April 20, 2024

Bhavana Tv

Its Your Channel

ಅರಣ್ಯವಾಸಿಗಳ ಪರ ಅಧಿವೇಶನದಲ್ಲಿ ನಿರ್ಣಯಿಸದಿದ್ದಲ್ಲಿ ಗಾಂಧಿ ಜಯಂತಿಯAದು ಸಭಾಧ್ಯಕ್ಷರ ಮನೆ ಮುಂದೆ ಧರಣಿ.

ಕಾರವಾರ: ಮಳೆಗಾಲದ ವಿಧಾನಸಭಾ ಅಧಿವೇಶನದಲ್ಲಿ ಚರ್ಚಿಸಿ ಸುಫ್ರೀಂ ಕೋರ್ಟನಲ್ಲಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸಲು ನಿರ್ಣಯಿಸದಿದ್ದಲ್ಲಿ ಗಾಂಧಿಜಯAತಿ ಅಕ್ಟೋಬರ್ 2 ರಂದು ವಿಧಾನ ಸಭಾ ಅಧ್ಯಕ್ಷರ ಶಿರಸಿ ಮನೆಯ ಮುಂದೆ ಅರಣ್ಯ ಅತಿಕ್ರಮಣದಾರರು ಧರಣಿ ಮಾಡುವರು ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತೀರಸ್ಕಾರವಾಗಿರುವ ಅರಣ್ಯ ಅತಿಕ್ರಮಣದಾರರನ್ನ ಹಂತಹAತವಾಗಿ ಒಕ್ಕಲೆಬ್ಬಿಸಲಾಗುವುದೆಂದು ಸುಫ್ರೀಂ ಕೋರ್ಟಿನಲ್ಲಿ ಪರಿಸರವಾದಿಗಳು ದಾಖಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಲ್ಲಿ ಈ ಹಿಂದೆಯೇ ರಾಜ್ಯ ಸರಕಾರ ಪ್ರಮಾಣ ಪತ್ರ ಸಲ್ಲಿಸಿದ್ದು ಇರುತ್ತದೆ.

ಅಧಿವೇಶನದಲ್ಲಿ ನಿರ್ಣಯಿಸದಿದ್ದಲ್ಲಿ ಜಿಲ್ಲೆಯ ಹಾಜಿ ಮತ್ತು ಮಾಜಿ ಜನಪ್ರತಿನಿಧಿಗಳ ಮನೆಯ ಮುಂದೆ ಧರಣಿ ಜರುಗಿಸಲಾಗುವುದೆಂಬ ಫೇಬ್ರವರಿಯಲ್ಲಿ ಜರುಗಿದ ಹೋರಾಟಗಾರರ ವೇದಿಕೆಯ ನಿರ್ಣಯದಂತೆ ಧರಣಿ ಕಾರ್ಯಕ್ರಮ ಜರುಗಿಸಲಾಗುವುದೆಂದು ಅವರು ಹೇಳಿದರು.

ಈ ಹಿನ್ನೆಲೆಯಲ್ಲಿ ಕಳೆದ ಮೂರು ಅಧಿವೇಶನದಿಂದಲೂ ಅರಣ್ಯವಾಸಿಗಳ ಪರ ತಿದ್ದುಪಡಿ ಪ್ರಮಾಣ ಪತ್ರ ವಿಧಾನ ಸಭೆಯಲ್ಲಿ ನಿರ್ಣಯಿಸಿ ಸುಫ್ರೀಂ ಕೋರ್ಟಿಗೆ ಸಲ್ಲಿಸಲು ವೇದಕೆಯು ಅಗ್ರಹಿಸಿತು. ಅಲ್ಲದೇ, ಮಳೆಗಾಲದ ಅಧಿವೇಶನದಲ್ಲಿಯೂ ಚರ್ಚಿಸಿ ನಿರ್ಣಯಿಸಲು ಸಭಾಧ್ಯಕ್ಷರಿಗೆ ಪತ್ರ ರವಾನಿಸಲಾಗಿದೆ ಎಂದು ಅವರು ತಿಳಿಸಿದರು.

ಅರಣ್ಯವಾಸಿಗಳು ನಿರಾಶ್ರಿತರಾಗುವ ಆತಂಕ :
ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಒಟ್ಟು 89,167 ಅರಣ್ಯ ಅತಿಕ್ರಮಣದಾರರು ಅರ್ಜಿ ಸಲ್ಲಿಸಿದ್ದು ಅವುಗಳಲ್ಲಿ 69,773 ಅರ್ಜಿಗಳು ತೀರಸ್ಕಾರವಾಗಿದ್ದು ಕೇವಲ 2,855 ಅರ್ಜಿಗಳಿಗೆ ಮಾತ್ರ ಹಕ್ಕು ಮಾನ್ಯತೆ ದೊರಕಿದೆ. ಸುಫ್ರೀಂ ಕೋರ್ಟನಲ್ಲಿ ಒಕ್ಕಲೆಬ್ಬಿಸುವ ಕುರಿತು ಅಂತಿಮ ವಿಚಾರಣೆ ಜರಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಅರಣ್ಯವಾಸಿಗಳ ಪರ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸದಿದ್ದಲ್ಲಿ ಸುಫ್ರೀಂ ಕೋರ್ಟನಿಂದ ವ್ಯತಿರಿಕ್ತವಾದ ಆದೇಶಕ್ಕೆ ಕಾರಣವಾಗಿ ಅರಣ್ಯವಾಸಿಗಳು ನಿರಾಶ್ರಿತರಾಗುವರೆಂದು ರವೀಂದ್ರ ನಾಯ್ಕ ಆತಂಕ
ವ್ಯಕ್ತಪಡಿಸಿದರು.

error: