September 16, 2024

Bhavana Tv

Its Your Channel

ಕುಮಟಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಪ್ಲಸ್ ಆಗಲು ಕುಮಟಾದಲ್ಲಿ ಶಿವಾನಂದ ಹೆಗಡೆಯವರಿಗೆ ಟಿಕೆಟ್ ನೀಡಿ?

ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ ಜಿಲ್ಲೆಯಲ್ಲಿ ಒಂದು ಸ್ಥಾನ ಹವ್ಯಕ ಬ್ರಾಹ್ಮಣರಿಗೆ ನೀಡುತ್ತಾ ಬಂದಿದ್ದು ಈ ಸಲವೂ ಕಾಂಗ್ರೆಸ್‌ಗೆ ಕುಮಟಾ ಹೊನ್ನಾವರ ಕ್ಷೇತ್ರದಲ್ಲಿ ಅನುಕೂಲತೆ ದೃಷ್ಟಿಯಿಂದ ಹಿರಿಯ ಮುಖಂಡ. ಸಹಕಾರಿ ಧುರೀಣ, ಜಿಲ್ಲಾ ಕಿಸಾನ ಸೆಲ್ ಅಧ್ಯಕ್ಷ ಶಿವಾನಂದ ಹೆಗಡೆಯವರಿಗೆ ಅವಕಾಶ ನೀಡಲು ಹವ್ಯಕ ಸಮಾಜದ ಮುಖಂಡ ಮಾಜಿ ಗ್ರಾ.ಪಂ.ಸದಸ್ಯ ಆರ್.ಕೆ.ಹೆಗಡೆ ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಉಮೇಶ ಭಟ್ಟರಿಗೆ. ಶಿವರಾಮ ಹೆಬ್ಬಾರಗೆ ಎರಡು ಸಲ ನೀಡಿದೆ. ಬಿಜೆಪಿಯಂತೂ ಶಿರಸಿಯಲ್ಲಿ ವಿಶ್ವೇಶ್ವರ ಹೆಗಡೆ, ಯಲ್ಲಾಪುರದಲ್ಲಿ ಹೆಬ್ಬಾರರಿಗೆ ನೀಡಲಿದೆ. ಬಿಜೆಪಿಯವರು ಸೇಪ್ ಆಗಲಿದ್ದಾರೆ. ಆದರೆ ಕಾಂಗ್ರೆಸಿಗರಿಗೆ ಒಂದು ಸೀಟಾದರೂ ಕೊಡಲೇ ಬೇಕಾಗಿದೆ. ಶಿರಸಿಯಲ್ಲಿ ನಾಮಧಾರಿ ಸಮಾಜದ ಭೀಮಣ್ಣ ನಾಯ್ಕರಿಗೆ, ಯಲ್ಲಾಪುರ ಪಾಟೀಲರಿಗೆ ಕೊಟ್ಟಿರುವದರಿ೦ದ ಕುಮುಟಾ ಕ್ಷೇತ್ರ ಮಾತ್ರ ಕಾಂಗ್ರೆಸ್ಸಿಗೆ ಇರುವ ಕೊನೆ ಅವಕಾಶ ಆಗಲಿದೆ. ಶಿವಾನಂದ ಹೆಗಡೆಯವರಿಗೆ ಅವಕಾಶ ನೀಡಿದರೆ ಕುಮಟಾ ಕಾಂಗ್ರೇಸ್‌ಗೆ ಪ್ಲಸ್ ಆಗಲಿದೆ.

ಸಮರ್ಥ ನಾಯಕರು, ಜಿ ಪಂ ಸದಸ್ಯರಾಗಿ’ ಜಿಲ್ಲಾ ಕಿಸಾನ ಸೆಲ್ ಅಧ್ಯಕ್ಷರಾಗಿ ಜಿಲ್ಲಾದ್ಯಂತ ಪಕ್ಷ ಸಂಘಟನೆ ಮಾಡಿ ವಿಶೇಷವಾಗಿ ಹೊನ್ನಾವರ ಭಾಗದಲ್ಲಿ ಕಾಂಗ್ರೇಸನ್ನು ಉಳಿಸಿದ್ದಾರೆ, ಕ್ಷೇತ್ರದಲ್ಲಿ ಯಾವದೇ ಭಾಗದಲ್ಲಿ ಜನರಿಗೆ ತೊಂದರೆಯಾದರೆ ಹೋಗಿ ಸಹಾಯಹಸ್ತ ಮಾಡಿ ಮನೆ ಮಾತಾಗಿದ್ದಾರೆ. ಸಹಕಾರಿ ಧುರೀಣರಾಗಿ ಕೆಡಿಸಿಸಿ ನಿರ್ದೇಶಕರಾಗಿ, ಹೊನ್ನಾವರ ಭಾಗದಲ್ಲಿ ಹಲವು ಸಂಸ್ಥೆಗಳಿಗೆ ಜನರಿಗೆ ಸಹಾಯ ಮಾಡುತ್ತ ಬಂದಿದ್ದಾರೆ. ಹವ್ಯಕ ಸಮುದಾಯದ ಮತಗಳು ಕುಮಟಾ ಹೊನ್ನಾವರ ಕ್ಷೇತ್ರದಲ್ಲಿ ಸುಮಾರು ೩೫,೦೦೦- ೪೦.೦೦೦ದಷ್ಟು ಇದ್ದು ಶಿವಾನಂದ ಹೆಗಡೆ ಅವರು ಎಲ್ಲ ಸಮುದಾಯದ ಜತೆಗೂ ಉತ್ತಮ ಭಾಂದವ್ಯ ಹೊಂದಿರುವುದರಿAದ ಬಿಜೆಪಿಗೆ ಬಹಳ ಸವಾಲಾಗಲಿದೆ.
ಜಿಲ್ಲೆಯಲ್ಲಿ ಅಧಿಕ ವಿಧಾನಸಭಾ ಕ್ಷೇತ್ರಗಳಲ್ಲಿ ಹವ್ಯಕರೇ ನಿರ್ಣಾಯಕ ಮತದಾರರಾಗಿದ್ದಾರೆ. ಯಾವುದೇ ಪಕ್ಷದಲ್ಲಿ ಉತ್ತಮ ಅಭ್ಯರ್ಥಿಗಳನ್ನು ನಿಲ್ಲಿಸಿದಲ್ಲಿ ಅಂತಹ ಅಭ್ಯರ್ಥಿಗಳನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಕಾಂಗ್ರೆಸ್ ಈ ಹಿಂದೆ ಹವ್ಯಕ ಸಮಾಜದವರನ್ನು ಕಣಕ್ಕಿಳಿಸಿದಾಗ ನಿರ್ಣಾಯಕ ಮತದಾರರಾಗಿ ಬೆಂಬಲಿಸಿದ್ದಾರೆ. ಜಿಲ್ಲೆಯಲ್ಲಿ ಸುಮಾರು ೨ ಲಕ್ಷ ಹವ್ಯಕ ಮತದಾರರಿದ್ದು , ಕಾಂಗ್ರೆಸ್ ಪಕ್ಷ ಇಡೀ ರಾಜ್ಯದಲ್ಲಿ ಒಂದೇ ಒಂದು ಹವ್ಯಕ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮನಸ್ಸು ಮಾಡದಿರುವುದು ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ. ಕೇವಲ ಜಿಲ್ಲಾ ಪಂಚಾಯತಿ ತಾಲೂಕ ಪಂಚಾಯತಿಗಳಿಗೆ ಮಾತ್ರ ಹವ್ಯಕ ಸಮಾಜ ಸೀಮಿತವಾಗಿದೆ. ಕುಮಟಾ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದ ಚುನಾವಣೆ ವರೆಗೆ ಗೆಲವು ಸಾಧಿಸಿದ ಸಮಾಜದ ಅಭ್ಯರ್ಥಿ ಶಿವಾನಂದ ಹೆಗಡೆಯವರು ಕುಮಟಾ ಕ್ಷೇತ್ರದ ಪ್ರಭಲ ಆಕಾಂಕ್ಷಿಯಾಗಿದ್ದಾರೆ. ಎಲ್ಲಾ ಸಮಾಜದ ಮತವನ್ನು ಪಡೆದು ಆಯ್ಕೆಯಾಗುತ್ತಿರುವ ಸಮಾಜದ ಮುಖಂಡರಾದ ಶಿವಾನಂದ ಹೆಗಡೆಯವರಿಗೆ ಈ ಬಾರಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಲೆ ಬೇಕು. ಇಲ್ಲವಾದಲ್ಲಿ ಅವರ ಅಭಿಮಾನಿಗಳು ಒಟ್ಟಾಗಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಆರ್.ಕೆ.ಹೆಗಡೆ ಎಚ್ಚರಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಡಾ. ವಿಷ್ಣು ಸಭಾಹಿತ್, ವ್ಯವಸಾಯ ಸೇವಾ ಕೇಂದ್ರದ ಮಾಜಿ ಅಧ್ಯಕ್ಷ ದಯಾನಂದ ಹೆಗಡೆ,ರಾಘವ ಹೆಗಡೆ ಉಪಸ್ಥಿತರಿದ್ದರು.

error: