ಹೊನ್ನಾವರ ; ಸಾಹಿತ್ಯ,ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಉತ್ತಮ ಭಾಷಾ ಕೌಶಲ್ಯವನ್ನು ಹೊಂದಿರಬೇಕು’ ಎಂದು ಡಾ.ಎಂ.ಪಿ.ಕರ್ಕಿ ಇನಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಎಂಡ್ ರೀಸರ್ಚ್ ಇದರ ನಿರ್ದೇಶಕ ಡಾ.ಶಿವರಾಮ ಶಾಸ್ತಿç ಅಭಿಪ್ರಾಯಪಟ್ಟರು.
ಇಲ್ಲಿನೆಂಪಿಇ ಸೊಸೈಟಿಯ ಎಸ್.ಡಿ.ಎಂ.ಪದವಿ ಕಾಲೇಜಿನ ಇಂಗ್ಲಿಷ್ ವಿಭಾಗದ ಇಂಗ್ಲಿಷ್ ಲಿಟರರಿ ಕ್ಲಬ್ ಆಶ್ರಯದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಕೈಬರಹ ಪುಸ್ತಕ ‘ಬ್ಲೂಮ್’ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಮಾಜದೊಟ್ಟಿಗೆ ಉತ್ತಮ ಸಂವಹನ ಸಾಧಿಸುವ ನಿಟ್ಟಿನಲ್ಲಿ ಬರವಣಿಗೆ ಒಂದು ಪರಿಣಾಮಕಾರಿ ಮಾಧ್ಯಮವಾಗಿದೆ.ಭಾಷೆಯ ಕುರಿತು ಅಭ್ಯಸಿಸುತ್ತ ಹೊಂದAತೆ ಅದರ ಆಳ ಹಾಗೂ ವಿಸ್ತಾರದ ಅರಿವಾಗುತ್ತದೆ’ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ.ರೇಣುಕಾದೇವಿ ಗೋಳಿಕಟ್ಟೆ ಮಾತನಾಡಿ,ಇಂಗ್ಲಿಷ್ ಭಾಷಾ ಕೌಶಲ್ಯವಿದ್ದ ವ್ಯಕ್ತಿಗೆ ಒಳ್ಳೆಯ ಉದ್ಯೋಗಾವಕಾಶಗಳಿದ್ದು ವಿದ್ಯಾರ್ಥಿಗಳು ಕಾಲೇಜಿನಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ.ಎಂ.ಜಿ.ಹೆಗಡೆ ಉಪಸ್ಥಿತರಿದ್ದರು.
ಮಹಮ್ಮಾಯಿ,ದೇವಿಕಾ ಪ್ರಾರ್ಥನಾ ಗೀತೆ ಹಾಡಿದರು.ತಬಸ್ಸುಮ್ ಶೇಖ್ ಸ್ವಾಗತಿಸಿದರು.ಇಂಗ್ಲಿಷ್ ಲಿಟರರಿ ಕ್ಲಬ್ ಸಂಯೋಜಕಿ ವೆಲೆನ್ಶಿಯಾ ಡಿಸೋಜಾ ಅತಿಥಿ ಪರಿಚಯ ಮಾಡಿದರು.ಪಲ್ಲವಿ ಮಡಿವಾಳ,ರಮ್ಯಾ ಮೇಸ್ತ ನಿರೂಪಿಸಿದರು.ಶ್ರೇಯಾ ಎಸ್.ಪೈ ವಂದಿಸಿದರು.
ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
More Stories
ಬಿ.ಎಸ್.ಎಸ್. ಮೈಕ್ರೊ ಪೈನಾನ್ಸ ಲಿಮೆಟಿಡ್ ವತಿಯಿಂದ ಪ್ರವಾಹ ಸಂತ್ರಸ್ಥರಿಗೆ ಪರಿಹಾರ ವಿತರಣೆ
ಮನೆಗೆ ಆಕಸ್ಮಿಕವಾಗಿ ಬೆಂಕಿ
ಯಕ್ಷಗಾನ ಕಲಾವಿದ ಕಪ್ಪೆಕೆರೆ ಮಾಹಾದೇವ ಹೆಗಡೆ ನಿಧನ.