April 25, 2024

Bhavana Tv

Its Your Channel

ಹಿರೇಗುತ್ತಿ ಹೈಸ್ಕೂಲಿನಲ್ಲಿ ಸಂಭ್ರಮದ ಅಜಾದಿ ಕಾ ಅಮೃತ್ ಮಹೋತ್ಸವ.

ಕುಮಟಾ : “ಶತ ಶತಮಾನಗಳಿಂದ ಗುಲಾಮರಾಗಿ ದುಡಿದೂ ದುಡಿದೂ ಬಿಡುಗಡೆ ಹೊಂದಿದ ದಿನದಂದು 1947 ಅಗಸ್ಟ್ 15 ಭಾರತದ ಪಾಲಿಗೆ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ, ಎಂದು ಮಹಾತ್ಮಗಾಂಧೀ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಹೊನ್ನಪ್ಪ ಎನ್ ನಾಯಕ ನುಡಿದರು.
ಅವರು ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನಲ್ಲಿ ಸ್ವಾತಂತ್ರೊö್ಯÃತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸ್ವಾತಂತ್ರೊö್ಯÃತ್ಸವದ ಧ್ಯೇಯೋದ್ದೇಶಗಳನ್ನು ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ತಮಗೆಲ್ಲರಿಗೂ 75ನೇ ಸ್ವಾತಂತ್ರö್ಯದ ಅಮೃತ ಮಹೋತ್ಸವ ಶುಭಾಶಯ ತಿಳಿಸಿದರು.
ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿಯಾದ ಮೋಹನ ಬಿ ಕೆರೆಮನೆ “ದೇಶ ನಮಗೇನು ಮಾಡಿದೆ ಎನ್ನುವುದಕ್ಕಿಂತ ನಾವು ದೇಶಕ್ಕಾಗಿ ಏನು ಮಾಡಿದ್ದೇನೆ, ದೇಶ ನಮ್ಮಿಂದ ಏನನ್ನು ನೀರೀಕ್ಷಿಸುತ್ತದೆ ಎಂಬ ಕಲ್ಪನೆ ನಮ್ಮಲ್ಲಿ ಮೂಡಿ ಕಾರ್ಯ ಕೈಗೊಂಡು ಗುರಿ ತಲುಪಿದಾಗ ಮಾತ್ರ ಸ್ವಾತಂತ್ರೊö್ಯÃತ್ಸವದ ಸಾರ್ಥಕತೆ ಸಾಧ್ಯ” ಎಂದರು..
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಪಾರ್ವತಿ ನಾಯಕ ರವರು “ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ಹೊಂದಿ ಸತ್ಪçಜೆಯಾಗಿ ದೇಶದ ಭವಿಷ್ಯ ರೂಪಿಸುವಂತಾಗಲಿ” ಎಂದರು.
ಮುಖ್ಯೋಧ್ಯಾಪಕರಾದ ರೋಹಿದಾಸ ಗಾಂವಕರ ಮಾತನಾಡಿ “ಬಡವರ ನೊಂದವರ ಹೊಲದಲ್ಲಿ ದುಡಿಯುವ ರೈತರ ಮನೆಗಳಲ್ಲಿ ಸ್ವಾತಂತ್ರö್ಯದ ನಿಜವಾದ ಅರ್ಥ ಕಾಣುವಂತಾಗಲಿ” ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀಕಾಂತ ನಾಯಕ ಸದಸ್ಯರಾದ ನಾಗೇಶ ಟಿ ನಾಯಕ, ರಮಾನಂದ ಪಟಗಾರ, ಶಿಕ್ಷಕರಾದ ಬಾಲಚಂದ್ರ ಹೆಗಡೇಕರ್, ಮಹಾದೇವ್ ಗೌಡ, ವಿಶ್ವನಾಥ ಬೇವಿನಕಟ್ಟಿ, ಎನ್.ರಾಮು.ಹಿರೇಗುತ್ತಿ, ಬಾಲಚಂದ್ರ ಅಡಿಗೋಣ, ಇಂದಿರಾ ನಾಯಕ, ಜಾನಕಿ ಗೊಂಡ, ಶಿಲ್ಪಾ ನಾಯಕ, ಮದನ ನಾಯಕ, ಕವಿತಾ ಅಂಬಿಗ, ಮಹಾತ್ಮಾಗಾಂಧಿ ಇಂಗ್ಲೀಷ್ ಮೀಡಿಯಂ ಸ್ಕೂಲಿನ ಸುಮನ್ ಫರ್ನಾಂಡಿಸ್ ಮತ್ತು ವಸಂತಬಾಯಿ, ಜಯಲಕ್ಷಿö್ಮÃ, ತನುಜಾ, ಪುಷ್ಪಾ ಉಪಸ್ಥಿತರಿದ್ದರು. ನಾಗಶ್ರೀ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಶಾಲೆಯ ವಿದ್ಯಾರ್ಥಿ ಪ್ರತಿನಿಧಿ ಎಮ್.ಜಿ.ನಾಗಭೂಷಣ ಸರ್ವರನ್ನು ಸ್ವಾಗತಿಸಿದರು. ಶಾಲೆಯ ವಿದ್ಯಾರ್ಥಿ ಪ್ರತಿನಿಧಿ ಕಾಂಚಿಕಾ ನಾಯಕ ನಿರೂಪಣೆ ಮಾಡಿದರು. ವಿದ್ಯಾರ್ಥಿ ವಿಜೇತ ಗುನಗ ವಂದಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನೆ ಕಾರ್ಯಕ್ರಮಗಳು ನಡೆದವು. ವಿಜೇತರಿಗೆ ಬಹುಮಾನ ನೀಡಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪ್ರಭಾತಪೇರಿ ದೈಹಿಕ ಶಿಕ್ಷಕರಾದ ನಾಗರಾಜ ನಾಯಕ ಉಸ್ತುವಾರಿಯಲ್ಲಿ ನಡೆಯಿತು. ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿಯನ್ನು ನೀಡಲಾಯಿತು. ಎಲ್ಲರೂ ಸ್ವಾತಂತ್ರ‍್ಯೋತ್ಸವದ ಸವಿಯನ್ನು ಅನುಭವಿಸಿದರು.

error: