September 27, 2021

Bhavana Tv

Its Your Channel

ಮಹಾತ್ಮಾಗಾಂಧಿ ಪ್ರೌಢಶಾಲೆಯಲ್ಲಿ ತ್ಯಾಜ್ಯ ನಿರ್ವಹಣಾ ಪ್ರಾತ್ಯಕ್ಷಿಕೆ ಕಾರ್ಯಕ್ರಮ

ವರದಿ: ನಟರಾಜ ಗದ್ದೆಮನೆ ಕುಮಟಾ
ಕುಮಟಾ :ಕಸ್ತೂರಬಾ ಇಕೋಕ್ಲಬ್ ಹಾಗೂ ರೋಟರಿ ಏನ್ಸ ಕ್ಲಬ್‌ನ ಸಂಯುಕ್ತ ಆಶ್ರಯದಲ್ಲಿ ಚಿತ್ರಗಿಯ ಮಹಾತ್ಮಾಗಾಂಧಿ ಪ್ರೌಢಶಾಲೆಯಲ್ಲಿ ತ್ಯಾಜ್ಯ ನಿರ್ವಹಣಾ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಏನ್ಸನ ಅಧ್ಯಕ್ಷೆ ಸುಜಾತಾ ಶಾನುಭಾಗರವರು ಮನೋಜ್ಞವಾಗಿ ತ್ಯಾಜ್ಯ, ಅದರ ಪ್ರಕಾರಗಳು, ತ್ಯಾಜ್ಯ ವಿಲೇವಾರಿ ಮಾಡುವ ವಿವಿಧ ವಿಧಾನಗಳ ಜೀವಂತ ಉದಾಹರಣೆಗಳೊಂದಿಗೆ ಪ್ರಾತ್ಯಕ್ಷಿಕೆಯನ್ನು ನೀಡಿದರು.
ಕ್ಯಾರಿಬ್ಯಾಗ್ ಬದಲು ಕ್ಯಾರಿ ಅ ಬ್ಯಾಗ್ ಎನ್ನುತ್ತಾ, ಮೀನಿನ ಕ್ಯಾರಿ ಬ್ಯಾಗನ ಬದಲು ಪುನರ್ಬಳಕೆಯ ಬಕೆಟ್, ಪ್ಲಾಸ್ಟಿಕ್ ಪ್ಲೇಟ್‌ನ ಬದಲು ಅಡಿಕೆ ಎಲೆ ಪ್ಲೇಟ್, ಪರಿಸರಸ್ನೇಹಿ ಟ್ರಾವೆಲ್ ಕಿಟ್ ಹೀಗೆ ಹತ್ತು ಹಲವಾರು ಪ್ಲಾಸ್ಟಿಕ ಬದಲಿ ಪರಿಹಾರವನ್ನು ಸೂಚಿಸಿದರಲ್ಲದೆ, ಹಸಿ ತ್ಯಾಜ್ಯದಿಂದ ಮನೆಯಲ್ಲಿಯೇ ಸಾವಯವ ಗೊಬ್ಬರ ಮಾಡುವ ಅನೇಕ ಮಾರ್ಗೋಪಾಯವನ್ನು ತಮ್ಮ ಉಪನ್ಯಾಸದಲ್ಲಿ ಸಾದರಪಡಿಸಿದರು.
ನೂರಕ್ಕೂ ಅಧಿಕ ಎಸೆಸೆಲ್ಸಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಾಮಾಜಿಕ ಅಂತರದೊAದಿಗೆ ಶಿಸ್ತಿನಿಂದ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಮುನ್ನುಡಿ ಬರೆದರು. ಕೊನೆಯಲ್ಲಿ ಗಣಿತ ಶಿಕ್ಷಕ ಅನಿಲ್ ರೋಡ್ರಿಗೀಸ್ ವಂದನಾರ್ಪಣೆಗೈದರೆ, ಇಕೋ ಕ್ಲಬ್ ಸಂಚಾಲಕ ಕಿರಣ್ ಪ್ರಭು ನಿರೂಪಿಸಿದರು. ಸರ್ವ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿ ವರ್ಗದವರು ಕಾರ್ಯಕ್ರಮಕ್ಕೆ ಸಾಕ್ಷೀಭೂತರಾದರು.

error: