April 23, 2024

Bhavana Tv

Its Your Channel

“ರಾಷ್ಟ್ರೀಯ ರಾಮಾಯಣ ಮಹೋತ್ಸವ ೨೦೨೩” ಕಾರ್ಯಕ್ರಮಇಡಗುಂಜಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ” ಗೆ ಪ್ರಥಮ ಸ್ಥಾನ

ಹೊನ್ನಾವರ ; ಛತ್ತೀಸ್‌ಗಢ ರಾಜ್ಯದ ರಾಯಗಢದಲ್ಲಿ ಯಶಸ್ವಿಯಾಗಿ ನಡೆದ “ರಾಷ್ಟ್ರೀಯ ರಾಮಾಯಣ ಮಹೋತ್ಸವ ೨೦೨೩” ಕಾರ್ಯಕ್ರಮದಲ್ಲಿ, ಕರ್ನಾಟಕ ರಾಜ್ಯದಿಂದ ಪ್ರತಿನಿಧಿಸಿದ್ದ ಹೊನ್ನಾವರ ತಾಲೂಕಿನ “ಇಡಗುಂಜಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ” ಗೆ ಪ್ರಥಮ ಸ್ಥಾನ ದೊರಕಿದೆ.

ಛತ್ತೀಸ್‌ಗಢ ಮತ್ತು ಭಗವಾನ್ ಶ್ರೀರಾಮನಿಗೆ ನಿಕಟ ಸಂಪರ್ಕವಿದೆ. ಜನಪ್ರಿಯ ನಂಬಿಕೆಯ ಪ್ರಕಾರ, ಭಗವಾನ್ ಶ್ರೀರಾಮನು ತನ್ನ ವನವಾಸದ ಸಮಯದಲ್ಲಿ ದಂಡಕಾರಣ್ಯದ ಮೂಲಕ ಪ್ರಯಾಣಿಸಿದನು. ಛತ್ತೀಸ್ಗಢದ ಕೆಲವು ಕಾಡುಗಳು ಒಮ್ಮೆ ದಂಡಕಾರಣ್ಯದ ಭಾಗವಾಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು, ಈವೆಂಟ್‌ನಲ್ಲಿ ಅರಣ್ಯಕಾಂಡದ ಘಟನೆಗಳ ಕುರಿತು ವಿಶೇಷ ಪ್ರಸ್ತುತಿಗಳು ಇದ್ದವು. ಮೂರು ದಿನಗಳ ಪರ್ಯಂತ ನಡೆದ ರಾಷ್ಟ್ರೀಯ ರಾಮಾಯಣ ಮಹೋತ್ಸವದಲ್ಲಿ ಹದಿನಾರು ರಾಜ್ಯ ಹಾಗೂ ಮೂರು ದೇಶಗಳ ವಿವಿಧ ಮಾನಸ ಮಂಡಳಿ ಕಲಾವಿದರು ಸ್ಪರ್ಧಿಸಿದ್ದರು.

ಅದರಲ್ಲಿ ಕರ್ನಾಟಕ ರಾಜ್ಯದಿಂದ ಪ್ರತಿನಿಧಿಸಿದ್ದ ಕೆರೆಮನೆ ಶಿವಾನಂದ ಹೆಗಡೆ ನೇತೃತ್ವದ “ಇಡಗುಂಜಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ” ಪ್ರದರ್ಶಿಸಿದ ‘ಸೀತಾಪಹರಣ’ ಎಂಬ ಪೌರಾಣಿಕ ಯಕ್ಷಗಾನಕ್ಕೆ ಪ್ರಥಮ ಸ್ಥಾನ ದೊರಕಿದೆ. ಕಾರ್ಯಕ್ರಮವನ್ನು ಆಯೋಜಿಸಿದ್ದ ಛತ್ತೀಸ್‌ಗಢ ಸರಕಾರದ ಸಂಸ್ಕೃತಿ ಇಲಾಖೆಯ ವತಿಯಿಂದ ಪ್ರಥಮ ಬಹುಮಾನವಾಗಿ ೫ ಲಕ್ಷ ರೂಪಾಯನ್ನು, ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ನೀಡಿದರು.

ವರದಿ: ನರಸಿಂಹ ನಾಯ್ಕ್ ಹರಡಸೆ

error: