March 29, 2024

Bhavana Tv

Its Your Channel

ಪ್ಲಾಸಿಕ್ ಮುಕ್ತ ಪರಿಸರ ನಿರ್ಮಾಣದ ಸಂಕಲ್ಪ

  ಹೊನ್ನಾವರ; ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ ದಿನಾಂಕ:-05-06-2023ರAದು ಶರಾವತಿ ಇಕೋಕ್ಲಬ್ ಹಾಗೂ ವಿಜ್ಞಾನ ಸಂಘದ ಅಡಿಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. 
    ಗಿಡಕ್ಕೆ ನೀರು ಏರೆಯುವದರ ಮೂಲಕ ಶ್ರೀಯುತ ಪ್ರಕಾಶ ಮೇಸ್ತ ಖ್ಯಾತ ಕಡಲ ತಜ್ಞರು ಹೊನ್ನಾವರ ಇವರು ಕರ‍್ಯಕ್ರಮವನ್ನ ಉದ್ಘಾಟಿಸಿ ಮಾತನಾಡುತ್ತಾ ಕಡಲ ಅಂಚಿನಲ್ಲಿರುವ ವಿದ್ಯಾರ್ಥಿಗಳೇ ನಿಮ್ಮ ಸುತ್ತಲಿನ ಭೂಮಿ ಸ್ವರ್ಣಸಮಾನ ಅಂತಹ ಭೂಮಿಯ ಮಹತ್ವವನ್ನು ಅರಿಯಿರಿ, ಹಿಂದಿದ್ದ ಕೃಷಿ ಭೂಮಿ ಘಜನಿ ಭೂಮಿಗಳಾದವು ಘಜನಿ ಭೂಮಿಗಳು ಕಾಂಡ್ಲಾಕೃಷಿ ಭೂಮಿಗಳಾಗಿವೆ. ಕಾಂಡ್ಲಾ ಗಿಡಗಳು ಕಾರ್ಬನ್ ಡೈಯೋಸೈಡ್‌ನ್ನು ಹೀರಿಕೊಂಡು ಬೇರಿನ ಮೂಲಕ ಮಣ್ಣಿನಲ್ಲಿ ಸಂಗ್ರಹಿಸುತ್ತದೆ. ಆದ್ದರಿಂದ ಕಾಂಡ್ಲಾ ಕೃಷಿ ಮಾಡುವುದು ಅತಿ ಅವಶ್ಯಕ ಎಂದು ಹೇಳಿದರು. ಪ್ಲಾಸಿಕ್ ಬಳಕೆ ದುರ್ಬಳಕೆ ಕುರಿತು ತಿಳಿಸಿ ಅದರ ದುಷ್ಪÀರಿಣಾಮದ ಅರಿವು ಮೂಡಿಸಿ “ಪ್ಲಾಸಿಕ್ ಮುಕ್ತ ಪರಿಸರ” ನಿರ್ಮಾದ ಸಕಲ್ಪ ಇಂದಿನಿAದಾಗಬೇಕು ಎಂದು ವಿದ್ಯಾರ್ಥಿಗಳನ್ನು ಜಾಗೃತಗೊಳಸಿದರು.          
     ಕರ‍್ಯಕ್ರಮದ ಅಧ್ಯಕ್ಷರಾದ ಹಾಗೂ ಶಾಲೆಯ ಮುಖ್ಯಾಧ್ಯಾಪಕರಾದ ಶ್ರೀ ಎಲ್ ಎಮ್ ಹೆಗಡೆಯವರು ಮಾತನಾಡುತ್ತಾ ಪರಿಸರದ ಅಧ್ಯಯನ ನಡೆಸಿ ಉನ್ನತ ಕೊಡುಗೆ ನೀಡುತ್ತಿರುವ ಕಡಲ ತಜ್ಞರಾದ ಪ್ರಕಾಶ ಮೇಸ್ತ ರವರು ನಮ್ಮೂರಿನ ಹೆಮ್ಮೆ ಎಂದು ಶ್ಲಾಘಿಸಿದರು. ಭೋಗ ಭಾಗ್ಯಗಳನ್ನು ಅನುಭವಿಸಿದ ಮನುಷ್ಯ ಕರ್ತವ್ಯ ಪ್ರಜ್ಞೆ ಮರೆತ್ತಿದ್ದಾನೆ ತಾನು ಬದುಕಿರುವ ಪರಿಸರದ ಕಾಳಜಿಯನ್ನೇ ಮರೆತ್ತಿದ್ದಾನೆ, ನಮ್ಮ ಸುತ್ತ  ಮುತ್ತಲಿನ ಪರಿಸರವನ್ನು ಮೊದಲು ನಾವೇ ಅರಿಯೋನ ಪ್ರಕೃತಿಯ ಯಾವುದೇ ಉತ್ಪನ್ನ ಬಳಸುವಾಗಲು ಪ್ರಜ್ಞೆಯಿಂದ ಬಳಸಬೇಕು ದೇಹ ಶುದ್ದಿ, ಮನಃಶುದ್ದಿ, ಪರಿಸರ ಶುದ್ದಿ ಇದ್ದರೆ ಉತ್ತಮ ಜೀವನ ನಡೆಸಬಹುದು ಎಂದು ತಿಳಿಸಿದರು
      ವಿಜ್ಞಾನ ಶಿಕ್ಷಕರಾದ ಶ್ರೀ ಶ್ರೀಕಾಂತ ಹಿಟ್ನಳ್ಳಿಯವರು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು ಶ್ರೀ ಸುಬ್ರಹ್ಮಣ್ಯ ಭಟ್ಟ ವಂದಿಸಿದರು ಕುಮಾರಿ ಧನ್ಯ ಸಂಗಡಿಗರು ಸ್ವಾಗತ ಗೀತೆಯನ್ನ ಪ್ರಸ್ತುತ ಪಡಿಸಿದರು ಶ್ರೀಮತಿ ಸೀಮಾ ಭಟ್ಟ ಕರ‍್ಯಕ್ರಮ ನಿರೂಪಿಸಿದರು ಶಾಲೆಯ ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ಕರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು. 
error: