September 27, 2021

Bhavana Tv

Its Your Channel

ಜನರ ಜೀವನಕ್ಕೆ ಸಮಸ್ಯೆಯಾಗಬಾರದು: ದಿನಕರ ಶೆಟ್ಟಿ

ಕುಮಟಾ: ಪಟ್ಟಣದ ಉಪ್ಪಿನಗಣಪತಿ ಸತ್ಯಸಾಯಿ ಸಭಾಭವನದಲ್ಲಿ ಶಾಸಕ ದಿನಕರ ಶೆಟ್ಟಿ ಅವರು ಕಾರ್ಮಿಕ ಇಲಾಖೆಯಿಂದ ನೀಡಲಾಗುವ ದಿನಸಿ ಕಿಟ್ ಗಳನ್ನು ವಕ್ಕನಳ್ಳಿ ಸುತ್ತಮುತ್ತಲಿನ ೨೦೦ಕ್ಕೂ ಹೆಚ್ಚು ಬಡವರಿಗೆ ವಿತರಣೆ ಮಾಡಿದರು.

ಜನ್ಮದಿನದ ಪ್ರಯುಕ್ತ ಶಾಸಕರ ನಿವಾಸದಲ್ಲಿ ಭೇಟಿಯಾಗದ ಕಾರ್ಯಕರ್ತರು ಸಭಾಭವನದ ಬಳಿ ಬಂದು ಶುಭಾಶಯ ಕೋರಿ ಸಿಹಿ ಹಂಚಿದರು. ನಂತರ ಕಿಟ್ ವಿತರಿಸಿ ಮಾತನಾಡಿದ ಶಾಸಕರು, ಕೋವಿಡ್ ಸಂಕಷ್ಟದ ಸಮಯದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರವು ಬಡವರ್ಗದ ಜನರು ಜೀವನ ಕಟ್ಟಿಕೊಳ್ಳಲು ಸಮಸ್ಯೆಯಾಗಬಾರದು ಎನ್ನುವ ಕಾರಣಕ್ಕೆ ಹಲವು ರೀತಿಯಲ್ಲಿ ನೆರವಾಗಿದೆ ಎಂದರು.

ಸಚಿವ ಶಿವರಾಮ ಹೆಬ್ಬಾರ್ ಅವರು ಅತ್ಯಂತ ಗುಣಮಟ್ಟದ ಕಿಟ್ ಗಳನ್ನು ಎರಡನೇ ಬಾರಿ ಪ್ರತಿ ಜನತೆಗೆ ವಿತರಿಸುತ್ತಿದ್ದಾರೆ. ಯಾರೋ ನಾಲ್ಕು ಮಂದಿಯನ್ನು ಕರೆದು ಕಾಟಾಚಾರಕ್ಕೆ ಅಥವಾ ಪ್ರಚಾರಕ್ಕೆ ಕಿಟ್ ವಿತರಣೆ ಮಾಡುವ ಧೋರಣೆ ಅವರದ್ದಲ್ಲ. ಶಾಸಕನಾಗಿ ನಾನು ಕೂಡ ವೈಯಕ್ತಿಕವಾಗಿ ಜನರಿಗೆ ಸಾಧ್ಯವಾದಷ್ಟು ಸಹಾಯ ಮಾಡುವ ಪ್ರಯತ್ನ ಮಾಡಿದ್ದೇನೆ. ಎಲ್ಲರಿಗೆ ಈ ಸೌಲಭ್ಯ ಕಲ್ಪಿಸುವಲ್ಲಿ ಬಿಜೆಪಿ ಮಂಡಲ ಕೂಡ ಉತ್ತಮ ಕೆಲಸ ಮಾಡಿದೆ ಎಂದರು.

ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ, ಪ್ರಧಾನ ಕಾರ್ಯದರ್ಶಿ ವಿನಾಯಕ ನಾಯ್ಕ, ಪ್ರಮುಖರಾದ ವೆಂಕಟೇಶ ನಾಯ್ಕ ಹೆಗಡೆ, ಮೋಹನ ಶಾನಭಾಗ, ಹಿಂದುಳಿದ ಮೋರ್ಚಾದ ವಿಶ್ವನಾಥ ನಾಯ್ಕ ಮತ್ತಿತರರು ಇದ್ದರು.

ವರದಿ: ನಟರಾಜ ಗದ್ದೆಮನೆ

error: