April 25, 2024

Bhavana Tv

Its Your Channel

ಕೈಗಾ 5, 6ನೇ ಘಟಕ ಯೋಜನಾ ನಿರ್ದೇಶಕರಾಗಿ ಬಿ.ಕೆ. ಚೆನ್ನಕೇಶವ ನಿಯುಕ್ತಿ

ಕಾರವಾರ: ಕೈಗಾ ಯೋಜನೆ 5 ಮತ್ತು 6 ನೇ ಘಟಕದ ಯೋಜನಾ ನಿರ್ದೇಶಕ ರಾಗಿ ಬಿ.ಕೆ. ಚೆನ್ನಕೇಶವ ನಿಯುಕ್ತಿಗೊಂಡಿದ್ದಾರೆ. ಕೈಗಾ ಯೋಜನೆ 5 ಮತ್ತು 6 ನೇ ಘಟಕದ 700 * 2 ಮೆ.ವ್ಯಾ. ಸಾಮರ್ಥ್ಯದ ಅಣುವಿದ್ಯುತ್ ಸ್ಥಾವರವಾಗಿದ್ದು ಈಗ ನಿರ್ಮಾಣ ಹಂತದಲ್ಲಿದೆ.

ಬಿ.ಕೆ. ಚೆನ್ನಕೇಶವ ಸುಮಾರು 30 ವರ್ಷಗಳಿಂದ ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ (ಓಅಖಐ) ನಲ್ಲಿ ವೈಜ್ಞಾನಿಕ ಅಧಿಕಾರಿಯಾಗಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ, ಈಗ ಯೋಜನಾ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕೈಗಾ ಯೋಜನೆ1-2 ಮತ್ತು3-4, ಕಲ್ಪಾಕಂ ಮತ್ತು ಹರಿಯಾಣದ ಯೋಜನೆಗಳಲ್ಲಿ ಕೆಲಸ ಮಾಡಿ ಅಪಾರ ಅನುಭವವನ್ನು ಹೊಂದಿದ್ದಾರೆ. ಮೂಲತಃ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನವರಾಗಿದ್ದು ಹಿಂದೆ ಎನ್‌ಪಿಸಿಎಲ್ ಕೈಗಾ 3 ಮತ್ತು 4ರ ನಿರ್ಮಾಣ ಕೆಲಸ ಕೇವಲ 59 ತಿಂಗಳಲ್ಲಿ ಮುಗಿಸಿದ ದಾಖಲೆಯಿದ್ದು ಇದರಲ್ಲಿ ಇವರ ಪಾತ್ರ ಬಹುಮುಖ್ಯವಾಗಿದೆ. ಈಗ ಇವರ ನೇತೃತ್ವದಲ್ಲಿ ಕೈಗಾ 5 ಮತ್ತು 6 ಘಟಕ ನಿರ್ಮಾಣ ಕೆಲಸ ನಡೆಯುತ್ತಿದೆ.

error: