April 20, 2024

Bhavana Tv

Its Your Channel

ಇಂದಿನ ದಿನಗಳಲ್ಲಿ ಸಾಹಿತ್ಯವು ಅಹಿಂಸೆ ಮಾನವೀಯ ಮುಖವಾಣಿಯಾಗಲಿ-ಶ್ರೀಪಾದ ಶೆಟ್ಟಿ

ವರದಿ: ವೇಣುಗೋಪಾಲ ಮದ್ಗುಣಿ

ಕಾರವಾರ; ಹಿಂಸೆ,ದ್ವೇಷ,ಅಸೂಯೆ ವಿಜೃಂಭಿಸುತ್ತಿರುವ ವೇಳೆ ಸಾಹಿತ್ಯ ಅಹಿಂಸೆ ಮಾನವೀಯತೆಯ ಮುಖವಾಣಿಯಾಗಿ ಸಾಮಾಜಿಕವಾಗಿ ನೊಂದವರ ಧ್ವನಿಯಾಗಬೇಕು ಎಂದು ಡಾ.ಶ್ರೀಪಾದ ಶೆಟ್ಟಿ ಹೇಳಿದರು.
ಅವರು ಕಾರವಾರ ತಾಲೂಕಿನ ಮಾಜಾಳಿ ಸರಕಾರಿ ಇಂಜಿನಿಯರಿAಗ್ ಕಾಲೇಜಿನ ಆವಾರದಲ್ಲಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪದ ಸಂಸ್ಥೆ ಬೆಂಗಳೂರು ಇವರ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಸಮಾಜದ ಆಗುಹೋಗುಗಳನ್ನು ಪ್ರತಿಬಿಂಬಿಸುವ ವ್ಯವಸ್ಥೆಯ ದೋಷ ದೌರ್ಬಲ್ಯಗಳ ಬಗೆಗೆ ಅಸಹನೆ ತೋರುವ ಮೂಲಕ ಸಾಮಾಜಿಕ ಕಾಳಜಿ,ಕಳಕಳಿಯನ್ನು ಸಾಹಿತ್ಯ ಹೊಂದಬೇಕು.ಮಮತೆ,ತ್ಯಾಗ ತಾಯೊಲುಮೆಯ ಸೇಸೆಗೆ ಸಾಟಿಇಲ್ಲ. ಪ್ರೀತಿ ಧಾರೆ ಎರೆದ ಪೋಷಕರನು ವೃದ್ದಾಪ್ಯದಲಿ ಕಡೆಗಣಿಸದೇ ಪೋಷಿಸುವ ಜವಬ್ದಾರಿ ಯುವ ಸಮುದಾಯ ಹೊಂದಬೇಕಾದ ಬದ್ದತೆ ತೋರಬೇಕು ಎಂದರು.

error: