April 24, 2024

Bhavana Tv

Its Your Channel

ಕಾರವಾರ ನಗರ ವ್ಯಾಪ್ತಿಯಲ್ಲಿ ಕಾನೂನು ಬಾಹಿರ 7 ಅಡಿ ದಾರಿಗೆ ಬಹುಮಹಡಿ ಕಟ್ಟಡ ನಿರ್ಮಾಣ ನಗರಸಭೆ ಅಧಿಕಾರಿಗಳ ಮೌನ- ನ್ಯಾಯಾಲಯದ ಮೊರೆ ಹೋದ ಸ್ಥಳೀಯರು

ಕಾರವಾರ ನಗರದಲ್ಲಿ ಕಾನೂನು ಬಾಹಿರ ವ್ಯತ್ತಿರಿಕ್ತವಾಗಿ ಬಹುಮಹಡಿ ಕಟ್ಟಡಗಳು ತಲೆ ಎತ್ತುತಿದ್ದು ಇದಕ್ಕೆ ಅಧಿಕಾರಿಗಳು ಕೆಲ ಜನಪ್ರತಿನಿಧಿಗಳು ಭಾಗಿಯಾಗಿರುವುದು ಕಂಡು ಬರುತ್ತಿದೆ ಇಂತಹದೆ ಘಟನೆ ಕಾರವಾರದ ಕೋಡಿಭಾಗ ಸಾಯಿಕಟ್ಟಾ ಶ್ರೀ ಬಿಂದು ಮಾದವ ದೇವಸ್ಥಾನದ ಎದುರು ನಡೆದಿದೆ ಅಂಚಲ ಆನಂದು ನಾಯ್ಕ ಎನ್ನುವರು ರೆಹವಾಸಿ ಪ್ರದೇಶವಾದ 7 ಅಡಿ ದಾರಿಯಿರುವ ಜಾಗಕ್ಕೆ ತಾಗಿ ಗಪಾರ ಸ್ಕಾçಪ ದಾಸ್ತಾನ ಮಾಡುವರಿಂದ 3 ಗುಂಟೆ 91/2 ಆಣೆ ಜಾಗ ಪಡೆದಿದ್ದಾರೆ ಜಾಗ ಪಡೆಯುವಾಗ ಕಾರವಾರ ಕೋಡಿಭಾಗ ಮುಖ್ಯ ರಸ್ತೆ ಯಿಂದ ಗಪಾರ ರವರ ಜಾಗದಿಂದ 2 1/2 ಆಣೆ ಜಾಗ ರಸ್ತೆಗಾಗಿ ಕಾಯ್ದೀರಿಸಲಾಗಿದೆ ಎಂದು ಪಹಣಿಯಲ್ಲಿ ನಮೂದಿಸಿದ್ದು ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಸಲಕರಣೆಗಳನ್ನು ಗಪಾರ ಜಾಗದಿಂದ ಕಟ್ಟಡ ನಿರ್ಮಾಣ ಮಾಡಿರುತ್ತಾರೆ. ಸ್ಥಳೀಯರು ಮನೆ ನಿರ್ಮಾಣ ಮಾಡುತ್ತಾರೆ ಎಂದು ತಿಳಿದು ಬಳಿಕ ಬಹುಮಹಡಿ ಕಟ್ಟಡ ಎಂದು ಗೊತ್ತಾದ ಬಳಿಕ ಮಾಹಿತಿ ಹಕ್ಕು ಅಡಿಯಲ್ಲಿ ಮಾಹಿತಿ ಪಡೆದರೆ ಅಂಚಲ ಆನಂದ ನಾಯ್ಕ ರವರು ಪರವಾನಿಗೆ ಪಡೆಯುವಾಗ
ಎನ್‌ಎ ಮಾಡುವಾಗ ಕೆ ಡಿ ಎ ಯಿಂದ ತಾಂತ್ರಿಕ ಅನುಮೋದನೆ ಪಡೆಯುವಾಗ ಸ್ಥಳೀಯರು ಉಪಯೋಗಿಸುವ ಸ್ವಂತ ದಾರಿಯಾದ 7 ಅಡಿ ರಸ್ತೆಯನ್ನು 9 ಮೀಟರ ರಸ್ತೆಯೆಂದು ತಪ್ಪು ಮಾಹಿತಿ ನೀಡಿ ಪರವಾನಿಗೆ ಪಡೆದಿರುತ್ತಾರೆ ಈಕುರಿತು ನಗರಸಭೆ ಅಧಿಕಾರಿಗಳಿಗೆ ಅಧ್ಯಕ್ಷರಿಗೆ ವಾರ್ಡ ಸದಸ್ಯರಿಗೆ ಕೆ ಡಿ ಎ ಅಧಿಕಾರಿಗಳಿಗೆ ದೂರು ನೀಡಿದರು ಯಾವುದೇ ಕ್ರಮ ಕೈಗೋಳ್ಳದೆ ಮೌನತಾಳಿದ್ದಾರೆ

ಈ ಸಂದರ್ಭದಲ್ಲಿ ಅಂಚಲಾ ಆನಂದು ನಾಯ್ಕ ರವರು ಕಾಮಗಾರಿ ಪೂರ್ಣಗೊಳಿಸಿ ಗಪಾರಜಾಗದಲ್ಲಿ ತೊರಿಸಿದ ರಸ್ತೆಯ ಬಾರಿ ಗೋಡೆ ನಿರ್ಮಸಿ 7 ಅಡಿ ಸ್ಥಳೀಯರ ಸ್ವಂತ ದಾರಿಯ ಬಾರಿ ಗೋಡೆ ತೆರವುಗೊಳಿಸಿ ದಾರಿ ಮಾಡಿಕೊಂಡಿದ್ದಾರೆ ಈ ಕುರಿತು ಹಲವಾರುಬಾರಿ ಸಂಬAಧ ಪಟ್ಟ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ತಿಳಿಸಿದರು ಯಾವುದೇ ನ್ಯಾಯ ದೊರಕದೆ ಇರುವುದರಿಂದ ಅವರು ಹಿರಿಯ ವಕೀಲರಾದ ರವಿ ಬೆಳೂರಕರ ಮುಖಾಂತರ ನ್ಯಾಯಾಲಯದ ಮೊರೆ ಹೋಗಿದ್ದು ತಾತ್ಕಾಲಿಕವಾಗಿ ದೂರದಾರರಾದ ಮಹಾದೇವ ಗೋವಿಂದ ನಾಯ್ಕ ದಿನೇಶ ನಾಯ್ಕ, ರಾಮನಾಥ ನಾಯ್ಕ, ರಾಜೇಶ ಸುಬ್ರಾಯ ನಾಯ್ಕ, ನಾರಾಯಣ ವಿಠಲ ನಾಯ್ಕ ಕಮಲಾ ನಾಯ್ಕ, ಮೋಹನ ನಾಯ್ಕ ರವರ ಮನೆಯವರ ಹೊರತು ಬೇರೆ ಯಾರು ಪ್ರತಿವಾದಿಗಳ ಸದರಿ ರಸ್ತೆಯಲ್ಲಿ ಹೋಗದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ದೂರದಾರ ಪರವಾಗಿ ವಕೀಲ ರವಿ ಬೆಳೂರಕರ ತಿಳಿಸಿದ್ದಾರೆ,

ಇಂತಹ ಪ್ರಕರಣಗಳು ಇನ್ನು ಬೆಳಕಿಗೆ ಬರಬೇಕಾಗಿ ಈ ಕುರಿತು ಕರವೇ ಅಧ್ಯಕ್ಷರಾದ ಎನ್ ದತ್ತ ರವರು ಕಾನೂನು ಹೋರಾಟ ಮಾಡುವುದಾಗಿ ತಿಳಸಿದ್ದಾರೆ.

error: