September 16, 2024

Bhavana Tv

Its Your Channel

ಅಭಿತೋಟ ಹಾಗೂ ನಾಜಗಾರ ಬಳಿ ಅನಧಿಕೃತವಾಗಿ ನಿರ್ಮಿಸಿದ ತಡೆಗೋಡೆ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಮನವಿ

ಹೊನ್ನಾವರ ತಾಲೂಕಿನ ಇಡಗುಂಜಿ ಬಳ್ಕೂರು ಭಾಗದಿಂದ ಏತನೀರಾವರಿ ಯೋಜನೆಯ ಮೂಲಕ ನೀರು ಕಾಲುವೆ ಮೂಲಕ ಹರಿದು ಕೆಳಗಿನೂರು ಗ್ರಾಮದ ಅಭಿತೋಟ ಹಾಗೂ ನಾಜಗಾರ ಸಮೀಪದ ಚಿಕ್ಕಪುಟ್ಟ ಹಳ್ಳದ ಮೂಲಕ ನೀರು ಹರಿಯುತ್ತಿತ್ತು. ಕಳೆದ ಕೆಲ ದಿನದ ಹಿಂದೆ ಅನಧಿಕೃತವಾಗಿ ನಿರ್ಮಾಣವಾದ ತಡೆಗೋಡೆಯಿಂದ ನೀರು ಹರಿಯುತ್ತಿಲ್ಲ. ಇದರಿಂದ ನಾಜಗಾರ ಭಾಗದ ನೂರಾರು ಮನೆಗಳ ಬಾವಿಯ ನೀರು ಕಡಿಮೆ ಆಗಿದೆ. ಕುಡಿಯಲು ಹಾಗೂ ಬೆಳೆದ ಬೆಳೆಗಳಿಗೆ ನೀರು ಸಿಗುತ್ತಿಲ್ಲ. ಈ ಕಟ್ಟು ತೆರವು ಮಾಡಿದರೆ ನೂರಾರು ಕುಡುಂಬಗಳಿಗೆ ನೀರಿನ ಬವಣೆ ತಪ್ಪಲಿದೆ. ಸರ್ಕಾರದ ನಿಯಮ ಗಾಳಿಗೆ ತೂರಿ ನಿರ್ಮಿಸಿದ ಈ ತಡೆಗೋಡೆ ಕೂಡಲೇ ಅಧಿಕಾರಿಗಳು ತೆರವುಗೊಳಿಸುವಂತೆ ಗ್ರಾಮಸ್ಥರು ತಹಶೀಲ್ದಾರರಿಗೆ, ತಾಲೂಕ ಪಂಚಾಯತಿ, ಹಾಗೂ ಗ್ರಾಮ ಪಂಚಾಯತಿಯ ಅಧಿಕಾರಿಗಲಲಗೆ ಮನವಿ ಸಲ್ಲಿಸಿದರು.

error: