July 11, 2024

Bhavana Tv

Its Your Channel

ಕಾಗೇರಿ ಗೆಲವು, ಮಾಜಿ ಸಂಸದ ಅನಂತಕುಮಾರ್ ಹೆಗಡೆ, ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಗೆ ಮುಖಭಂಗ..ಗೆಲುವಿನ ಬೆನ್ನಲ್ಲೇ ಹೆಬ್ಬಾರ್ ,ಹೆಗಡೆಗೆ ಚಾಟಿ ಬೀಸಿದ ಕಾಗೇರಿ..

ಕಾರವಾರ : ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಏಳನೇ ಬಾರಿ ಬಿಜೆಪಿ ಗೆಲವು ಕಾಣುವ ಮೂಲಕ ತನ್ನ ಶಕ್ತಿ ಪ್ರದರ್ಶಿಸಿದೆ.ಇದೀಗ ಪಕ್ಷದಲ್ಲಿ ಬಿನ್ನಮತ ತೋರುವ ಮೂಲಕ ಕಾಗೇರಿ ಸೋಲಿಸಲು ಪಣ ತೊಟ್ಟಿದ್ದ ಬಿಜೆಪಿ ಶಾಸಕ ಹೆಬ್ಬಾರ್ ಹಾಗೂ ಮಾಜಿ ಸಂಸದ ಅನಂತಕುಮಾರ್ ಹೆಗಡೆಗೆ ವಿರುದ್ಧ ಕಾಗೇರಿ ಮೌನ ಮುರಿದಿದ್ದು ಮಾತಿನ ಮೂಲಕ ಚಾಟಿ ಬೀಸಿದ್ದಾರೆ.

ಆರು ಭಾರಿ ಬಿಜೆಪಿ ಯಿಂದ ಸಂಸದರಾಗಿ ಆಯ್ಕೆಯಾಗಿದ್ದ ಅನಂತಕುಮಾರ್ ಹೆಗಡೆಗೆ ಟಿಕೆಟ್ ಕೈ ತಪ್ಪುತಿದ್ದಂತೆ ಪಕ್ಷದ ಚಟುವಟಿಕೆಯಿಂದಲೇ ದೂರವಾಗಿದ್ದರು. ಇತ್ತ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಕೂಡ ಕಾಗೇರಿ ಪರ ಪ್ರಚಾರಕ್ಕೆ ಬಾರದೇ ಕಾಂಗ್ರೆಸ್ ಅಭ್ಯರ್ಥಿಗೆ ಬಾಹ್ಯ ಬೆಂಬಲ ನೀಡಿದ್ದರು. ಇನ್ನು ಕ್ಷೇತ್ರದಲ್ಲಿ ತನ್ನದೇ ಹಿಡಿತ ಹೊಂದಿದ್ದ ಅನಂತಕುಮಾರ್ ಹೆಗಡೆ ಮನೆಗೆ ಹೋಗಿ ಕಾದು ಕುಳಿತಿದ್ದ ಕಾಗೇರಿಗೆ ಒಳಗೂ ಬಿಟ್ಟುಕೊಳ್ಳದೇ ಅವಮಾನಿಸಿದ್ದರು.ಇನ್ನು ಕುದ್ದು ಪ್ರಧಾನಿ ಕ್ಷೇತ್ರಕ್ಕೆ ಆಗಮಿಸಿದ್ದರೂ ಇಲ್ಲದ ಸಬೂಬು ಹೇಳಿ ನಾಪತ್ತೆಯಾಗಿದ್ದು , ಮೊದಲ ಬಾರಿ ಲೋಕಸಭೆಗೆ ಸ್ಪರ್ಧಿಸಿದ್ದ ಕಾಗೇರಿಗೆ ಇಕ್ಕಟ್ಟಿಗೆ ಸಿಲುಕಿಸಿತ್ತು.ಆದರೆ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ವಿರುದ್ದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಭರ್ಜರಿ ಗೆಲುವನ್ನ ಪಡೆದಿದ್ದಾರೆ. ಮೊದಲ ಸುತ್ತಿನಿಂದಲೇ ಗೆಲುವಿನ ಅಂತರ ಏರಿಸಿಕೊಂಡು ಹೊರಟ ಕಾಗೇರಿ ಅಂತಿಮವಾಗಿ 780494 ಮತ ಪಡೆಯುವ ಮೂಲಕ ಗೆಲುವನ್ನ ಪಡೆದಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ 442622 ಮತಗಳನ್ನ ಪಡೆಯುವ ಮೂಲಕ ಸೋಲನ್ನ ಕಂಡಿದ್ದಾರೆ. ಇನ್ನು ಈ ಬಾರಿ ಸುಮಾರು 337872 ಲಕ್ಷ ಮತಗಳ ಅಂತರದಲ್ಲಿ ಕಾಗೇರಿ ಗೆಲುವನ್ನ ಪಡೆದಿದ್ದು ಈ ಮೂಲಕ ರಾಜ್ಯದಲ್ಲಿಯೇ ಅತಿಹೆಚ್ಚು ಮತಗಳ ಅಂತರದಲ್ಲಿ ಗೆಲುವನ್ನ ಪಡೆದ ಕೀರ್ತಿಗೆ ಕಾಗೇರಿ ಪಾತ್ರರಾಗಿದ್ದಾರೆ.

ಇನ್ನು ಉತ್ತರ ಕನ್ನಡ ಕ್ಷೇತ್ರ ವ್ಯಾಪ್ತಿಗೆ 8 ಕ್ಷೇತ್ರಗಳು ಬರಲಿದ್ದು ಇದರಲ್ಲಿ ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಹೆಬ್ಬಾರ್ ಬೆಂಬಲದ ಜೊತೆ ಒಟ್ಟು 6 ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದರು. ಎಲ್ಲಾ ಶಾಸಕರು ಒಟ್ಟಾಗಿ ದುಡಿದರೆ ಕಾಂಗ್ರೆಸ್ ಸುಲಭ ಗೆಲ್ಲುವ ಅವಕಾಶಗಳುದ್ದವು . ಅಲ್ಲದೇ ಗ್ಯಾರಂಟಿ ಪರಿಣಾಮ ಕಾಂಗ್ರೆಸ್ ಗೆ ಲಾಭ ಆಗಲಿದೆ ಎನ್ನಲಾಗಿತ್ತು. ಹೀಗಾಗಿ ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಕಂಡಿದ್ದ ಕಾಗೇರಿಗೆ ಈ ಬಾರಿ ಲೋಕಸಭಾ ಕ್ಷೇತ್ರದ ಸ್ಪರ್ಧೆ ಅಸ್ತಿತ್ವದ ಪ್ರಶ್ನೆ ಯಾಗಿತ್ತು. ಹಲವು ಎಡರು ತೊಡರುಗಳ ಮಧ್ಯ ಕಾಗೇರಿ ದೊಡ್ಡ ಅಂತರದಲ್ಲಿ ಗೆಲ್ಲುವ ಮೂಲಕ ಪಕ್ಷ ಮುಖ್ಯ ವ್ಯಕ್ತಿಯಲ್ಲಾ ಎಂದ ಅವರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮೂರು ಶಾಸಕರಿದ್ದರೂ ಇಬ್ಬರು ಶಾಸಕರ ಹೆಸರು ಮಾತ್ರ ಬಳಸಿ ಧನ್ಯವಾದ ಅರ್ಪಿಸಿದ ಅವರು ಕಾಂಗ್ರೆಸ್ ನಾಯಕರಿಗೂ ಧನ್ಯವಾದ ಅರ್ಪಿಸಿ ಕೆಲವರು ಕೆಲವು ಭ್ರಮೆಯನ್ನು ಸೃಷ್ಟಿಸುತ್ತಾರೆ,ಭ್ರಮೆ ಸೃಷ್ಟಿಸಿದವರ ಮುಖವಾಡ ಬಯಲಾಗಿದೆ,ಕೆಲವು ಕೋಳಿಗಳಿಗೆ ತಾವು ಕೂಗಿದರೇ ಬೆಳಗಾಗುತ್ತದೆ ಎನ್ನುವ ಭ್ರಮೆ ಇರುತ್ತೆ, ಆದ್ರೆ ಸೂರ್ಯ ಹುಟ್ಟೋದು ಹುಟ್ಟುತ್ತಾನೆ ,ಬಿಜೆಪಿ ಗೆಲ್ಲೋದು ಗೆಲ್ಲುತ್ತದೆ. ಈಗ ಅವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಅನಂತಕುಮಾರ್ ಹೆಗಡೆ ಹಾಗೂ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಗೆ ಚಾಟಿ ಬೀಸಿದ್ದಾರೆ.

ಒಟ್ಟಿನಲ್ಲಿ ತನ್ನ ಬಿಟ್ಟರೇ ಯಾರೂ ಗೆಲ್ಲಲಾಗದು ಎಂದು ಕುರ್ಚಿಯನ್ನ ಎದುರಿಗಿಟ್ಟು ಈ ಕುರ್ಚಿಯಲ್ಲಿ ಕೂರುವ ಗಂಡಸು ಯಾರಾದರೂ ಇದ್ದೀರಾ ಎಂದು ಸವಾಲು ಹಾಕಿದ ಅನಂತಕುಮಾರ್ ಹೆಗಡೆ ಗೆ ಹಾಗೂ ಪಕ್ಷದಲ್ಲೇ ಇದ್ದು ಕೈಕೊಟ್ಟ ಹೆಬ್ಬಾರ್ ಗೆ ಇದೀಗ ಮುಖಭಂಗವಾಗಿದೆ.

error: