April 25, 2024

Bhavana Tv

Its Your Channel

ವಿನಾಕಾರಣ ನನ್ನ ಹೆಸರನ್ನು ಬಳಕೆ ಮಾಡಲಾಗಿದೆ -ಕಲ್ಲಬ್ಬೆ ಗ್ರಾ.ಪಂ.ಅಧ್ಯಕ್ಷ ಗಿರಿಯಾ ಗೌಡ ಬೇಸರ

ಕುಮಟಾ: ಮೂರೂರು ರಸ್ತೆ ಕಾಮಗಾರಿ ವಿಳಂಬದ ಬಗ್ಗೆ ಬೇರೆ ಪಕ್ಷದಿಂದ ನಡೆದ ಪ್ರತಿಭಟನೆಯಲ್ಲಿ ವಿನಾಕಾರಣ ನನ್ನ ಹೆಸರನ್ನು ಬಳಕೆ ಮಾಡಲಾಗಿದೆ ಎಂದು ಕಲ್ಲಬ್ಬೆ ಗ್ರಾ.ಪಂ.ಅಧ್ಯಕ್ಷ ಗಿರಿಯಾ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು ಪ್ರತಿಭಟನೆ ಮಾಡಿದವರ ಹೆಸರಲ್ಲಿ ಕೆಲವೊಂದು ಮಾಧ್ಯಮಗಳು ನನ್ನ ಹೆಸರು ತಳುಕು ಹಾಕುವಂತೆ ಮಾಡಿವೆ ಎಂದು ಕಲ್ಲಬ್ಬೆ ಗ್ರಾ.ಪಂ.ಅಧ್ಯಕ್ಷ ಗಿರಿಯಾ ಗೌಡ ಬೇಸರ ವ್ಯಕ್ತಪಡಿಸಿದರು.
ಶನಿವಾರ ಮಾಧ್ಯಮ ಪ್ರಕಟಣೆ ನೀಡಿ ವಿವರಣೆ ನೀಡಿದ ಅವರು, ಈ ಮೊದಲು ಕಾಂಗ್ರೆಸ್ ಪಕ್ಷದಲ್ಲಿದ್ದ ಸಂದರ್ಭ ಆ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿದ್ದೆ. ನಂತರ ಬಿಜೆಪಿ ಆಡಳಿತ ಮೆಚ್ಚಿ ಈ ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಇಲ್ಲಿ ನಿಷ್ಠೆ ತೋರಿಸಿದ್ದೇನೆ. ಜೆಡಿಎಸ್ ನವರು ಮಾಡಿದ ಪ್ರತಿಭಟನೆಯಲ್ಲಿ ನನ್ನ ಉಪಸ್ಥಿತಿಯಿದೆ ಎಂಬ ತಪ್ಪು ಸಂದೇಶ ರವಾನೆಯಾಗಿದೆ. ದಯವಿಟ್ಟು ತಪ್ಪು ಮಾಹಿತಿಗಳನ್ನು ನೀಡಬಾರದು ಎಂದು ಹೇಳಿದರು.
೨೦೨೦ರ ಸಮಯದಲ್ಲಿ ಮೂರೂರು ರಸ್ತೆ ಕಾಮಗಾರಿ ಪ್ರಾರಂಭವಾಗಿ ತದನಂತರ ನಾನಾ ಕಾರಣಗಳಿಂದ ನಿಧಾನಗತಿಯಲ್ಲಿ ಸಾಗಿದೆ. ಶಾಸಕ ದಿನಕರ ಶೆಟ್ಟಿ ಅವರು ಕ್ಷೇತ್ರದ ಎಲ್ಲೆಡೆ ನಿರೀಕ್ಷೆಗೂ ಮೀರಿದ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಹಿಂದಿನ ಶಾಸಕರು ಚುನಾವಣಾ ಸಂದರ್ಭದಲ್ಲಿ ಮತಗಳನ್ನು ಸೆಳೆಯಲು ತರಾತುರಿಯಲ್ಲಿ ಟೆಂಡರ್ ಕೂಡ ಆಗದೆ ಶಂಕುಸ್ಥಾಪನೆ ಮಾಡಿಟ್ಟು ಹೋದ ಕಾಮಗಾರಿಗಳನ್ನೂ ಕ್ಷಿಪ್ರಗತಿಯಲ್ಲಿ ಮುಗಿಸಿದ್ದಾರೆ. ಕೊರೋನಾ, ನೆರೆ ಮುಂತಾದ ಸಮಸ್ಯೆಗಳ ನಡುವೆಯೂ ಸಾಕಷ್ಟು ಅನುದಾನಗಳನ್ನು ತಂದು ಕಾಮಗಾರಿಗಳನ್ನು ಮುಗಿಸಿದ್ದಾರೆ. ವಿರೋಧ ಪಕ್ಷಗಳಿಗೆ ಯಾವ ಲೋಪದೋಷಗಳೂ ಕಾಣದೇ ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.

ಜನೆವರಿ ೧೯, ೨೦೨೦ರಂದು ಶಂಕುಸ್ಥಾಪನೆ ಮಾಡಿದ ರಸ್ತೆ ಕಾಮಗಾರಿ ಇದಾಗಿದ್ದು, ಕಾಮಗಾರಿ ಶುರುವಾಗಿ ನಾಲ್ಕೈದು ವರ್ಷಗಳಾದರೂ ಮುಗಿಸಿಲ್ಲ ಎಂದೆಲ್ಲಾ ವಿರೋಧ ಪಕ್ಷಗಳು ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಪ್ರಾರಂಭದ ಹಂತದಲ್ಲೇ ಕೊರೋನಾ ಲಾಕ್ ಡೌನ್ ಅಡ್ಡಿಯಾಗಿತ್ತು. ಅನೇಕ ಅಡೆತಡೆಗಳ ನಡುವೆಯೂ ಶಾಸಕರ ಪ್ರಯತ್ನದಿಂದ ಕಾಮಗಾರಿ ಮತ್ತೆ ಶುರುವಾಗಿದೆ ಎಂದರು.

error: