ಹೊನ್ನಾವರ ; ತಾಲೂಕಿನ ರಾಷ್ಟ್ರೀಯ ಹೆದ್ದಾರಿ 69ರ ಖರ್ವಾ ಗ್ರಾಮದ ಯಲಗುಪ್ಪಾ ಸಮೀಪ ಮಾರುತಿ ಇಕೋ ವಾಹನ ಚಾಲಕನ ಅಜಾಗರೂಕ ಚಾಲನೆಯಿಂದ ಕಡವೆಯೊಂದು ಗಂಭೀರ ಗಾಯಗೊಂಡ ಘಟನೆ ಶನಿವಾರ ನಡೆದಿದೆ.
ಧನ್ವಂತರಿ ಸಮೀಪ ವಾಹನ ಚಾಲಕ ಅಜಾಗರೂಕತೆಯಿಂದ ವಾಹನ ಚಲಾಯಿಸಿದ ಪರಿಣಾಮ ರಸ್ತೆಯಲ್ಲಿದ್ದ ಕಡವೆಗೆ ಡಿಕ್ಕಿಪಡಿಸಿದ್ದಾನೆ.ಪರಿಣಾಮ ಕಡವೆ ಹಿಂಬದಿ ಕಾಲಿಗೆ ಗಂಭೀರ ಪೆಟ್ಟಾಗಿದೆ. ನಂತರ ಅಲ್ಲಿಂದ ನೋವಿನಲ್ಲೆ ನರಳುತ್ತಾ ತೆರಳಿದ ಕಡವೆ ಧನ್ವಂತರಿ ದೇವಸ್ಥಾನ ಸಮೀಪದ ಕೆರೆಯಲ್ಲಿ ಬಿದ್ದಿದೆ. ವಿಷಯ ತಿಳಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕೆರೆಯ ಮಣ್ಣನ್ನು ತೆರವು ಮಾಡಿಕೊಟ್ಟು ಅಪಘಾತಕ್ಕೊಳಗಾದ ಕಡವೆಯನ್ನು ರಕ್ಷಣೆ ಮಾಡಿದ್ದಾರೆ. ನಂತರ ಕಡವೆ ಕೆರೆಯಿಂದ ಅಡವಿಗೆ ಹೋಗಿದೆ. ಕಡವೆಯ ಕಾಲಿಗೆ ಪೆಟ್ಟಾಗಿರುವುಧರಿಂದ ಓಡಲು ಕಷ್ಟಕರವಾಗಿದೆ.ಯಾರೂ ಅದನ್ನು ಬೇಟೆಯಾಡದಂತೆ ನೋಡಿಕೊಳ್ಳಲು ಅರಣ್ಯ ಇಲಾಖಾಧಿಕಾರಿಗಳು ಹಗಲು- ರಾತ್ರಿ ಕಾವಲು ಹಾಕಿದ್ದಾರೆ.ಘಟನೆ ಕುರಿತಂತೆ ವಾಹನ ಚಾಲಕ ಜಲವಳ್ಳಿಯ ರೋಹಿದಾಸ ಶಿವಕುಮಾರ್ ನಾಯ್ಕ ವಿರುದ್ದ ಅರಣ್ಯ ಇಲಾಖಾ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಡಿಎಪ್‌ಓ ಯೋಗೇಶ , ಆರ್.ಎಫ್ ಓ ಸವಿತಾ ದೇವಾಡಿಗ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.
ಇತ್ತಿಚಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿವೇಗದ ವಾಹನ ಚಾಲನೆಯಿಂದ ಜಾನುವಾರುಗಳು,ಕಾಡು ಪ್ರಾಣಿಗಳು ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಾಗಿದೆ.ಮೂಕ ಜೀವಿಗಳ ಸಾವು-ನೋವಿಗೆ ಕಾರಣರಾಗುವವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಪ್ರಾಣಿ ಪ್ರೀಯರು ಆಗ್ರಹಿಸಿದ್ದಾರೆ.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ
More Stories
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ
“ದಿ ಓಶೀಯನ್ ಕನೆಕ್ಷನ್” ಎಂಬ ಸಾಕ್ಷ್ಯಚಿತ್ರದ ಪ್ರದರ್ಶನ