April 20, 2024

Bhavana Tv

Its Your Channel

ಧಾರವಾಡದ ರಂಗಾಯಣದಲ್ಲಿ ಭಾವಕವಿ ಉಮೇಶ ಮುಂಡಳ್ಳಿಯವರಿಗೆ ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ ಪ್ರದಾನ

ಕಾರವಾರ– ಧಾರವಾಡ ರಂಗಾಯಣ ಸಭಾಭವನದಲ್ಲಿ ಜಿಲ್ಲೆಯ ಭಾವಕವಿ ಉಮೇಶ ಮುಂಡಳ್ಳಿಯವರಿಗೆ ಬುದವಾರ ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹುಬ್ಬಳ್ಳಿಯಿಂದ ಪ್ರಕಟಗೊಳ್ಳುವ ಪ್ರತಿಷ್ಠಿತ ವಿಶ್ವ ದರ್ಶನ ಪತ್ರಿಕೆ ಸಾರಥ್ಯದಲ್ಲಿ ಬುಧವಾರ ಧಾರವಾಡ ರಂಗಾಯಣ ಸಭಾಭವನದಲ್ಲಿ ಸಾಹಿತ್ಯ, ಸಂಗೀತ, ಕಲೆ, ಪತ್ರಿಕೋದ್ಯಮ, ರಂಗಭೂಮಿ, ಜಾನಪದ ಹೀಗೆ ವಿವಿಧ ರಂಗದಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಉತ್ತರ ಕನ್ನಡ ಜಿಲ್ಲೆಯಿಂದ ಸುಮಾರು ಹದಿನೆಂಟು ವರ್ಷಕ್ಕೂ ಹೆಚ್ಚುಕಾಲ ಸಾಹಿತ್ಯ ಸಂಗೀತ ಸಂಘಟನೆ ಪ್ರಕಾಶನ ಹೀಗೆ ಹಲವು ರಂಗಗಳಲ್ಲಿ ತಮ್ಮನ್ನು ಸದಾ ತೊಡಗಿಸಿಕೊಂಡು
ಜಿಲ್ಲೆಯ ಭಾವಕವಿ ಎಂದೇ ಹೆಸರಾದ ಉಮೇಶ ಮುಂಡಳ್ಳಿಯವರನ್ನು ಸಾಹಿತ್ಯ ರಂಗದ ಸೇವೆಗಾಗಿ ಗುರುತಿಸಿ ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಿತು. ವಿಶ್ವ ದರ್ಶನ ಪತ್ರಿಕೆಯ ಪರವಾಗಿ ಪ್ರಧಾನ ಸಂಪಾದಕ ಡಾ.ಎಸ್ ಎಸ್ ಪಾಟೀಲ್ ಹಾಗೂ ಗಜೇಂದ್ರಗಡದ ಕಾಲ ಜ್ಞಾನ ಮಠದ ಡಾ.ಶ್ರೀ ಕಾಲಜ್ಞಾನ ಬ್ರಹ್ಮ ಸದ್ಗುರು ಶರಣಬಸವ ಮಹಾಸ್ವಾಮಿಗಳು ಮುಂಡಳ್ಳಿ ಯವರಿಗೆ ಸಾಲು ಹೊದಿಸಿ ಪ್ರಶಸ್ತಿ ಫಲಕ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಲ ಜ್ಞಾನ ಮಠದ ಸ್ವಾಮಿಜಿಯವರು ಪ್ರಶಸ್ತಿ ಹಿರಿಮೆಯನ್ನು ಶ್ರೇಷ್ಠತೆಯನ್ನು ತಂದುಕೊಡುವ ಜೊತೆಗೆ ಸಮಾಜದಲ್ಲಿ ನಮ್ಮ ಗುರುತರವಾದ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ.
ವೈಯಕ್ತಿವಾಗಿ ಮಾತ್ರವಲ್ಲದೆ ನಾವು ಸಮಾಜದ ಸ್ವತ್ತಾಗಿ ಪರಿವರ್ತನೆಯಾಗುತ್ತೇವೆ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಧಾರವಾಡ ಮುರುಘಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಬಾದಾಮಿಯ ಸಿದ್ದಾರೂಡಮಠದ ಶ್ರೀ ಶ್ರೀ ವೀರಯ್ಯ ಮಹಾಸ್ವಾಮಿಗಳು, ಹುಬ್ಬಳ್ಳಿಯ ಹಾಲಯ್ಯ ಮಠದ ಶ್ರೀ ಶ್ರೀ ಹಾಲಯ್ಯ ಮಹಾಸ್ವಾಮಿಗಳು ಹಿತವಚನ ನುಡಿದರು.
ವಿಶ್ವದರ್ಶನ ಪತ್ರಿಕೆಯ ಸಂಪಾದಕ ಡಾ.ಎಸ್.ಎಸ್.ಪಾಟಿಲ್ ಮಾತನಾಡಿ ಸರ್ಕಾರದ ಯಾವ ನೆರವಿಲ್ಲದಿದ್ದರೂ ಸಮಾಜದ ಪ್ರತಿಭಾನ್ವಿತರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯದಲ್ಲಿ ತಮಗೆ ಹೆಚ್ಚಿನ ತೃಪ್ತಿ ಇರುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.
ವೇದಿಕೆಯಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿ ಇದರ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ, ಬಸವಲಿಂಗಪ್ಪ ಬ ವಣ್ಣರ್ ರಾಷ್ಟ್ರೀಯ ನಿವೃತ್ತ ಸೈನಿಕ ಸಂಘದ ಅಧ್ಯಕ್ಷರು ಮೊದಲಾದ ಗಣ್ಯರು ಉಪಸ್ಥಿತರಿದ್ದು ಮಾತನಾಡಿದರು.ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಅನೇಕ ಜಾನಪದ ಕಲೆಗಳು ಪ್ರದರ್ಶಿಸಲ್ಪಟ್ಟವು.

error: