July 11, 2024

Bhavana Tv

Its Your Channel

ಟಿಪ್ಪರ್ ವಾಹನಕ್ಕೆ ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ಹಾಕಿದ ಪೊಲೀಸರು ಸಾಮಾಜಿಕ ಜಾಲತಾಲದಲ್ಲಿ ಸಕತ್ ವೈರಲ್

ಹೊನ್ನಾವರ: ಇತ್ತೀಚೀನ ಪೊಲೀಸರು ವಾಹನ ಚಾಲನೆಯ ಉಲ್ಲಂಘನೆ ಕುರಿತು ದಂಡ ವಿಧಿಸುವ ಕ್ರಮದ ಕುರಿತು ಸರ‍್ವಜನಿಕ ವಲಯದಿಂದ ಅಸಮಧಾನ ವ್ಯಕ್ತವಾಗುತ್ತಿರುವಾಗ, ಟಿಪ್ಪರ್ ವಾಹನಕ್ಕೆ ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ವಿಧಿಸಿರುವ ರಶೀದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಸಕತ್ ಟ್ರೋಲ್ ಆಗುತ್ತಿದೆ.

   ಹೊನ್ನಾವರದಲ್ಲಿ ಉಸುಕು ಸಾಗಿಸುವ ಬಗ್ಗೆ ಟಿಪ್ಪರ್ ಮಾಲೀಕ ತನ್ನ ವಾಹನ ಸಂಖ್ಯೆ ಏಂ-21 ಃ3214 ನೊಂದಣಿ ಹೊಂದಿರುವ ಟಿಪ್ಪರನಲ್ಲಿ ಉಸುಕು ಸಾಗಾಟ ಮಾಡಲು ಸಂಬಂಧಿಸಿದ ಇಲಾಖೆಯಿಂದ ಅನುಮತಿ ಪಡೆದು ಟಿಪ್ಪರನ್ನು ಉಸುಕು ಸಾಗಾಟ ಮಾಡುತ್ತಿದ್ದನು. ಮೇ 11ರಂದು ಮಧ್ಯಾಹ್ನ 1:20ಕ್ಕೆ ಟಿಪ್ಪರ ತಡೆದ ಹೊನ್ನಾವರ ಪೊಲೀಸರು ಆ ಟಿಪ್ಪರ್ ಚಾಲಕ ಚಂದ್ರಕಾಂತ ಎಂಬವರಿಂದ 500ರೂಪಾಯಿ ದಂಡ ವಸೂಲಿ ಮಾಡಿ ರಶೀದಿ ನೀಡಿದ್ದಾರೆ.  ಪೊಲೀಸರು ನೀಡಿದ ಈ ರಶೀದಿ ನೋಡಿ ಶಾಕ್ ಆಗಿದ್ದಾರೆ. ಸಾಮನ್ಯವಾಗಿ ಟಿಪ್ಪರನಲ್ಲಿ ದಾಖಲಾತಿ ಸರಿ ಇಲ್ಲ. ಯೂನಿಪಾರಂ ಹೀಗೆ ಹಲವು ರೀತಿಯಲ್ಲಿ ದಂಡ ವಿಧಿಸುತ್ತಾರೆ. ಆದರೆ ಹೆಲ್ಮೆಟ್ ಧರಿಸಿಲ್ಲ ಎನ್ನುವ ರಶೀದಿ ಅಚ್ಚರಿ ಮೂಡಿಸಿರುದಲ್ಲದೇ, ಪೊಲೀಸ್ ಇಲಾಖೆಯ ಈ ಕ್ರಮ ತಲೆತಗ್ಗಿಸುವಂತಾಗಿದೆ.

ಆನ್ ಲೈನಲ್ಲಿ ಯಾರೇ ಏಂ-21 ಃ3214 ನಂಬರ್ ತಪಾಷಣೆ ಮಾಡಿದರೂ ಕೂಡ ಅಲ್ಲಿ ಟಿಪ್ಪರ್ ಎಂದು ಕಾಣಸಿಗುತ್ತದೆ. ಆದರೆ ಹೊನ್ನಾವರ ಪೊಲೀಸರು ಹೊಸದಾಗಿ ಟಿಪ್ಪರ್ ಚಾಲಕರಿಗೆ ಹೆಲ್ಮೆಟ್‌ ಕಡ್ಡಾಯ ಮಾಡಲು ಹೊರಟಿರುವಂತೆ ಕಾಣುತ್ತಿದೆ. ಪೊಲೀಸರೆ ನೀಡಿರುವ ರಶೀದಿ ಪ್ರಕಾರ ಇನ್ನ ಮೇಲೆ ಹೊನ್ನಾವರಲ್ಲಿ ಟಿಪ್ಪರ್ ಓಡಿಸುವ ಚಾಲಕರು ಕೂಡ ಕಡ್ಡಾಯವಾಗಿ ಹೆಲ್ಮೆಟ್ ಧರಿಸದೆ ಇದ್ದರೆ ದಂಡ ಬಿಳುವುದಂತು ಗ್ಯಾರಂಟಿ ಆಗುವಂತಿದೆ. ಇದೀಗ ಹೊನ್ನಾವರ ಪೊಲೀಸರು ಟಿಪ್ಪರ್ ಚಾಲಕನಿಗೆ ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ಹಾಕಿರುವ ರಶೀದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತ್ತಿದ್ದಂತೆ ಹಿಗ್ಗಾಮುಗ್ಗವಾಗಿ ಜಾಡಿಸುತ್ತಿದ್ದಾರೆ.

error: