April 25, 2024

Bhavana Tv

Its Your Channel

ಜಿಲ್ಲಾಧಿಕಾರಿಗಳಿಗೆ ಸೇತುವೆ ಅಗ್ರಹಿಸಿದ ಹಗುರಮನೆ ಗ್ರಾಮಸ್ಥರು ; ಸೇತುವೆ ನಿರ್ಮಿಸದಿದ್ದರೆ ಚುನಾವಣೆ ಬಹಿಷ್ಕಾರ.

ಕಾರವಾರ: ಶಿರಸಿ ತಾಲೂಕ, ವಾನಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ, ಹಗುರಮನೆ ಮತ್ತು ಮೇಲಿನಗದ್ದೆ ಗ್ರಾಮಸ್ಥರು ಸೇತುವೆ ಇಲ್ಲದೇ ಮಳೆಗಾಲದ ನಂತರದ 8 ತಿಂಗಳ ವರೆಗೆ ಸಂಪರ್ಕ ಕೊರತೆ ಉಂಟಾಗುವುದರಿAದ ತುರ್ತಾಗಿ ಸೇತುವೆ ನಿರ್ಮಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.

ಬೇಡಿಕೆ ಈಡೇರದಿದ್ದರೆ ಮುಂದಿನ ಚುನಾವಣೆ ಬಹಿಷ್ಕರಿಸಲಾಗುವುದೆಂದು ಗ್ರಾಮಸ್ಥರು ಅಗ್ರಹಿಸಿದರು.
ಸೌಲಭ್ಯ ವಂಚಿತ ಸುಮಾರು 35 ಕ್ಕೂ ಮಿಕ್ಕಿ ಹಿರಿಯರು, ಮಹಿಳೆಯರು ಹಾಗೂ ಮಕ್ಕಳು ಸೇರಿದ ಗ್ರಾಮಸ್ಥರ ನಿಯೋಗವು ಇಂದು ಜಿಲ್ಲಾಧಿಕಾರಿ ಮುಲ್ಲೆöÊ ಮುಗಿಲಿನ್ ಅವರನ್ನ ಕಛೇರಿಯಲ್ಲಿ ಭೇಟಿಯಾಗಿ ಮನವಿ ಅರ್ಪಿಸಿದರು.
ಹಗುರಮನೆ ಮತ್ತು ಮೇಲಿನಗದ್ದೆ ಹಳ್ಳಿಗಳಲ್ಲಿ 31 ಕುಟುಂಬ ಇದ್ದೂ, ಒಟ್ಟು ಜನಸಂಖ್ಯೆ 100 ರಷ್ಟು ಇರುವುದು. ಅಂಧರು, ಅಂಗವಿಕಲರು ಮತ್ತು ವೃದ್ಧರು ಇರುವಂತಹ ಅತ್ಯಂತ ಹಿಂದುಳಿದ ಒಕ್ಕಲಿಗ ಸಮಾಜಕ್ಕೆ ಸೇರಿದ ರೈತಾಪಿ ಕುಟುಂಬದ ಜನವಸತಿ ಇರುವ ಈ ಗ್ರಾಮದಲ್ಲಿ ವಾಹನ ಸಂಪರ್ಕವಿಲ್ಲದೇ, ಮಳೆಗಾಲದ ಪೂರ್ವದಲ್ಲಿ ಮುಂದಿನ 8 ತಿಂಗಳಿಗೆ ಅವಶ್ಯವಾದ ಆಹಾರ ಸಾಮಗ್ರಿ, ಕೃಷಿ ಚಟುವಟಿಕೆ ಪೂರಕವಾದ ರಸಗೊಬ್ಬರ, ಆಹಾರ ಧಾನ್ಯ ಸಾಮಗ್ರಿಗಳನ್ನ ಸೇಕರಿಸಿಟ್ಟುಕೊಳ್ಳುವುದು ಅನಿವಾರ್ಯವಾಗಿದ್ದು ಇರುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ಚರ್ಚೆಯ ಸಂದರ್ಭದಲ್ಲಿ ಗ್ರಾಮಸ್ಥರು ಉಲ್ಲೇಖಿಸಿದರು.
ಈ ಗ್ರಾಮದಿಂದ ಪ್ರಾರ್ಥಮಿಕ, ಪ್ರೌಢಶಾಲೆ, ಕಾಲೇಜುಗಳಿಗೆ ಹೋಗುವ ಸುಮಾರು 18 ಮಕ್ಕಳುಗಳಿಗೆ ರಸ್ತೆಯ ಸಂಪರ್ಕ, ಕಾಲುಶಂಕವಿಲ್ಲದೇ ಖಾಸಗಿ ಮತ್ತು ಇನ್ನೀತರ ಅತೀಕ್ರಮಣ ಕ್ಷೇತ್ರದಿಂದ ಅರಣ್ಯ ಮತ್ತು ಗಿಡ ಗಂಟಿಗಳ ಮಧ್ಯದಿಂದಲೇ ಓಡಾಡುವುದು ಅನಿವಾರ್ಯವಾಗಿದೆ ಎಂದು ಪ್ರಸ್ತಾಪಿಸಿದರು.

ನಾರಾಯಣ ಯಂಕ ಗೌಡ, ದೇವು ಗೌಡ, ಬೋಮ್ಮ ಗೌಡ, ತಿಮ್ಮ ಗೌಡ, ಸವಿತಾ ಗೌಡ, ರಾಮ ಗೌಡ, ಅನ್ನಪೂರ್ಣ ಗೌಡ, ಶಿಣ್ಣೆ ಗೌಡ, ವೆಂಕಟೇಶ ಗೌಡ, ಮಾದೇವಿ ಗೌಡ, ಓಮಿ ಗೌಡ, ಗಣಪತಿ ಬೋಮ್ಮ ಗೌಡ, ಸರ್ವಾ ಗೌಡ, ಶ್ರೀನಿವಾಸ ಗೌಡ, ನಾಗವೇಣಿ ಗೌಡ ಮುಂತಾದವರು ಸೌಕರ್ಯ ವಂಚಿತ ಕುರಿತು ಜಿಲ್ಲಾಧಿಕಾರಿಗಳಿಗೆ ವಿಶ್ಲೇಷಿಸಿದರು.

ಮುಂಬರುವ 2023 ವಿಧಾನ ಸಭೆ ಚುನಾವಣೆ ಪೂರ್ವದಲ್ಲಿ ಹಗುರಮನೆ ಮತ್ತು ಮೇಲನಗದ್ದೆ ಗ್ರಾಮಕ್ಕೆ ಸಂಪರ್ಕ ಸೇತುವೆ ಪೂರ್ಣಗೊಳ್ಳದಿದ್ದಲ್ಲಿ ಸಾರ್ವತ್ರಿಕ ಚುನಾವಣೆಗೆ ಬಹಿಷ್ಕಾರ ಹಾಕುತ್ತೇವೆ ಎಂದು ಗ್ರಾಮಸ್ಥರು ತೀರ್ಮಾನಿಸಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ

error: