March 27, 2024

Bhavana Tv

Its Your Channel

ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕ ;ಗ್ರಾಮಮಟ್ಟದ ಜನಾಭಿಪ್ರಾಯ ಸಂಗ್ರಹದ ವರದಿ ಕೇಂದ್ರ ಸರಕಾರಕ್ಕೆ ಸಲ್ಲಿಸಲು ಮುಖ್ಯಮಂತ್ರಿಗೆ ರವೀಂದ್ರ ನಾಯ್ಕ ಒತ್ತಾಯ

ಕಾರವಾರ: ಕಸ್ತೂರಿ ರಂಗನ್ ವರದಿಯು ಅವೈಜ್ಞಾನಿಕವಾಗಿದ್ದು, ಸೆಟಲೈಟ್ ಚಿತ್ರಣದ ಮೂಲಕ ತಯಾರಿಸಿದ ವರದಿಯು ವಾಸ್ತವಿಕ ಮತ್ತು ನೈಜತೆಯ ಚಿತ್ರಣಕ್ಕೆ ವ್ಯತಿರಿಕ್ತವಾಗಿದೆ. ಅಲ್ಲದೇ ಗ್ರಾಮದ ಶೇ. 20 ಕ್ಕಿಂತ ಹೇಚ್ಚು ಭೌಗೋಳಿಕ ಪ್ರದೇಶ ಜೀವಿವೈವಿಧ್ಯ ಪರಿಸರ ಸೂಕ್ಷö್ಮವಾಗಿರುವ ಮಾನದಂಡದ ಅಡಿಯಲ್ಲಿ ಸೂಕ್ಷö್ಮ ಪ್ರದೇಶವೆಂದು ಗುರುತಿಸಿರುವುದು ಅವೈಜ್ಞಾನಿಕ ಎಂದು ರವೀಂದ್ರ ನಾಯ್ಕ ಹೇಳಿದರು.
ಇತ್ತೀಚಿನ ಕಸ್ತೂರಿ ರಂಗನ ವರದಿ ಕರಡು ಅಧಿಸೂಚನೆಯಂತೆ ಪರಿಸರ ಅತೀ ಸೂಕ್ಷö್ಮ ಪ್ರದೇಶ ನಿಗದಿಗೊಳಿಸುವ ಅಂಶವು ಜನಜೀವನದ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದರಿಂದ, ವರದಿ ಅನುಷ್ಟಾನದ ಪೂರ್ವದಲ್ಲಿ ಘೋಷಿಸಿದ ಸೂಕ್ಷö್ಮ ಪ್ರದೇಶ ವ್ಯಾಪ್ತಿಯ ಗ್ರಾಮ ಮಟ್ಟದ ಜನಾಭಿಪ್ರಾಯ ಸಂಗ್ರಹದ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಬೇಕೆಂದು ಮುಖ್ಯಮಂತ್ರಿಗಳಿಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಅಗ್ರಹಿಸಿದ್ದಾರೆ. ಗುಜರಾತ, ಕರ್ನಾಟಕ, ಮಹಾರಾಷ್ಟç, ಗೋವಾ, ಕೇರಳ ಮತ್ತು ತಮಿಳುನಾಡು ರಾಜ್ಯ ಒಳಗೊಂಡ ಸುಮಾರು 59,940 ಚ.ಕೀ.ಮೀ ಪ್ರದೇಶವನ್ನ ಡಾ. ಕಸ್ತೂರಿ ರಂಗನ್ ವರದಿಯಲ್ಲಿ ಪರಿಸರ ಅತೀ ಸೂಕ್ಷö್ಮ ಪ್ರದೇಶವೆಂದು ಘೋಷಿಸಿತು. ಕರ್ನಾಟಕದಲ್ಲಿ 20,668 ಚ.ಕೀ.ಮೀ ಪ್ರದೇಶವು 1,576 ಹಳ್ಳಿಗಳಿಗೆ ವಿಸ್ತರಿಸಿ ಪರಿಸರ ಸೂಕ್ಷö್ಮ ಪ್ರದೇಶವೆಂದು ಗುರುತಿಸಿದೆ ಎಂದರು.
ಹೇಚ್ಚಿನ ಕಾನೂನು ಅವಶ್ಯವಿಲ್ಲ :
ಪಶ್ಚಿಮ ಘಟ್ಟ ಪ್ರದೇಶವನ್ನು ರಕ್ಷಣೆ ಹಾಗೂ ಸಂರಕ್ಷಿಸಲು ಈಗಾಗಲೇ ಸಾಕಷ್ಟು ಕಾನೂನು ನೀತಿ, ನಿಯಮ ಅಳವಡಿಸಲಾಗಿದ್ದು, ವಿನಾಕಾರಣ ಹೇಚ್ಚಿನ ಕಾನೂನಿನ ಬಲ ಪ್ರಯೋಗದ ಮೂಲಕ ನಿಯಂತ್ರಿಸಲು ಪ್ರಯತ್ನಿಸದಿದ್ದಲ್ಲಿ ಜನಸಾಮಾನ್ಯರ ನೈಜ್ಯ ಜೀವನಕ್ಕೆ ಮಾರಕವಾಗುವುದೆಂದು ಅವರು ಹೇಳಿದರು.

error: