March 29, 2024

Bhavana Tv

Its Your Channel

ಭಟ್ಕಳ ವಿಧಾನಸಭಾ ಕ್ಷೇತ್ರದಿಂದ ಎರಡನೇಬಾರಿ ಆಯ್ಕೆ ಆಗಿರುವ ಶಾಸಕ ಮಂಕಾಳು ವೈದ್ಯರಿಗೆ ಬಂದರು ಮತ್ತು ಮೀನುಗಾರಿಕೆ ಸಚಿವ ಸ್ಥಾನ ನೀಡಬೇಕೆಂದು ಹೊನ್ನಾವರ ರಾಷ್ಟ್ರೀಯ ಮೀನುಗಾರರ ಸಂಘಟನೆಯವರಿ0ದ ಪತ್ರಿಕಾಗೋಷ್ಟಿ.

ಹೊನ್ನಾವರ ; ಭಟ್ಕಳ ವಿಧಾನಸಭಾ ಕ್ಷೇತ್ರದಿಂದ ಎರಡನೇಬಾರಿ ಆಯ್ಕೆ ಆಗಿರುವ ಶಾಸಕ ಮಂಕಾಳು ವೈದ್ಯರಿಗೆ ಬಂದರು ಮತ್ತು ಮೀನುಗಾರಿಕೆ ಸಚಿವರನ್ನಾಗಿ ಹಾಗೂ ಈ ಬಾರಿಯ ರಾಜ್ಯದ ಮಂತ್ರಿಮAಡಲದಲ್ಲಿ ಜಿಲ್ಲೆಗೆ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾAತ ಕೊಚರೇಕರ, ಮೀನುಗಾರರ ಪ್ರಮುಖ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬಾಷಾ ಪಟೇಲ್ , ಕರಾವಳಿ ಮೀನುಗಾರರ ಕಾರ್ಮಿಕರ ಸಂಘದ ಅಧ್ಯಕ್ಷ ರಾಜೇಶ್ ಜಿ. ತಾಂಡೇಲ ರಾಷ್ಟ್ರೀಯ ಮೀನುಗಾರರ ಸಂಘಟನೆಯ ಸಂಘಟನಾ ಕಾರ್ಯದರ್ಶಿ ಅಜೀತ ತಾಂಡೇಲ್ ಕರ್ಕಿ, ಮೀನುಗಾರರ ಪ್ರಮುಖ ಗಣಪತಿ ಈಶ್ವರ ತಾಂಡೇಲ ಕಾಸರಕೋಡ ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ನವರಿಗೆ, ಮತ್ತು ಕೆ. ಪಿ. ಸಿ. ಸಿ. ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರಿಗೆ ಇಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ

ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಚಂದ್ರಕಾAತ ಕೊಚರೇಕರ ಅವರು ಉತ್ತರ ಕನ್ನಡ ಜಿಲ್ಲೆಯಿಂದ ಮೀನುಗಾರ ಜನಾಂಗಕ್ಕೆ ಸಚಿವ ಸಂಪುಟದಲ್ಲಿ ಈ ವರೆಗೆ ಪ್ರಾತಿನಿಧ್ಯ ಲಭ್ಯವಾಗದೇ ಇರುವ ಹಿನ್ನೆಲೆಯಲ್ಲಿ ಎರಡನೇಬಾರಿ ಶಾಸಕರಾಗಿ ಆಯ್ಕೆಯಾಗಿರುವ ಶಾಸಕ ಮಂಕಾಳು ವೈದ್ಯರಿಗೆ ಈ ಬಾರಿಯ ಸಚಿವ ಸಂಪುಟದಲ್ಲಿ ಬಂದರು ಮತ್ತು ಮೀನುಗಾರಿಕಾ ಖಾತೆ ಸಚಿವ ಸ್ಥಾನ ನೀಡುವಲ್ಲಿ ಪರಿಗಣಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ರಾಜ್ಯದ ಕರಾವಳಿಯ ತೀರಗಳಲ್ಲಿ ಮೀನುಗಾರರು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈವರೆಗೆ ಮೀನುಗಾರರಲ್ಲದವರು ಹೆಚ್ಚು ಅವಧಿಗೆ ಮೀನುಗಾರಿಕೆ ಸಚಿವರಾಗಿದ್ದರಿಂದ ಮೀನುಗಾರಿಕೆ ಕ್ಷೇತ್ರದಲ್ಲಿನ ಹಲವು ಸಮಸ್ಯೆಗಳು ಬಗೆಹರಿಯದೇ ಹಾಗೆಯೇ ಉಳಿದಿದೆ.ಹೊನ್ನಾವರ ಮೀನುಗಾರಿಕೆ ಬಂದರಿನಲ್ಲ್ಲಿ ಹೇರಳಪ್ರಮಾಣದ ಹೂಳು ತುಂಬಿಕೊAಡಿದ್ದು ಬೋಟುಗಳ ಓಡಾಟಕ್ಕೆ ತೀವ್ರ ತೊಂದರೆ ಉಂಟಾಗಿದೆ .ಕರಾವಳಿ ತೀರಗಳ ನಿರ್ವಹಣೆಯ ವಿಚಾರದಲ್ಲಿ ಈ ವರೆಗಿನ ಹಲವು ತಪ್ಪು ನೀತಿಗಳಿಂದ ಕರಾವಳಿ ಮೀನುಗಾರಿಕಾ ವಲಯವು ಇಂದು ಅಪಾಯದಲ್ಲಿದೆ. ಮೀನುಗಾರರ ಬದುಕು ಇಂದು ಸಂಕಷ್ಟದಲ್ಲಿದೆ. ಈ ಹಿನ್ನೆಲೆಯಲ್ಲಿ ಈ ಭಾಗದ ಮೀನುಗಾರ ಜನಾಂಗದ ಮಂಕಾಳು ವೈದ್ಯರು ಸೇರಿದಂತೆ ಈ ಜಿಲ್ಲೆಗೆ ಇಬ್ಬರು ಸಚಿವರಾದರೆ ಮೀನುಗಾರಿಕೆ ಸಹಿತ ಜಿಲ್ಲೆಯ ವಿವಿಧ ಸಮಸ್ಯೆಗಳನ್ನು ಬಗೆಹರಿಸಿ ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಿನ ಅಭಿವೃದ್ಧಿ ಕೈಗೊಳ್ಳಲು ಸಾಧ್ಯವಾಗಬಹುದು ಎನ್ನುವ ಆಶಯವನ್ನು ಅವರು ಹೊನ್ನಾವರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವ್ಯಕ್ತಪಡಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಕರಾವಳಿ ಮೀನುಗಾರ ಕಾರ್ಮಿಕರ ಸಂಘದ ಅಧ್ಯಕ್ಷ ರಾಜೇಶ್ ತಾಂಡೇಲ್, ರಾಷ್ಟ್ರೀಯ ಮೀನುಗಾರರ ಸಂಘಟನೆಯ ಸಂಘಟನಾ ಕಾರ್ಯದರ್ಶಿ ಅಜೀತ ತಾಂಡೇಲ್, ಹಸಿಮೀನು ವ್ಯಾಪರಸ್ಥರ ಸಂಘದ ಮಾಜಿ ಅಧ್ಯಕ್ಷ ಗಣಪತಿ ತಾಂಡೇಲ, ಮಾಜಿ ತಾಪಂ ಸದಸ್ಯ ಬಾಷಾ ಪಟೇಲ ರಮೇಶ್ ತಾಂಡೇಲ್ ಇನ್ನು ಮುಂತಾದ ಪ್ರಮುಖರು ಉಪಸ್ಥಿತರಿದ್ದರು.

error: