September 16, 2024

Bhavana Tv

Its Your Channel

ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಿಂದ ಶಿವಾನಂದ ಹೆಗಡೆ ಯವರಿಗೆ ಟಿಕೆಟ್ ಕೊಡುವಂತೆ ಆಗ್ರಹ

ಹಳದಿಪುರದಲ್ಲಿ ಸಭೆ ಸೇರಿದ ಶಿವಾನಂದ ಹೆಗಡೆಯವರ ನೂರಾರು ಅಭಿಮಾನಿಗಳು, ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಿಂದ ಶಿವಾನಂದ ಹೆಗಡೆ ಯವರಿಗೆ ಟಿಕೆಟ್ ಕೊಡುವಂತೆ ಆಗ್ರಹ.

ಹೊನ್ನಾವರ: ಕಿಸಾನ್ ಕಾಂಗ್ರೆಸ್‌ನ ಹೊನ್ನಾವರ ತಾಲೂಕಾ ಅಧ್ಯಕ್ಷ ಹರಿಶ್ಚಂದ್ರ ನಾಯ್ಕ ಮಾತನಾಡಿ ಕುಮಟಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಶಿವಾನಂದ ಹೆಗಡೆಯವರು ೨೫-೩೦ ವರ್ಷದಿಂದ ಕ್ಷೇತ್ರದಾದ್ಯಂತ ಚಿರ ಪರಿಚಿತರಾಗಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಗಟ್ಟಿಯಾಗಿ ನೆಲೆ ನಿಲ್ಲಲು ಕಾರಣರಾಗಿದ್ದಾರೆ. ಯಾವುದೇ ತಾರತಮ್ಯ ಇಲ್ಲದೆ ಉತ್ತಮ ಕೊಡುಗೆ ನೀಡಿದ್ದಾರೆ. ಅವರಲ್ಲಿ ಪ್ರಾಮಾಣಿಕತೆ ಇದೆ, ಅವರಿಗೆ ಟಿಕೇಟ್ ಕೊಟ್ಟರೆ ಕಿಸಾನ್ ಸೆಲ್‌ಗು ಒಂದು ಅವಕಾಶ ಸಿಕ್ಕಂತಾಗುತ್ತದೆ. ಜೊತೆಗೆ ಹೊನ್ನಾವರ ಭಾಗಕ್ಕೂ ಒಂದು ಅವಕಾಶ ಸಿಕ್ಕಿದಂತಾಗುತ್ತದೆ.ಅವರಿಗೆ ಟಿಕೆಟ್ ಕೊಟ್ಟರೆ ಮಾತ್ರ ಕುಮಟಾದಲ್ಲಿ ಗೆಲುವು ಸಾದಿಸಲು ಸಾಧ್ಯವಾಗುತ್ತದೆ. ಹೈಕಮಾಂಡ್ ಅವರಿಗೆ ಟಿಕೆಟ್ ನೀಡಲಿ,ನಾವೆಲ್ಲ ಅವರನ್ನು ಗೆಲ್ಲಿಸಿ ಕಳುಹಿಸುತ್ತೇವೆ ಎಂದರು.

ಮಾಜಿ ತಾ. ಪಂ. ಸದಸ್ಯೆ ರೂಪಾ ಗೌಡ ಮಾತನಾಡಿ ಕಾಂಗ್ರೆಸ್ ಪಕ್ಷಕ್ಕಾಗಿ, ಕ್ಷೇತ್ರದ ಜನರ ಒಳಿತಿಗಾಗಿ ಹಗಲು ಇರುಳು ದುಡಿಯುತ್ತಿರುವ ಜಿ. ಪಂ. ಮಾಜಿ ಸದಸ್ಯ, ಜಿಲ್ಲಾ ಕಿಸಾನ್ ಕಾಂಗ್ರೆಸ್ ನ ಅಧ್ಯಕ್ಷರಾದ ಶಿವಾನಂದ ಹೆಗಡೆಯವರಿಗೆ ಕುಮಟಾ ಕ್ಷೇತ್ರದ ಟಿಕೆಟ್ ನೀಡಬೇಕು, ಜಿಪಂ ಸದಸ್ಯರಿದ್ದ ಸಮಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ನಂತರವು ಕೂಡ ಯಾವುದೇ ಕಾರ್ಯಕ್ರಮಕ್ಕೆ ಕರೆದರೆ ತಪ್ಪದೆ ಬಂದು ಸಹಾಯ ಸಹಕಾರ ನೀಡುತ್ತಿದ್ದಾರೆ. ಇಡೀ ಕ್ಷೇತ್ರದಲ್ಲಿ ಜನರ ಮನಸ್ಸು ಗೆದ್ದಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಟಿಕೆಟ್ ಕೊಡಬೇಕು, ಅವರು ಅಭ್ಯರ್ಥಿಯಾದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚತ ಎಂದರು.

ಅರುಣ್ ನಾಯ್ಕ ಮಾತನಾಡಿ ಸರ್ವ ಧರ್ಮವನ್ನು ಸಮಾನವಾಗಿ ನೋಡುವಂತವರು ಶಿವಾನಂದ್ ಹೆಗಡೆಯವರು. ಜನರಿಗೆ ಸ್ಪಂದಿಸಬೇಕು, ತನ್ನಿಂದ ಸೇವೆ ಆಗಬೇಕೆಂದು ಎಂದೂ ಸದಾ ಜನರ ಬಗ್ಗೆ ಕಾಳಜಿ ಹೊಂದಿರುವವರು. ಪಕ್ಷ ಇಂತವರಿಗೆ ಟಿಕೆಟ್ ನೀಡಬೇಕು ಎಂದರು.

ಸುಬ್ರಮಣ್ಯ ಹೆಗಡೆ ಮಾತನಾಡಿ ನಾನು ಶಿವಾನಂದ್ ಹೆಗಡೆಯವರ ಕಟ್ಟಾ ಅಭಿಮಾನಿ ದಿಲ್ಲಿಯಲ್ಲಿ ಕುಳಿತಿದ್ದವರಿಗೆ ಟಿಕೆಟ್ ಕೊಡುತ್ತಾರೆ ಆದರೆ ಇಲ್ಲಿ ಸ್ಥಳಕ್ಕೆ ಬಂದು ಜನರ ಸಮಸ್ಯೆ ಆರಿಸಿದವರಿಗೆ ಟಿಕೆಟ್ ನೀಡುತ್ತಿಲ್ಲ ಎಂದರು.

ಡಾ.ವಿಷ್ಣು ಸಭಾಹಿತ್ ಮಾತನಾಡಿ, ಕುಮಟಾ ಕ್ಷೇತ್ರದಲ್ಲಿ ಊಳುಮೆ ಮಾಡಿ ಬೀಜ ಬಿತ್ತಿದವರು ಯಾರೋ, ಫಸಲು ಕೊಯ್ಯುವವರು ಇನ್ಯಾರೋ ಎನ್ನುವಂತೆ ಆಗಿದೆ. ೨೦ ವರ್ಷದಿಂದ ಜನರಿಂದ ಆಯ್ಕೆಯಾದಂತ ವ್ಯಕ್ತಿಗೆ ಇಂದು ಟಿಕೇಟ್ ಸಿಕ್ಕಿಲ್ಲ. ಹೆಗಡೆಯವರ ಜನಪ್ರಿಯತೆ ಕ್ಷೇತ್ರದಲ್ಲಿ ಬಹಳಷ್ಟಿದೆ. ಗೆಲ್ಲುವ ಅಭ್ಯರ್ಥಿ ಅವರು ಬಿಟ್ಟರೆ ಈ ಕ್ಷೇತ್ರದಲ್ಲಿ ಬೇರೆ ಯಾರು ಇಲ್ಲ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಸಂಸ್ಮದ್ದ ಖಾನ್ ಮಾತನಾಡಿ ಪರೇಶ್ ಮೇಸ್ತಾ ಗಲಭೆಯ ಸಂದರ್ಭದಲ್ಲಿ ಕ್ಲಿಷ್ಟಕರ ವಾತಾವರಣ ಸೃಷ್ಟಿಯಾಗಿತ್ತು. ನಮಗಾದ ಅನ್ಯಾಯದ ಬಗ್ಗೆ ಮಾತನಾಡುವವರು ಯಾರು ಇಲ್ಲವಾಗಿದ್ದರು.. ಅಂತಹ ಸಂದರ್ಭದಲ್ಲಿ ಶಿವಾನಂದ ಹೆಗಡೆಯವರು ನಮಗೆಲ್ಲ ಸಾಂತ್ವನ ಹೇಳಿದರು. ಸಹೋದರತ್ವ ಭಾವನೆಯಿಂದ ಎಲ್ಲರ ಮನಸ್ಸು ಗೆದ್ದವರು. ಅವರಿಗೆ ಈ ಬಾರಿ ಟಿಕೆಟ್ ಸಿಕ್ಕಿದ್ದರೆ ಪ್ರತಿಯೊಬ್ಬರು ಪಕ್ಷಕ್ಕಾಗಿ ದುಡಿಯುತ್ತೇವೆ ಬೇರೆಯವರಿಗೆ ಟಿಕೇಟ್ ನೀಡಿದರೆ ನಾವು ವಿಚಾರ ಮಾಡಬೇಕಾಗುತ್ತದೆ. ಹೈಕಮಾಂಡ್ ಗೆ ಮುಸ್ಲಿಂ ಸಮಾಜದಿಂದ ಈ ಕುರಿತು ನಾವು ಲೆಟರ್ ಬರೆಯುತ್ತೇವೆ ಎಂದರು.

ಮAಜುನಾಥ ಮುಕ್ರಿ ಮಾತನಾಡಿ, ನಮ್ಮ ಕಣ್ಣಿಗೆ ಕಾಣದವರಿಗೆ, ಕೈಗೆ ಸಿಗದವರಿಗೆ ಟಿಕೇಟ್ ಕೊಡಬೇಡಿ. ಶಿವಾನಂದ ಹೆಗಡೆಯವರಿಗೆ ಟಿಕೇಟ್ ಸಿಗದಿದ್ದರೆ ನಾವು ಪಕ್ಷದಲ್ಲಿ ಇರುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಶಿವಾನಂದ ಹೆಗಡೆಯವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯ ಮಾಡಿ ಅವರ ಅನೇಕ ಅಭಿಮಾನಿಗಳು ಮಾತನಾಡಿದರು. ಶಿವಾನಂದ ಹೆಗಡೆ ಯವರ ನೂರಾರು ಅಭಿಮಾನಿಗಳು ಪಾಲ್ಗೊಂಡಿದ್ದರು.

error: