April 24, 2024

Bhavana Tv

Its Your Channel

ಕಾರವಾರದ ಹೆಸರಾಂತ ಹಿರಿಯ ರಂಗಕರ್ಮಿ ಮಾರುತಿ ಬಾಡಕರ್ ನಿಧನ

ಕಾರವಾರದ ಹೆಸರಾಂತ ಹಿರಿಯ ರಂಗಕರ್ಮಿ, ನಾಟಕ ಕಲಾವಿದ, ನಿರ್ದೇಶಕ ಹಾಗೂ ಬರಹಗಾರ ಮಾರುತಿ ಬಾಡಕರ್ ಬುಧವಾರ ಸಂಜೆ ಹೃದಯಘಾತದಿಂದ ವಿಧಿವಶರಾದರು.

ಬಾಡಕರ್ ಅಗಲುವಿಕೆ ಅಸಂಖ್ಯಾತ ಕಲಾಭಿಮಾನಿಗಳಿಗೆ ಬೇಸರ ಮೂಡಿಸಿದೆ. ಕವಿಗಳಾಗಿದ್ದ ಇವರು ಸುಂದರ ಸಾಮಾಜಿಕ ನಾಟಕ “ಸತ್ಯಮೇವಜಯತೇ, ಸೇಡಿನ ಜ್ವಾಲೆ, ನಟಸಾಮ್ರಾಟ, ಸ್ನೇಹಬಂಧನ, ತಾಳಿ ಕಟ್ಟಿದರೂ ಗಂಡನಲ್ಲ” ಮುಂತಾದ
ಅನೇಕ ಜನಪ್ರಿಯ ನಾಟಕಗಳನ್ನು ಬರೆದಿದ್ದರು. ಸ್ವತಃ ನಾಟಕ ಕಲಾವಿದ, ನಿರ್ದೇಶಕರಾಗಿಯೂ ರಂಗಸೇವೆ ಮಾಡಿದ್ದರು. ಸಾಮಾಜಿಕ ನಾಟಕಗಳ ಮೂಲಕ ಸ್ವಾರ್ಥಿ ಸಮಾಜವನ್ನು ಎಚ್ಚರಿಸುವ ಕತೆಗಳನ್ನು ಬರೆದು ನಾಟಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಜಿಲ್ಲೆಯಾದ್ಯಂತ ಅಪಾರ ಜನಮೆಚ್ಚುಗೆಗೆ ಸಾಕ್ಷಿಯಾಗಿದ್ದರು. ಕಾರವಾರದಲ್ಲಿ ಕನ್ನಡ ಕಟ್ಟಿ ಬೆಳೆಸುವಲ್ಲಿ ಹಾಗೂ ರಂಗಭೂಮಿಗೆ ಮೆರಗು ತರುವಲ್ಲಿ ನಿರಂತರವಾಗಿ ಶೃಮಿಸಿದ್ದರು.
ಇಂತಹ ಹಿರಿಯ ಚೇತನವನ್ನು ಕಳೆದುಕೊಂಡ ಜಿಲ್ಲೆಯ ನಾಟಕರಂಗ ಈಗ ಬಡವಾಗಿದೆ ಎನ್ನಬಹುದು. ಶ್ರೀಯುತರ ಆತ್ಮಕ್ಕೆ ಭಗವಂತ ಸದ್ಗತಿ ಕರುಣಿಸಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಜಿಲ್ಲೆಯ ಕಲಾವಿದರು, ಕಲಾಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ವರದಿ: ನರಸಿಂಹ ನಾಯ್ಕ್ ಹರಡಸೆ

error: