April 25, 2024

Bhavana Tv

Its Your Channel

ಕರೋನ ಆತಂಕ ಮರೆತು ಶಾಲೆಗಳತ್ತ ಹೆಜ್ಜೆ ಹಾಕಿದ ಪುಟಾಣಿ ಮಕ್ಕಳು

ವರದಿ: ನಟರಾಜ ಗದ್ದೆಮನೆ

ಕುಮಟಾ: ತಾಲೂಕಿನಲ್ಲಿ ಹಿರಿಯ ಪ್ರಾಥಮಿಕ ಗುಡಿಗಾರಗಲ್ಲಿ ಶಾಲೆ ಸೋಮವಾರದಿಂದ ಪ್ರಾರಂಭವಾಗಿದ್ದು, ಬಹುದಿನಗಳ ಬಳಿಕ ಶಾಲೆಯಲ್ಲಿ ಮಕ್ಕಳ ಕಲರವ ಕೇಳಿಬಂತು.
ಒAದೂವರೆ ವರ್ಷದ ಬಳಿಕ ವಿದ್ಯಾರ್ಥಿಗಳು ಕೋವಿಡ್ ಆತಂಕ ಮರೆತು ಶಾಲೆಗಳತ್ತ ಹೆಜ್ಜೆ ಹಾಕಿದರು.

ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಸುದೀರ್ಘ ರಜೆಯ ಬಳಿಕ ಶಾಲೆಗೆ ಬಂದ ಮಕ್ಕಳನ್ನು ಶಿಕ್ಷಕರು, ಎಸ್.ಡಿ.ಎಂ.ಸಿ. ಪದಾಧಿಕಾರಿಗಳು ಸೇಬು ಹಣ್ಣು ನೀಡಿ ಸ್ವಾಗತಿಸಿದ್ದು ವಿಶೇಷವಾಗಿತ್ತು.ಇದಕ್ಕೂ ಮುನ್ನ ೧ ರಿಂದ ೫ ನೇ ತರಗತಿಯ ಮಕ್ಕಳನ್ನು ಹಾಗೂ ಪಾಲಕರು ಎಸ್ ಡಿ ಎಂ ಸಿ ಹಾಗೂ ಶಿಕ್ಷಕವೃಂದದವರೆಲ್ಲ ಸೇರಿ ಶ್ರೀ ಶಾಂತಿಕಾ ಪರಮೇಶ್ವರಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು

ಪಾಲಕರಾದ ಶ್ರೀಧರ ಕುಮಟಾಕರ ರವರು ೨೩೬ ಮಕ್ಕಳಿಗೂ ಸೇಬು ಹಣ್ಣನ್ನು ವಿತರಿಸುವ ಮೂಲಕ ಮಕ್ಕಳ ಸಂತಸಕ್ಕೆ ಕಾರಣರಾದರು.ಮಕ್ಕಳಿಗೆ ಪೆನ್ಸಿಲ್ ಹಾಗೂ ಮಾಸ್ಕ ಗಳನ್ನು ವಿತರಿಸಲಾಯಿತು

.ಈ ಸಂದರ್ಭದಲ್ಲಿ ಸಿ. ಆರ್ ಪಿ ವಿಜಯಲಕ್ಷ್ಮೀ ಭಟ್ ಅಧ್ಯಕ್ಷರಾದ ಮಂಜುನಾಥ ರಾಯ್ಕರ್ ಮುಖ್ಯ ಶಿಕ್ಷಕರಾದ ಡಿ ಎಂ ಬಟ್ ಇದ್ದರೂ

error: