ಹೊನ್ನಾವರ : ಅವರು ಅರೇಅಂಗಡಿಯಲ್ಲಿ ಸಾಲ್ಕೋಡ್ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿ ಕಳೆದ ಐದು ವರ್ಷದ ಅವಧಿಯಲ್ಲಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯ ನಡೆದಿದೆ. ಹಲವು ದಶಕಗಳ ಬೇಡಿಕೆಯಾದ ಹೊನ್ನಾವರ ಬಸ್ ನಿಲ್ದಾಣ, ಸರ್ಕಾರಿ ಕಾಲೇಜಿನ ಕಟ್ಟಡ ನಿರ್ಮಾಣ, ಆರ್.ಟಿ.ಓ ನಿವೇಶನ ಕುಮಟಾ ತಾಲೂಕಿನ ಮಿನಿವಿಧಾನಸೌದ, ಐ.ಟಿ.ಐ ಕಾಲೇಜಿನ ಕಟ್ಟಡ ನಿರ್ಮಾಣ ಸೇರಿದಂತೆ ಹಲವು ಜನಪಯೋಗಿ ಕಾರ್ಯವಾಗಿದೆ. ಶರಾವತಿ ಕುಡಿಯುವ ನೀರಿನ ಯೋಜನೆಯು ಎರಡು ವರ್ಷದೊಳಗೆ ಮುಕ್ತಾಯದ ಹಂತ ತಲುಪಿದೆ ವಾರದೊಳಗೆ ಪ್ರಭಾತನಗರ ಭಾಗಕ್ಕೆ ಕುಡಿಯುವ ನೀರಿನ ಸರಬರಾಜು ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನೆರೆ ಸಂದರ್ಭದಲ್ಲಿ ೩೬೦೦ ಮನೆಗಳಿಗೆ ಮಳೆ ಹಾನಿ ಪರಿಹಾರ ನೀಡಲಾಗಿದೆ. ರಸ್ತೆ ಸೇತುವೆ ಕಾಮಗಾರಿ ನಡೆದರೂ ಜನರು ನಿರೀಕ್ಷೀತ ಪ್ರಮಾಣದಲ್ಲಿ ಬೆಂಬಲಿಸಿಲ್ಲ ಎನ್ನುವುದು ಗೊತ್ತಿದೆ. ನಮ್ಮ ಪಕ್ಷದ ಅನೇಕರು ಕತ್ತರಿ ಹಾಕಿ ಮತದ ಪ್ರಮಾಣ ಇಳಿಕೆ ಮಾಡಿದರು. ಹಲವು ಗುತ್ತಿಗೆದಾರರು ವಿರೋಧಿ ಅಭ್ಯರ್ಥಿಗೆ ಹಣ ನೀಡಿ ಬೆಂಬಲಿಸಿದರು. ನಮ್ಮಿಂದ ಪ್ರಯೋಜನ ಪಡೆದ ಕೆಲವರು ಚುನಾವಣೆಯಲ್ಲಿ ಉಲ್ಟಾ ಹೊಡೆದರೂ, ತಲೆ ಕೆಡಿಸಿಕೊಳ್ಳಲಿಲ್ಲ. ವಿರೋಧ ಮಾಡಿದವರು ಯಾರು ಎನ್ನುವುದು ಗೊತ್ತಿದೆ ಹಲವರು ಆಯ್ಕೆಯಾದ ಬಳಿಕ ಪುಷ್ಪಗುಚ್ಚ ನೀಡಿದವರು ಇದ್ದಾರೆ. ಮುಂದಿನ ದಿನದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ತಾರತಮ್ಯ ಮಾಡದೇ ಅಭಿವೃದ್ದಿ ಕಾರ್ಯ ಮಾಡುವುದಾಗಿ ಭರವಸೆ ನೀಡಿದರು.
ಪಶ್ಚಿಮ ಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೊವೀಂದ ನಾಯ್ಕ ಭಟ್ಕಳ ಮಾತನಾಡಿ ಈ ಬಾರಿ ೫೦೦೦ಕ್ಕೂ ಕಡಿಮೆ ಮತದಲ್ಲಿ ನಮ್ಮ ಪಕ್ಷದ ೫೦ಕ್ಕೂ ಅಧಿಕ ಅಭ್ಯರ್ಥಿಗಳು ಸೋತಿದ್ದಾರೆ. ಕಾರ್ಯಕರ್ತರ ಅತಿಯಾದ ವಿಶ್ವಾಸ, ಹಾಗೂ ವಿರೋಧಿಗಳ ಪಿತೂರಿಯಿಂದ ಸೋತರು ಜಿಲ್ಲೆಯಿಂದ ಎರಡು ಶಾಸಕರು ಆಯ್ಕೆಯಾಗಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಘಟ್ಟದ ಮೇಲೆ ಹಾಗೂ ಕೆಳಗಡೆ ಇರ್ವರು ಸಮಸ್ಯೆ ಕುರಿತು ರಾಮ ಲಕ್ಷ್ಮಣರಂತೆ ವಿಧಾನಸೌದದಲ್ಲಿ ಧ್ವನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸ್ಥಳಿಯ ಬಿಜೆಪಿ ಮುಖಂಡರಾದ ಜಿ.ಜಿ.ಭಟ್ ಮಾತನಾಡಿ ಗ್ರಾಮದಲ್ಲಿ ನಾಲ್ಕು ಸೇತುವೆ, ಎರಡು ಕಾಮಗಾರಿ ಈ ಅವಧಿಯಲ್ಲಿ ನಡೆದಿದೆ. ಗ್ರಾಮದ ಹೆಚ್ಚಿನ ರೈತರು ಕೃಷಿಯನ್ನೆ ನಂಬಿ ಜೀವನ ನಡೆಸುತ್ತಿದ್ದು, ನೀರಿನ ಸಮಸ್ಯೆ ಅನುಭವಿಸುತ್ತಿದ್ದು, ಏತ ನೀರಾವರಿಯಂತಹ ಯೋಜನೆ ಜಾರಿಗೊಳಿಸುಚ ಮೂಲಕ ಈ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ಬಿಜೆಪಿ ಮುಖಂಡರಾದ ಅಶ್ವಿನಿ ನಾಯ್ಕ, ಎನ್.ಎಸ್.ಹೆಗಡೆ, ಕೃಷ್ಣ ಗೌಡ, ಗ್ರಾ.ಪಂ.ಸದಸ್ಯರು, ಬಿಜೆಪಿ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಹಾಜರಿದ್ದರು.
More Stories
ಬಿ.ಎಸ್.ಎಸ್. ಮೈಕ್ರೊ ಪೈನಾನ್ಸ ಲಿಮೆಟಿಡ್ ವತಿಯಿಂದ ಪ್ರವಾಹ ಸಂತ್ರಸ್ಥರಿಗೆ ಪರಿಹಾರ ವಿತರಣೆ
ಮನೆಗೆ ಆಕಸ್ಮಿಕವಾಗಿ ಬೆಂಕಿ
ಹೊನ್ನಾವರದ ಎಸ್.ಡಿ.ಎಂ.ಪದವಿ ಕಾಲೇಜಿನ ಇಂಗ್ಲಿಷ್ ಲಿಟರರಿ ಕ್ಲಬ್ ಆಶ್ರಯದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಕೈಬರಹ ಪುಸ್ತಕ ‘ಬ್ಲೂಮ್’ ಬಿಡುಗಡೆ.