April 23, 2024

Bhavana Tv

Its Your Channel

ನ.12 ರಿಂದ 16 ವರೆಗೆ ನಡೆಯಲಿರುವ ಕುಮಟಾ ವೈಭವ

ಕುಮಟಾ ಪಟ್ಟಣದ ಮಣಕಿ ಮೈದಾನದಲ್ಲಿ ನ.12 ರಿಂದ 16 ವರೆಗೆ ನಡೆಯಲಿರುವ ಕುಮಟಾ ವೈಭವದಲ್ಲಿ ಕನ್ನಡ ಮತ್ತು ಹಿಂದಿಯ ಖ್ಯಾತ ಕಲಾವಿದರು ಪಾಲ್ಗೊಳ್ಳುವ ಮೂಲಕ ಈ ವರ್ಷ ಅದ್ಧೂರಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ತಾಂಡವ ಕಲಾ ನಿಕೇತನದ ಅಧ್ಯಕ್ಷ ಮಂಜುನಾಥ ನಾಯ್ಕ ತಿಳಿಸಿದರು.

ಅವರು ಪಟ್ಟಣದ ಖಾಸಗಿ ಹೊಟೆಲ್‌ನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕೆ.ಜಿ.ಎಫ್ ಮತ್ತು ಶ್ರೀವಲ್ಲಿ ಚಿತ್ರದ ಕಲಾವಿದರು, ಗಾಯಕರು, ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಯ ಕಲಾವಿದರು, ಕರ‍್ಸ್ ಕನ್ನಡ ವಾಹಿನಿಯ ಸಂದೇಶ, ದಿವ್ಯಾ ರಾಮಚಂದ್ರ ಪಾಲ್ಗೊಳ್ಳಲಿದ್ದಾರೆ. ಇಂಡಿಯನ್ ಐಡಿಯಲ್ ಟೀಮ್ ಸೇರಿದಂತೆ ಒಂದು ದಿನ ಕನ್ನಡದ ಖ್ಯಾತ ಕಲಾವಿದರು ಆಗಮಿಸುವ ನೀರಿಕ್ಷೆಯಿದೆ. ಇದನ್ನು ಕುಮಟಾ ವೈಭವ ಕಾರ್ಯಕ್ರಮದ 2 ದಿನ ಮುಂಚಿತವಾಗಿ ಬಹಿರಂಗಪಡಿಸಲಾಗುತ್ತದೆ ಎಂದರು.

ಯಕ್ಷಗಾನ, ಭರತನಾಟ್ಯ, ನೃತ್ಯ ಸೇರಿದಂತೆ ಹಾಲಕ್ಕಿ ಸಮಾಜದ ಸುಗ್ಗಿ ಕುಣಿತ, ಗುಮಟೆಪಾಂಗ್, ಸಿದ್ಧಿ ಜನಾಂಗದ ನೃತ್ಯಗಳಿಗೆ ಅವಕಾಶ ನೀಡಿದ್ದೇವೆ. ಕುಮಟಾ ವೈಭವ ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿಮೀತವಾಗಿರದೇ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಸದಾ ನೆನಪಿಸುವಂತಹ ಕಾರ್ಯಕ್ರಮ ಆಯೋಜಿಸುತ್ತೇವೆ ಎಂದ ಅವರು, ಕುಮಟಾದ ಸಂಸ್ಕೃತಿಯ ಪ್ರತೀಕವಾಗಿ ಹಾಲಕ್ಕಿ ಸಮಾಜದವರಿಂದ ನ.11 ಮತ್ತು 13 ರಂದು ಹಾಲಕ್ಕಿ ಚುಂಚಾದ್ರಿ ವಾಲಿಬಾಲ್ ಕಫ್ ನಡೆಯಲಿದ್ದು, ಅದಕ್ಕೆ ಕುಮಟಾ ವೈಭವ ಸಮಿತಿ ಸಂಪೂರ್ಣ ಸಹಕಾರ ನೀಡುತ್ತೇವೆ. 5 ಸಾಧಕರಿಗೆ ಮಾಶಾಸನ ನೀಡುತ್ತೇವೆ ಎಂದರು.
ಹಾಲಕ್ಕಿ ಸಮಾಜದ ಮುಖಂಡ ಮೋಹನದಾಸ ಗೌಡ ಮಾತನಾಡಿ, ಕುಮಟಾ ವೈಭವದ ಜತೆಯಲ್ಲಿ ಹೊನಲುಬೆಳಕಿನ ಜಿಲ್ಲಾ ಮಟ್ಟದ ಹಾಲಕ್ಕಿ ಚುಂಚಾದ್ರಿ ವಾಲಿಬಾಲ್ ಪಂದ್ಯಾವಳಿ ನ.11 ರಂದು ಮಧ್ಯಾಹ್ನ 2 ಘಂಟೆಗೆ ಉದ್ಘಾಟನೆಗೊಳ್ಳಲಿದ್ದು, ಆದಿಚುಂಚನಗಿರಿ ಮಠದ ಪ್ರಧಾನಕಾರ್ಯದರ್ಶಿ ಶ್ರೀಪ್ರಸನ್ನನಾಥ ಸ್ವಾಮೀಜಿ ಉದ್ಘಾಟನೆಗೊಳಿಸಲಿ, ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಚಂದಾವರ ಸೀಮೆಯ ಗುರು ಗೌಡ ದೇವು ನಾರಾಯಣ ಗೌಡ, ಹರಿಟಾ ಸೀಮೆಯ ಗುರು ಗೌಡ ಫಕೀರ ಗೌಡ, ನುಶಿಕೋಟೆ ಸೀಮೆಯ ಗುರು ಗೌಡ ಮಂಕಾಳು ಗೌಡ, ಗೋಕರ್ಣ ಸೀಮೆಯ ಗುರು ಗೌಡ ಗೋಪಾಲ ಗೌಡ, ಕುಂಬಾರಗದ್ದೆ ಸೀಮೆಯ ಗುರು ಗೌಡರಾದ ಬೀರಪ್ಪ ಗೌಡ, ಅರುಣ ಗೌಡ, ಕಡವಾಡ ಸೀಮೆಯ ಗುರು ಗೌಡ ಗಣೇಶ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸುಕ್ರಿ ಗೌಡ, ತುಳಸಿ ಗೌಡ ಪಾಲ್ಗೊಳ್ಳಲಿದ್ದಾರೆ ಎಂದರು.
ನ.12 ರಂದು ಮಧ್ಯಾಹ್ನ 3.30 ಘಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮಿರ್ಜಾನ ಶಾಖಾಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿಸಲಿದ್ದಾರೆ. ಮಧ್ಯಾಹ್ನ 3.30 ಘಂಟೆಗೆ ಸೀಮಾ ಮಟ್ಟದಲ್ಲಿ ವಿಜೇತ ತಂಡಗಳ ನಡುವೆ ಪಂದ್ಯಾವಳಿ ನಡೆಯಲಿದ್ದು, ರಾತ್ರಿ 9 ಘಂಟೆಗೆ ಬಹುಮಾನ ವಿತರಣೆ ಮತ್ತು ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕುಮಟಾ ವೈಭವ ಸಮಿತಿಯ ನಾಗೇಶ ನಾಯ್ಕ ಕಲಭಾಗ, ನಿರಂಜನ ನಾಯ್ಕ, ಗಣೇಶ ನಾಯ್ಕ ಹೊದ್ಕೆ, ರವಿ ಶೇಟ್, ರವಿ ಗಾವಡಿ, ಮಂಜು ಜೈನ್, ನರಸಿಂಹ ಭಟ್ಟ ಕಡತೋಕಾ, ನಾರಾಯಣ ಗೌಡ, ಮಾರುತಿ ಗೌಡ, ವೆಂಕಟೇಶ ಗೌಡ, ವಿನಯ ಗೌಡ, ಪ್ರಹ್ಲಾದ ಗೌಡ ಸೇರಿದಂತೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

ವರದಿ: ವಿಶ್ವನಾಥ ಜಿ ನಾಯ್ಕ ಕುಮಟಾ

error: