮಲಾನಂದನಾಥ ಸ್ವಾಮೀಜಿ.

ಹೊನ್ನಾವರ ತಾಲ್ಲೂಕಿನ ತಾಲ್ಲೂಕು ಒಕ್ಕಲಿಗರ ಸಂಘ ಹೊನ್ನಾವರ ಕೆಳಗಿನೂರು ಸಭಾ ಮಂಟಪದಲ್ಲಿ ಆಯೋಜಿಸಲಾಗಿದ್ದ ಒಕ್ಕಲು ಉತ್ಸವ ಕಾರ್ಯಕ್ರಮ ದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಡಾ|| ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಸಂಸ್ಕೃತಿ ಸಂಸ್ಕಾರವನ್ನು ದಾಟಿಸುವ ಮಹತ್ವದ ಕಾರ್ಯ ಮಾತೆಯರಿಂದಾಗುತ್ತದೆ. ಹೊನ್ನಾವರ ಒಕ್ಕಲು ಉತ್ಸವದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ದೊಡ್ಡ ಪ್ರಮಾಣದಲ್ಲಿರುವುದು ಸಮಾಜದ ಸರ್ವತೋಮುಖ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಸಂಘ ಸಂಸ್ಥೆಗಳಲ್ಲಿ ಜವಾಬ್ಧಾರಿಯುತ ಸ್ಥಾನದಲ್ಲಿರುವವರ ಒಳ್ಳೆಯ ಕೆಲಸಗಳಿಗೆ ಇಂಬು ನೀಡುವ ಪ್ರಯತ್ನವನ್ನು ಸಮಾಜಬಾಂಧವರು ಮಾಡಬೇಕು. ಯಾರೂ ಯಾರದೂ ಕಾಲೆಳೆಯುವ ಕೆಲಸ ಮಾಡಬಾರದು ನಿಮ್ಮ ನಿಮ್ಮ ಸಮಯ ಬಂದಾಗ ಅವಕಾಶ ಸಿಕ್ಕೇ ಸಿಗುತ್ತದೆ ಎಂದು ಕಿವಿಮಾತು ಹೇಳಿದರು. ಗಾಯನ, ನೃತ್ಯ ಆಟೋಟಗಳು ಮನಸ್ಸು ಮತ್ತು ದೇಹದ ಜಾಢ್ಯವನ್ನು ಕಳೆದು ಮೈಮನಸ್ಸನ್ನು ಉಲ್ಲಾಸಿತಗೊಳಿಸುತ್ತದೆ. ಆ ನಿಟ್ಟಿನಲ್ಲಿ ಒಕ್ಕಲು ಉತ್ಸವ ಉತ್ತಮ ಪರಿಕಲ್ಪನೆ ಎಂದು ಶ್ಲಾಘಿಸಿದರು.
ಬದುಕನ್ನು ಆನಂದದಿAದ ಜೀವಿಸಿ.

ಭಗವಂತ ಈ ಬದುಕನ್ನು ಆನಂದದಿ0ದ ಕಳೆಯುವುದಕ್ಕೆ ಅಗತ್ಯವಾದ ಎಲ್ಲಾ ಅನುಕೂಲಗಳನ್ನು ನಿಸರ್ಗದಲ್ಲಿಯೇ ಇಟ್ಟಿದ್ದಾನೆ. ನಮ್ಮ ಬಳಿ ಅದು ಇಲ್ಲ ಇದು ಇಲ್ಲ ಎಂದು ಕೊರಗಿನಲ್ಲಿ ಜೀವನ ಕಳೆಯುವುದಕ್ಕಿಂತ ನಮ್ಮಲ್ಲಿರುವ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಂಡು ಬದುಕನ್ನು ಆನಂದಮಯವಾಗಿ ಕಳೆಯಬೇಕು. ಮಕ್ಕಳಿಗೆ ಶಿಕ್ಷಣ ಸಂಸ್ಕಾರ ಕೊಡುವಂತ ಕೆಲಸ ನಿತ್ಯ ನಿರಂತರವಾಗಿ ನಡೆಯುತ್ತಿರಲಿ ಎಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ಪೂಜ್ಯ ಶ್ರೀ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿಯವರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬ್ರಹ್ಮಚಾರಿಗಳಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿದ್ದರು ರಾಜ್ಯ ಚುಂಚಾದ್ರಿ ಮಹಿಳಾ ಪ್ರತಿಷ್ಟಾನ ವೇದಿಕೆ ಅಧ್ಯಕ್ಷರಾದ ಭಾರತಿ ಶಂಕರ್ ಅವರು ಮಾತನಾಡಿ. ಮಹಿಳೆಯರ ಸಂಘಟನೆ ಮತ್ತು ಸ್ವಾವಲಂಭನೆಗೆ ಶ್ರೀಮಠ ಟೊಂಕಕಟ್ಟಿ ನಿಂತಿದೆ ಪೂಜ್ಯ ಸ್ವಾಮೀಜಿಗಳು ಜಿಲ್ಲೆವಾರು ಪ್ರಾತಿನಿಧ್ಯ ನೀಡಿ ಆಡಳಿತ ಮಂಡಳಿ ರಚನೆ ಮಾಡಿ ಚುಂಚಾದ್ರಿ ಮಹಿಳಾ ಪ್ರತಿಷ್ಠಾನವನ್ನು ರಚಿಸಿಕೊಟ್ಟಿದ್ದಾರೆ, ಮುಂದಿನ ದಿನಗಳಲ್ಲಿ ಶ್ರೀಮಠದ ನೆರವಿನಿಂದ ಮಹಿಳೆಯರಿಗೆ ಸ್ವ ಉಧ್ಯೋಗ ನೀಡಲು ಬೇಕಾಗುವ ಕಾರ್ಯಗಳನ್ನು ಮಹಿಳಾ ಪ್ರತಿಷ್ಠಾನದ ಮೂಲಕ ಮಾಡಲಾಗುವುದು ಎಂದರು. ಭೈರವಿ ಮಹಿಳಾ ಸಹಕಾರಿ ಸಮಘದ ಅಧ್ಯಕ್ಷರಾದ ಶ್ರೀಮತಿ ಶಾಂತಿ ಮಾದೇವ ಗೌಡ ಇವರು ಮಾತನಾಡಿ. ಸಹಕಾರ ಸಮಘ ರಚೆನೆಗೆ ನೆರವಾದವರಿಗೆ ಧನ್ಯವಾದ ತಿಳಸಿದರು ಮತ್ತು ಸಂಘದ ಆರ್ಥಿಕ ಪ್ರಗತಿಯನ್ನು ವವಿರಿಸದರು. ಸಂಘದ ಅಡಿಯಲ್ಲಿ ರಚನೆಯಾದ 80 ಸ್ವ ಸಹಾಯ ಸಮಘಗಳ ಸದಸ್ಯರಿಗೆ ಸಂಘದ ಉದ್ದೇಶ ಮತ್ತು ಯೋಜನೆಗಳನ್ನು ತಿಳಿಸಿದರು.
ಹೊನ್ನಾವರ ತಾಲೂಕಾ ಒಕ್ಕಲಿಗರ ಸಂಘ ಮತ್ತು ಬೈರವಿ ಮಹಿಳಾ ಸಹಕಾರಿ ಸಂಘ ಇವರು ನಡೆಸಿದ ಒಕ್ಕಲು ಉತ್ಸವ ಕಾರ್ಯಕ್ರಮದ ದಿನಾಂಕ 07-04-2023 ರಂದು ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಿತು. ಎಸ್.ಎಸ್.ಎಲ್.ಸಿ. ಶೇ 90 ಮತ್ತು ಪಿ.ಯು.ಸಿ. ಯಲ್ಲಿ ಶೇ 85 ಕ್ಕಿಂತ ಅಧಿಕ ಅಂಕ ಗಳಿಸಿದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸ್ಪರ್ಧಾ ಕಾರ್ಯಕ್ರಮದಲ್ಲಿ ವಿಜೇತ ವಿಧ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಬಹುಮಾನ ವಿತರಣೆ, ವಿವಿಧ ರಂಘದಲ್ಲಿ ಸಾಧನೆ ಮಾಡಿದ 7 ಸಾಧಕರಿಗೆ ಸನ್ಮಾನ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶ್ರೀ ಗಣಪತಿ ಗೌಡ ಮತ್ತು ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕರುಗಳಾದ ಶ್ರೀ ಜಿ.ಆರ್.ಗೌಡ, ಶ್ರೀ ಜಿ.ಕೆ.ಗೌಡ ಶ್ರೀ ಟಿ.ಆರ್.ಗೌಡ ಮತ್ತು ನಿವೃತ್ತ ಸೈನಿಕ ಶ್ರೀ ತಿಮ್ಮಪ್ಪ ಗೌಡ ಇವರನ್ನು ಸನ್ಮಾನಿಸಲಾಯಿತು. ಭೈರವಿ ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರುಗಳಿಂದ ಕರಕುಶಲ ವಸ್ಥು ಪ್ರದರ್ಶನ, ರಂಗೋಲಿ ಬಿಡಿಸುವದು ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ನಂತರ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಒಟ್ಟೂ 20 ತಂಡಗಳು ಭಾಗವಹಿಸಿ ಜಲವಳ್ಳಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ವೇದಿಕೆಯಲ್ಲಿ, ತಾಲೂಕು ಒಕ್ಕಲಿಗರ ಸಂಘ ಹೊನ್ನಾವರ ಅಧ್ಯಕ್ಷರಾದ ಶ್ರೀ ತಿಮ್ಮಪ್ಪ ಜಿ. ಗೌಡ, ಭೈರವಿ ಮಹಿಳಾ ಸಹಕಾರಿ ಸಂಘ ಹೊನ್ನಾವರ ಅಧ್ಯಕ್ಷರಾದ ಶ್ರೀಮತಿ ಶಾಂತಿ ಮಾದೇವ ಗೌಡ, ಶ್ರೀ ಶಂಕರ ಗೌಡ ಹೆಸ್ಕಾಂ ಹೊನ್ನಾವರ, ಶ್ರೀ ಕಿರಣ್ ಕುಮಾರ್ ಮಂಗಳೂರ, ಒಕ್ಕಲಿಗರ ಯುವ ವೇದಿಕೆ ಹೊನ್ನಾವರ ಅಧ್ಯಕ್ಷರಾದ ಶ್ರೀ ವಸಂತ ಗೌಡ, ರಾಜ್ಯ ಚುಂಚಾದ್ರಿ ಮಹಿಳಾ ಪ್ರತಿಷ್ಠಾನದ ನಿರ್ದೇಶಕರಾದ ಶ್ರೀಮತಿ ಜಯಂತಿ ಬಾಲಚಂದ್ರ ಗೌಡ ಮತ್ತು ಶ್ರಿಮತಿ ಮಂಜುಳಾ ಮತ್ತು ಗಣ್ಯರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು. ಸಂಘದ ನಿರ್ದೇಶಕರಾದ ಶ್ರೀ ಲಕ್ಷಿö್ಮÃಕಾಂತ ಗೌಡ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಗೌಡ ಪ್ರಾಸ್ತಾವಿಕ ಮತ್ತು ಕಾರ್ಯಕ್ರಮ ನಿರ್ವಹÀಣೆಯನ್ನು ಸಂಘದ ಖಜಾಂಚಿ ಶ್ರೀ ದಯಾನಂದ ಗೌಡ ಮತ್ತು ಶಿಕ್ಷಕರಾದ ಶ್ರೀ ಜಿ.ಆಯ್.ಗೌಡ, ಶ್ರೀ ರಾಘವೇಂಧ್ರ ಗೌಡ, ಶ್ರೀ ಎಂ.ಎನ್.ಗೌಡ, ಶ್ರೀ ಮಂಜುನಾಥ ಗೌಡ, ಶ್ರೀ ಎಸ್. ಎಂ. ಗೌಡ, ಶ್ರೀ ಜಗದೀಶ ಗೌಡಇವರು ನಡೆಸಿಕೊಟ್ಟರು.

error: