April 20, 2024

Bhavana Tv

Its Your Channel

ಹಿರಿಯ ನಾಗರಿಕರು ಸಮಾಜದ ಕಣ್ಣು ಇದ್ದಂತೆ -ಜಾರ್ಜ್ ಫಾರ್ನಾಂಡಿಸ್.

ವರದಿ: ವೇಣುಗೋಪಾಲ ಮದ್ಗುಣಿ

ಕಾರವಾರ : ಒಂದು ಸಮಾಜದ ಹಾಗೂ ಒಂದು ಕುಟುಂಬದ ಅಭಿವೃದ್ಧಿಯಾಗಬೇಕಾದರೆ ಹಿರಿಯ ನಾಗರಿಕರ ಸಹಕಾರ ಅಗತ್ಯ. ಅವರ ಸಂಸ್ಕಾರ ಇಂದಿನ ಯುವ ಪೀಳಿಗೆಗೆ ಮಾದರಿಯಾಗಬೇಕು. ಅವರಲ್ಲಿ ಸಹನೆ ಸಹಾನುಭೂತಿ ಪರೋಪಕಾರ ಗುಣಗಳು ಇರುತ್ತವೆ. ನಾವು ಸಹ ಜೀವನದಲ್ಲಿ ಇಂತಹ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಹಿರಿಯ ನಾಗರಿಕರು ಸಮಾಜದ ಕಣ್ಣು ಇದ್ದಂತೆ. ಅವರಲ್ಲಿರುವ ಸದ್ಗುಣಗಳು ನಮಗೆ ಮಾರ್ಗದರ್ಶನವನ್ನು ನೀಡುತ್ತವೆ. ಆದ್ದರಿಂದ ನಾವು ಹಿರಿಯ ನಾಗರಿಕರನ್ನು ಗೌರವಿಸಿ ಪ್ರೋತ್ಸಾಹಿಸಬೇಕು ಎಂದು ಸೆಂಟ್ ಮಿಲಾ ಗ್ರೀಸ್ ಸೌಹಾರ್ದ್ ಕ್ರೆಡಿಟ್ ಕಾರ್ಪೊರೇಟಿವ್ ನ ವ್ಯವಸ್ಥಾಪಕ ನಿರ್ದೇಶಕರಾದ ಜಾರ್ಜ್ ಫರ್ನಾಂಡಿಸ್ ರವರು ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಆಜಾದ್ ಯೂಥ್ ಕ್ಲಬ್ ಕಾರವಾರ ಹಾಗೂ ಕಲ್ಲೂರ್ ಎಜುಕೇಶನ ಟ್ರಸ್ಟ್ ಕಾರವಾರ ದವರು.’ ವಿಶ್ವ ಹಿರಿಯ ನಾಗರಿಕರ ದಿನಾಚರಣೆ’ ಯ ನಿಮಿತ್ತ ಹಮ್ಮಿಕೊಂಡ ಹಿರಿಯ ನಾಗರಿಕರ ಸಾಧನೆಯನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಸನ್ಮಾನಿತರಿಗೆ ಸನ್ಮಾನಿಸಿ ಮಾತನಾಡಿದರು.

 ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಮಾಜ ಸೇವಕ ಆರ್. ಜಿ. ಪ್ರಭು ಮಾತನಾಡಿ ಸಮಾಜವು ನಮಗೆ ಏನು ನೀಡಿದೆ ಎನ್ನುವುದಕ್ಕಿಂತ ನಾವು ಸಮಾಜಕ್ಕೆ ಏನು ಮಾಡಿದ್ದೇವೆ ಎಂಬುದರ ಕಡೆ ಗಮನ ನೀಡಬೇಕು. ಜೊತೆಗೆ ಹಿರಿಯ ನಾಗರಿಕರ ಮಾರ್ಗದರ್ಶನ ಹಾಗೂ ಅನುಭವವನ್ನು ಪಡೆದು ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಬೇಕು. ಹಿರಿಯ ನಾಗರಿಕರ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಉತ್ತಮ ಕಾರ್ಯ ಎಂದು ಹೇಳಿದರು. ಅಧ್ಯಕ್ಷತೆಯನ್ನು ವಹಿಸಿದ ರಾಷ್ಟ್ರ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಜೀರ್ ಅಹ್ಮದ್ ಯು. ಶೇಖ್ ಮಾತನಾಡಿ ಹಿರಿಯ ನಾಗರಿಕರ ಆಶೀರ್ವಾದ ಹಾಗೂ ಮಾರ್ಗದರ್ಶನ ನಮಗೆ ಅತ್ಯಾವಶ್ಯಕವಾಗಿದೆ. ಇದರಿಂದ ನಾವು ನಮ್ಮ ಕಾರ್ಯಗಳಲ್ಲಿ ಯಶಸ್ವಿಯನ್ನು ಕಾಣಬಹುದು ಎಂದು ಹೇಳಿದರು.

ಅತಿಥಿಗಳಾಗಿ ಮೋಮಿನ್ ಇಸಾಕ್ ರವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಮಾಜ ಸೇವಕರು ಹಾಗೂ ಹಿರಿಯರು ಆಗಿರುವ ಶಿಕ್ಷಣದ ಅಭಿವೃದ್ಧಿಗಾಗಿ ಶ್ರಮಿಸಿದ ಕಾರವಾರದ ಸುರೇಶ್ ನಾಯ್ಕ, ಸಮಾಜ ಸೇವಕರಾದ ಮೊಹಮ್ಮದ್ ಯೂಸುಫ್ ಮೋಮಿನ್ ಹಾಗೂ ಮಾಜಿ ಸೈನಿಕರಾದ ರಾಕಿ ಬಿ ಆಲ್ಫಾಂಸೊ ರವರಿಗೆ ಅವರು ಹಿರಿಯ ನಾಗರಿಕರಾಗಿ ಮಾಡಿದ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ಶಾಲು ಹೊದಿಸಿ ಫಲ ಪುಷ್ಪ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಪ್ರಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯೆ ಫೈರೋಜಾ ಬೇಗಂ ಶೇಖ್ ಪ್ರಾಸ್ತವಿಕ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು.ಕೊನೆಯಲ್ಲಿ ಕ್ಲಬ್ ನ ಅಧ್ಯಕ್ಷ ಮೊಹಮ್ಮ್ ದ್ ಉಸ್ಮಾನ್ ಶೇಖ್ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ರೋಹನ್ ಭುಜಲೇ, ಮೊಹಮ್ಮದ್ ಹಸನ್, ನಿಧಿ ನಾಯಕ, ಯೂಸುಫ್ ಸಾವರ್ ಅಬ್ದುಲ್ ಅಜೀಜ್ ಶೇಖ್,ಅಂದ್ರು ಆಲ್ಫಾಂ ಸೋ, ಆಯಿಶಾ ಬಿ, ವಖಾಸ್ ಶೇಖ್ ಮತ್ತು ಜಾವಿದ್ ಶೇಖ್ ಉಪಸ್ಥಿತರಿದ್ದರು

error: