September 16, 2024

Bhavana Tv

Its Your Channel

ಕಿಸಾನ್ ಕಾಂಗ್ರೇಸ್ ಜಿಲ್ಲಾಧ್ಯಕ್ಷರಾದ ಶಿವಾನಂದ ಹೆಗಡೆ ಕಡತೋಕಾ ತಮ್ಮ ಸ್ಥಾನಕ್ಕೆ ರಾಜೀನಾಮೆ

ಹೊನ್ನಾವರ; ಕಿಸಾನ್ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಅತ್ಯುತ್ತಮ ರೀತಿಯಲ್ಲಿ ಸಂಘಟನೆ ಮಾಡಿ ಹಲವು ಕಾರ್ಯಕ್ರಮ ಯಶ್ವಸಿಯಾಗಿ ಸಂಘಟಿಸಿದ್ದ ಜಿಲ್ಲಾಧ್ಯಕ್ಷರಾದ ಶಿವಾನಂದ ಹೆಗಡೆ ಕಡತೋಕಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕಾಂಗ್ರೇಸ್ ಪಕ್ಷದ ನಿರ್ಧಾರದ ವಿರುದ್ದ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಕುಮಟಾ ವಿಧಾನಸಭಾ ಚುನಾವಣೆಗೆ ಕಾಂಗ್ರೇಸ್ ಪಕ್ಷ ನಿವೇದಿತ್ ಆಳ್ವಾರವರಿಗೆ  ಬಿ.ಫಾರಂ ನೀಡಿದ ಬೆನ್ನಲ್ಲೆ ಜಿಲ್ಲಾಧ್ಯಕ್ಷರಾದ ಶಿವಾನಂದ ಹೆಗಡೆ ಕಿಸಾನ್ ಕಾಂಗ್ರೇಸ್ ರಾಜ್ಯಧ್ಯಕ್ಷ ಸಚೀನ ಮೀಗಾ ಇವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಅಧ್ಯಕ್ಷೀಯ ಅವಧಿಯಲ್ಲಿ ಕಿಸಾನ್ ಘಟಕವನ್ನು ಉತ್ತಮವಾಗಿ ಸಂಘಟಿಸಿ ಪಕ್ಷದ ಕಾರ್ಯಕ್ರಮ ಅತ್ಯುತ್ತಮವಾಗಿ ನಿಭಾಯಿಸಿರುವ ಸಂತೃಪ್ತಿ ಇದೆ. ಆದರೆ ಕುಮಟಾ ಕ್ಷೇತ್ರಕ್ಕೆ ಹಲವರು ಅರ್ಜಿ ಸಲ್ಲಿಸಿದ್ದರು. ಪಕ್ಷ ಸಂಘಟನೆ ಹಾಗೂ ಪಕ್ಷದ ಕಾರ್ಯಕ್ರಮ ಅನುಷ್ಠಾನ ಮಾಡಿದವರನ್ನು ಸ್ಥಳಿಯರನ್ನು ಕಡೆಗಣಿಸಿ ಹೊರಗಡೆಯವರಿಗೆ ಟಿಕೇಟ್ ನೀಡಿರುವುದು ಹಲವು ಕಾರ್ಯಕರ್ತರಿಗೆ ನೋವಾಗಿದೆ. ಇದರಿಂದ ಹಲವರು ಪ್ರತಿಭಟಿಸುತ್ತಿದ್ದು, ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

error: