April 20, 2024

Bhavana Tv

Its Your Channel

ಗಣಪನ ವಿಗ್ರಹದ ಮುಂದೆ ಲಕ್ಷ ಗರಿಕೆಗಳಿಂದ ಗಣಪನ ಕಲಾಕೃತಿ

ವರದಿ: ನಟರಾಜ ಗದ್ದೆಮನೆ, ಕುಮಟಾ

ಕುಮಟಾ ತಾಲೂಕಿನ ಹೊಲನಗದ್ದೆಯ ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ಸತತ ೩೦ನೇ ವರ್ಷ ಪ್ರತಿಷ್ಠಾಪನೆಗೊಂಡ ಗಣಪನ ವಿಗ್ರಹದ ಮುಂದೆ ಲಕ್ಷ ಗರಿಕೆಗಳಿಂದ ನಿರ್ಮಿಸಲಾದ ಗಣಪನ ಕಲಾಕೃತಿ ನೆರೆದ ಭಕ್ತಾದಿಗಳ ಗಮನಸೆಳೆಯಿತು.

ಲೋಕ ಕಲ್ಯಾಣಾರ್ಥವಾಗಿ ಶ್ರೀ ರಾಮಾಂಜನೇಯ ದೇವಾಲಯದ ಭಕ್ತರು ಹಾಗೂ ಆಡಳಿತ ಮಂಡಳಿಯ ಸದಸ್ಯರ ಸಹಕಾರದೊಂದಿಗೆ ೧ ಲಕ್ಷ ಗರಿಕೆಗಳನ್ನು ಸಂಗ್ರಹಿಸಿ ಗಣಪನ ಮುಖವನ್ನು ಹೋಲುವ ಆಕೃತಿಯಂತೆ ಗರಿಕೆಗಳನ್ನು ಜೋಡಿಸಲಾಗಿದೆ. ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿಯ ಸದಸ್ಯ ಜನಾರ್ಧನ ನಾಯ್ಕ ಮಾತನಾಡಿ,” ದೇವಸ್ಥಾನ ಮಂಡಳಿಯ ಸದ್ಯಸರು ಸಹಾಯದಿಂದ ಈ ಗಣಪತಿ ಆಕೃತಿ ಮಾಡಲಾಗಿದೆ. ಸರ್ವರಿಗೂ ಒಳಿತನ್ನು ಮಾಡುವಂತೆ ಈ ಮೂಲಕ ವಿಘ್ನ ನಿವಾರಕನ್ನು ಪೂಜಿಸಲಾಗಿದೆ “ಎಂದರು.

ಪಟ್ಟಣ ಒಳಗೊಂಡoತೆ ಸುತ್ತಲಿನ ಗ್ರಾಮಗಳ ಜನರು ಆಗಮಿಸಿ ಪ್ರತಿಷ್ಠಾಪಿತ ಗಣಪಗೆ ಪೂಜೆ ಸಲ್ಲಿಸಿ ಪುನೀತರಾದರು.

error: