March 19, 2025

Bhavana Tv

Its Your Channel

ಪ್ರತಿ ವರ್ಷ ಮಳೆಗಾಲ ಬಂತೆAದರೆ ಹೊನ್ನಾವರ ತಾಲೂಕಿನ ಮಂಕಿ ಪಟ್ಟಣ ಪಂಚಾಯತದ ಗುಂದ, ಚಿಟ್ಟೆಯಿತ್ಲ ಭಾಗಗಳ ಜನರಿಗೆ ಕಾಳಜಿ ಕೇಂದ್ರವೆ ಗತಿ,

ಹೊನ್ನಾವರ ; ಎಡ ಬಿಡದೆ ಸುರಿಯುತ್ತಿರುವ ಬಾರಿ ಮಳೆಗೆ ಮಂಕಿ ಪಟ್ಟಣ ಪಂಚಾಯತದ ಗುಂದ, ಚಿಟ್ಟೆಯಿತ್ಲ ಭಾಗಗಳಲ್ಲಿ ಮಳೆ ನೀರು ತುಂಬಿದ್ದು ಅಲ್ಲಿಯ ಒಟ್ಟು 13 ಕುಟುಂಬಗಳು ಸುಮಾರು 43 ಜನರು ಮಂಕಿ ಕುಂಬಾರ ಕೇರಿಯ ಹಿರಿಯ ಪ್ರಾಥಮಿಕ ಶಾಲೆಯ ಕಾಳಜಿ ಕೇಂದ್ರದಲ್ಲಿ ಉಳಿದಿದ್ದಾರೆ. ಮಂಕಿ ಕುಂಬಾರಕೇರಿ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆದು ಅವರಿಗೆ ತಾಲೂಕ ಆಡಳಿತ ಹಾಗೂ ಉಸ್ತುವಾರಿ ಮಂತ್ರಿ ಮಂಕಾಳ್ ವೈದ್ಯರ ಆದೇಶದಂತೆ ಸರಿಯಾದ ವ್ಯವಸ್ಥೆ ಕಲ್ಪಿಸಲಾಗಿದೆ,
ಈ ಸಂದರ್ಬದಲ್ಲಿ ಕಾಂಗ್ರೆಸ್ ಉತ್ತರ ಕನ್ನಡ ಜಿಲ್ಲಾ ಸಮಿತಿ ಕಾರ್ಯದರ್ಶಿ ವಾಮನ ಎಸ್ ನಾಯ್ಕ ಹಾಗೂ ಕಾಜಿಮನೆ ವೆಂಕಟೇಶ್ ನಾಯ್ಕ ಕಾಲಜಿ ಕೇಂದ್ರಕ್ಕೆ ಭೇಟಿ ಮಾಡಿ ಮಾತುಕತೆ ನಡೆಸಿದರು. ಸಂಬAಧಪಟ್ಟ ಇಲಾಖೆಯವರು ಅವರಿಗೆ ಸರಿಯಾದ ವ್ಯವಸ್ಥೆ ಮಾಡಿದ್ದು ತಿಳಿದು ಬಂದಿರುತ್ತದೆ. ಪ್ರತಿ ವರ್ಷ ಇವರು ಮಳೆಗಾಲದಲ್ಲಿ ತೊಂದರೆಯನ್ನು ಅನುಭವಿಸುತ್ತಾ ಶಾಲೆಯಲ್ಲಿ ವ್ಯವಸ್ಥೆ ಮಾಡಿದ ಕಾಳಜಿ ಕೇಂದ್ರದಲ್ಲಿ ಸ್ವಲ್ಪ ದಿವಸ ಉಳಿದು ಬರುವ ರೂಢಿಯಾಗಿದೆ. ಮುಂದಿನ ದಿನಗಳಲ್ಲಿ ತಮ್ಮ ಅಧಿಕಾರ ಅವಧಿಯಲ್ಲಿ ಅಲ್ಲಿಯ ಜನರಿಗೆ ಶಾಶ್ವತ ಉಳಿಯುವ ವ್ಯವಸ್ಥೆ ಮಾಡಬೇಕಾಗಿ ವಾಮನ ನಾಯ್ಕ ಸಚಿವರಲ್ಲಿ ಮನವಿ ಮಾಡಿಕೊಂಡಿದ್ದಾರೆ,

ಅವರಿಗೆ ಶಾಶ್ವತ ಉಳಿಯುವ ವ್ಯವಸ್ಥೆ ಕಲ್ಪಿಸಬೇಕಾಗಿ ಉಸ್ತುವಾರಿ ಮಂತ್ರಿಗಳಿಗೆ ಕೇಳಿಕೊಂಡಿದ್ದೇನೆ. ದಿನಾಂಕ್ 24 6 2024 ರಂದು ಮಂಕಿ ಪಟ್ಟಣ ಪಂಚಾಯತದಲ್ಲಿ ನಡೆದ ಉಸ್ತುವಾರಿ ಮಂತ್ರಿಗಳ ಜನಸ್ಪಂದನ ಸಭೆಯಲ್ಲಿ ಅಲ್ಲಿಯ ಸಾರ್ವಜನಿಕರು ಬಂದು ಮಂತ್ರಿಗಳ ಹತ್ತಿರ ತಮ್ಮ ಸಮಸ್ಯೆಗಳ ಬಗ್ಗೆ ಹೇಳಿಕೊಂಡಾಗ ತಾವು ಶಾಶ್ವತ ವ್ಯವಸ್ಥೆ ಮಾಡುತ್ತೇನೆ ಅಂತ ತಿಳಿಸಿದ್ದರು. ಹೀಗಾಗಿ ನಾನು ಸನ್ಮಾನ್ಯ ಮಂಕಳ್ ವೈದ್ಯರಿಗೆ ಈ ಬಗ್ಗೆ ಮತ್ತೊಮ್ಮೆ ಬರೆದು ಅಲ್ಲಿಯ ಸಾರ್ವಜನಿಕರ ಪರವಾಗಿ ವಿನಂತಿಸಿಕೊAಡಿದ್ದೇನೆ ಎಂದು ವಾಮನ ನಾಯ್ಕ ತಿಳಿಸಿದ್ದಾರೆ.

error: