April 26, 2024

Bhavana Tv

Its Your Channel

ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ- ನಜೀರ್ ಶೇಖ್

ವರದಿ: ವೇಣುಗೋಪಾಲ ಮದ್ಗುಣಿ

ಕಾರವಾರ: ಮಕ್ಕಳು ಪಠ್ಯಪುಸ್ತಕದ ಕಡೆಗೆ ಒಲವು ತೋರಿಸುವುದರ ಜೊತೆಗೆ ಸಹಪಠ್ಯ ಚಟುವಟಿಕೆಗಳ ಕಡೆಗೂ ಹೆಚ್ಚು ಆಸಕ್ತಿ ತೋರಿಸಬೇಕು. ಮಕ್ಕಳಲ್ಲಿ ಅನೇಕ ಪ್ರತಿಭೆಗಳು ಇರುತ್ತವೆ. ಅದನ್ನು ಹೊರಹಾಕಲು ಒಂದು ವೇದಿಕೆಯ ಅವಶ್ಯಕತೆ ಇರುತ್ತದೆ. ಆದ್ದರಿಂದ ಮಕ್ಕಳು ಸ್ಪರ್ಧೆಗಳನ್ನು ಏರ್ಪಡಿಸಿದಾಗ ಅದರಲ್ಲಿ ಭಾಗವಹಿಸಲು ಮುಂದೆ ಬರಬೇಕು. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸುವುದು ಅಗತ್ಯ ಇದರಿಂದ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದು ರಾಷ್ಟ್ರ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಜೀರ್ ಅಹ್ಮದ್ ಯು ಶೇಖ್ ತಿಳಿಸಿದರು. ಅವರು ಆಜಾದ್ ಯುಥ್ ಕ್ಲಬ್ ಕಾರವಾರದವರು’ ಮಕ್ಕಳ ದಿನಾಚರಣೆ’ಯ ನಿಮಿತ್ತ ಕಾರವಾರ ತಾಲೂಕಿನ ಬೇರೆ ಬೇರೆ ಶಾಲೆಯ ಮಕ್ಕಳಿಗಾಗಿ ಹಮ್ಮಿಕೊಂಡ ಚಿತ್ರಕಲಾ ಸ್ಪರ್ಧೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸುತ್ತ ಮಾತನಾಡಿದರು.
   ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಚಿತ್ರಕಲಾ  ಶಿಕ್ಷಕ ಹಾಗೂ ಉತ್ತರ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಅನಿಲ್ ಮಡಿವಾಳ ರವರು ಮಾತನಾಡಿ ಚಿತ್ರಕಲೆಯು ಮಕ್ಕಳು ತಮ್ಮ ಮನಸ್ಸಿನಲ್ಲಿ ಮೂಡುವ ಕಲ್ಪನೆಯನ್ನು ಚಿತ್ರಗಳ ಮೂಲಕ ವ್ಯಕ್ತಪಡಿಸುವ ಒಂದು ಕಲೆ. ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳನ್ನು ಉತ್ತೇಜಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಫೈ ರೋಜಾ ಬೇಗಂ ಶೇಖ್ ಮಾತನಾಡಿ ಇಂತಹ ಸ್ಪರ್ಧೆಗಳನ್ನು ಏರ್ಪಡಿಸುವುದರಿಂದ ಮಕ್ಕಳು ಮುಕ್ತವಾಗಿ ತಮ್ಮ ಪ್ರತಿಭೆಯನ್ನು ಹೊರಹಾಕಲು ಸಹಾಯಕವಾಗುತ್ತದೆ ಸ್ಪರ್ಧೆಯಲ್ಲಿ ಭಾಗವಹಿಸುವುದು ಪ್ರಮುಖವಾಗಿದೆ. ಆದ್ದರಿಂದ ಎಲ್ಲರೂ ಭಾಗವಹಿಸಲು ಪ್ರಯತ್ನಿಸಬೇಕು. ಪಾಲಕರು ಸಹ ಸಂಪೂರ್ಣವಾಗಿ ಬೆಂಬಲವನ್ನು ನೀಡಬೇಕು ಎಂದು ಹೇಳಿದರು.ಪ್ರಾರಂಭದಲ್ಲಿ ಕ್ಲಬ್ ನ ಅಧ್ಯಕ್ಷ ಮಹಮ್ಮದ್ ಉಸ್ಮಾನ್ ಶೇಖ್ ಪ್ರಾಸ್ತಾವಿಕ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಕೊನೆಯಲ್ಲಿ ಕ್ಲಬ್ ನ ಕಾರ್ಯದರ್ಶಿನಿಧಿ ನಾಯಕ  ವಂದಿಸಿದರು. ಈ ಕಾರ್ಯಕ್ರಮದಲ್ಲಿ ಕ್ಲಬ್ ನ ಮಾಜಿ ಅಧ್ಯಕ್ಷರುಗಳಾದ  ಮಹಮ್ಮದ ಹಸನ್ ಶೇಖ್, ರೋಹನ್ ಭುಜಲೆ, ಅಬ್ದುಲ ಅಜೀಜ್ ಶೇಖ ಉಪಸ್ಥಿತರಿದ್ದರು.
     ಇದೇ ಸಂದರ್ಭದಲ್ಲಿ ಮಕ್ಕಳಿಗಾಗಿ ಬೇರೆ ಬೇರೆ ವಿಭಾಗದಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಅ ಫ್ ಶೀನ್ ಝುಲ್ಫಿಕಾರ್ ಶೇಖ್, ಸೇಂಟ್ ಮೈಕಲ್ ಸ್ಕೂಲ್ ಕಾರವಾರ ಪ್ರಥಮ, ಶ್ರೇಯಸ್ ಶ್ರವಣ್ ಕುಮಾರ್ ಮಂಜರ್ಕರ ಬಾಲಮಂದಿರ ಆಂಗ್ಲ ಮಾಧ್ಯಮ ಶಾಲೆ ಕಾರವಾರ ದ್ವಿತೀಯ,  ಸೌರವ್ ಗೋವಿಂದರಾವ್ ಮಾಂಜರೇಕರ್, ಅಮೃತ ವಿದ್ಯಾಲಯ ಸದಾಶಿವಗಡ ಕಾರವಾರ ತೃತೀಯ ಹಾಗೂ ಶಿವಂ ಸೂರಜ್  ನಾಯ್ಕ್ ಸಮಾಧಾನಕರ ಬಹುಮಾನವನ್ನು ಪಡೆದಿರುತ್ತಾರೆ. ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಡೆಲ್ಸಿಯಾ ಡೇರಲ್ ಫರ್ನಾಂಡಿಸ್, ಸೇಂಟ್ ಮೈಕಲ್ ಸ್ಕೂಲ್ ಕಾರವಾರ ಪ್ರಥಮ, ಚಿರಾಗ್ ಪ್ರಕಾಶ್ ಶೇಟ್ ಸೇಂಟ್ ಜೋಸೆಫ್ ಸ್ಕೂಲ್ ದ್ವಿತೀಯ, ಅರ್ಫಾ ಮಹಮ್ಮದ್ ಹಸನ್ ಸೈಯದ್ ಅಮೃತ ವಿದ್ಯಾಲಯ ಸದಾಶಿವಗಡ ಕಾರವಾರ ತೃತೀಯ, ಹಾಗೂ ಪ್ರಜ್ವಲ್ ಪಿ. ಶೇಟ್, ಬಾಲ ಮಂದಿರ ಆಂಗ್ಲ ಮಾಧ್ಯಮ ಶಾಲೆ, ಕಾರವಾರ ಸಮಾಧಾನಕರ ಬಹುಮಾನವನ್ನು ಪಡೆದಿರುತ್ತಾರೆ. ಪ್ರೌಢಶಾಲಾ ವಿಭಾಗದಲ್ಲಿ ಅಮೋಘ ಎಮ್.ಭಟ್ ಅಮೃತ ವಿದ್ಯಾಲಯ ಸದಾಶಿವ ಗಡ ಕಾರವಾರ ಪ್ರಥಮ, ಕೌಸ್ತುಬ್ ಸಿ. ನಾಯ್ಕ್ ನಿರ್ಮಲ ರಾಣಿ ಸ್ಕೂಲ್, ಸುಂಕೇರಿ ಕಾರವಾರ ದ್ವಿತೀಯ, ಮಹಾಂತ ಗೋವಿಂದ ಗೌಡ ಹಿಂದೂ ಹೈಸ್ಕೂಲ್ ಕಾರವಾರ ತೃತೀಯ ಹಾಗೂ ಮೊಹಮ್ಮದ್ ಗೌಸ್ ಶೇಖ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಕೋಡಿಬಾಗ್ ಕಾರವಾರ ಸಮಾಧಾನಕರ ಬಹುಮಾನವನ್ನು ಪಡೆದುಕೊಂಡಿರುತ್ತಾರೆ. ವಿಜೇತರಿಗೆ ಆಕರ್ಷಕ ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ನೀಡಿ ಪ್ರೋತ್ಸಾಹಿಸಲಾಯಿತು.ಈ ಕಾರ್ಯಕ್ರಮವನ್ನು ನಿವ್ರತ್ತ ಚಿತ್ರಕಲಾ ಶಿಕ್ಷಕರಾದ ದಿವಂಗತ ಜಿ.ಕೆ.ಮಹಾಲೇರವರ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿತ್ತು.

error: