March 29, 2024

Bhavana Tv

Its Your Channel

ಹೋರಾಟಗಾರ ಅಧ್ಯಕ್ಷ ಎಸ್.ಪಿ ಗೆ ಮನವಿ; ಅರಣ್ಯ ಇಲಾಖೆಯ ಅನಧೀಕೃತ ಒಕ್ಕಲೆಬ್ಬಿಸುವುವಿಕೆಗೆ ಪೋಲೀಸ್ ರಕ್ಷಣೆಗೆ ಆಕ್ಷೇಪ- ರವೀಂದ್ರನಾಯ್ಕ.

ಕಾರವಾರ: ಕಾನೂನು ಬಾಹಿರವಾಗಿ ಅರಣ್ಯ ಸಿಬ್ಬಂದಿಗಳು ಅರಣ್ಯ ಒತ್ತುದಾರರನ್ನ ಒಕ್ಕಲೆಬ್ಬಿಸುವ ಪ್ರಕ್ರೀಯೆಗೆ ಪೋಲೀಸ್ ರಕ್ಷಣೆ ನೀಡಕೂಡದೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಗಳಿಗೆ ಅಗ್ರಹಿಸಿದೆ.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರನಾಯ್ಕ ಇಂದು ಕಾರವಾರದ ಜಿಲ್ಲಾಪೋಲೀಸ್ ವರಿಷ್ಟಾಧಿಕಾರಿ ಕಛೇರಿಗೆ ನೀಡಿದ ಲಿಖಿತ ಮನವಿಯಲ್ಲಿಮೇಲಿನಂತೆ ಆಕ್ಷೇಪಿಸಿದ್ದರು.
ಅರಣ್ಯ ಇಲಾಖೆಯ ಒಕ್ಕಲೆಬ್ಬಿಸುವ ಪ್ರಕ್ರೀಯೆಯಲ್ಲಿಪೋಲೀಸ್ ಇಲಾಖೆಗೆ ತಪ್ಪು ಮಾಹಿತಿ ನೀಡಿ, ಪೋಲೀಸ್ ಇಲಾಖೆಯನ್ನು ದುರ್ಭಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಇತ್ತಿಚೀನ ದಿನಗಳಲ್ಲಿ ಜಿಲ್ಲಾದ್ಯಂತ ಅರಣ್ಯ ಸಿಬ್ಬಂದಿಗಳು ಅರಣ್ಯವಾಸಿಗಳ ಮೇಲೆ ಕಾನೂನು ಬಾಹಿರವಾಗಿ ಒಕ್ಕಲೆಬ್ಬಿಸುವ ಪ್ರಕ್ರೀಯೆ ಜರಗುತ್ತಿದ್ದದ್ದು ವಿಷಾದಕರವೆಂದು ಮನವಿಯಲ್ಲಿಉಲ್ಲೇಖಿಸಲಾಗಿದೆ.
ಅರಣ್ಯ ಸಿಬ್ಬಂದಿಗಳು ಕಾನೂನು ಬಾಹಿರವಾಗಿ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸುವ ಸಂದರ್ಭದಲ್ಲಿ ಪೋಲೀಸ್ ಇಲಾಖೆಗೆ, ಒಕ್ಕಲೆಬ್ಬಿಸುವ ಆದೇಶ ನೀಡದೇ ಅರಣ್ಯ ಇಲಾಖೆಯು ತಪ್ಪು ಮಾಹಿತಿ ನೀಡಿ ಕಾನೂನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಖಂಡನಾರ್ಹ. ಅರಣ್ಯ ಇಲಾಖೆಯ ಹೇಳಿಕೆಯಂತೆ ಪೋಲೀಸ್ ಇಲಾಖೆಯಿಂದ ಅರಣ್ಯವಾಸಿಗಳ ಮೇಲೆ ಕಾನೂನು ಕ್ರಮ ಜರುಗುತ್ತಿರುವುದು ಹಾಗೂ ಅರಣ್ಯವಾಸಿಗಳು ಅರಣ್ಯ ಸಿಬ್ಬಂದಿಗಳ ಮೇಲೆ
ದಾಖಲಿಸಿದ ಕ್ರೀಮಿನಲ್ ಪ್ರಕರಣಕ್ಕೆ ಮಾನ್ಯತೆ ಸಿಗದೇ ಇರುವ ಘಟನೆಗಳು ಜಿಲ್ಲೆಯಲ್ಲಿಜರಗುತ್ತಿದೆ ಎಂದು ಮನವಿಯಲ್ಲಿಪ್ರಸ್ತಾಪಿಸಲಾಗಿದೆ.
ಅರಣ್ಯ ಇಲಾಖೆಯ ಬಲಪ್ರಯೋಗ:
ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸುವ ಪ್ರಕ್ರೀಯೆಯಲ್ಲಿ ಕಾನೂನಿನ ವಿಧಿವಿಧಾನ ಅನುಸರಿಸದೇ, ಬಲಪ್ರಯೋಗದ ಮೂಲಕ ಒಕ್ಕಲೆಬ್ಬಿಸುವ ಕ್ರೀಯೆಗೆ ಅರಣ್ಯ ಇಲಾಖೆಯು ಪೋಲೀಸ್ ಸಿಬ್ಬಂದಿಗಳನ್ನ ದುರಪಯೋಗ ಮಾಡುವುದನ್ನ ಹೋರಾಟಗಾರರ ವೇದಿಕೆಯು ಗಂಭೀರವಾಗಿ ಪರಿಗಣಿಸಬೇಕೆಂದು ಅಧ್ಯಕ್ಷ ರವೀಂದ್ರನಾಯ್ಕ ಅವರು ಈ ಸಂದರ್ಭದಲ್ಲಿ ಹೇಳಿದರು.

error: