April 20, 2024

Bhavana Tv

Its Your Channel

ಉತ್ತರಕನ್ನಡ ಜಿಲ್ಲಾ ಕುಮಟಾ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿ ಕಾಂಗ್ರೆಸ್ ಗೆ ಶಿವಾನಂದ ಹೆಗಡೆ ಅರ್ಜಿ

ಕುಮಟಾ:- ಕೆಪಿಸಿಸಿ ೨೦೨೩ ರ ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್ ಬಿ ಫಾರ್ಮ್ ಬಗ್ಗೆ ಆಕಾಂಕ್ಷಿಗಳಿAದ ಅರ್ಜಿ ಆಹ್ವಾನಿಸಿದೆ. ರಾಜ್ಯಾದ್ಯಂತ ಹಲವು ಆಕಾಂಕ್ಷಿಗಳು ಕೆಪಿಸಿಸಿ ಕಛೇರಿಗೆ ಆಗಮಿಸಿ ಅರ್ಜಿ ಸಲ್ಲಿಸುತ್ತಿದ್ದು ಕುಮಟಾ ವಿಧಾನಸಭಾ ಕ್ಷೇತ್ರದಿಂದ ಉತ್ತರ ಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಭಾಸ್ಕರ ಪಟಗಾರ ಇಂದು ಅರ್ಜಿ ಸಲ್ಲಿಸಿದರು.


ಈ ಸಂದರ್ಭದಲ್ಲಿ ಡಾ. ಜಿ ಪರಮೇಶ್ವರ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ನಾಗಭೂಷಣ, ಎಲ್ ಎನ್ ಭಟ್, ಉದ್ಯಮಿ ನಾಗರಾಜ ಭಟ್ಟ, ದತ್ತಾತ್ರೇಯ ಶೆಟ್ಟಿ, ಬಾಲು ಭಂಡಾರಿ, ಕುಮಾರಿ ನೇಹಾ ಹೆಗಡೆ ಮತ್ತು ನಾಗರಾಜ ಬೆಂಗಳೂರು ಮುಂತಾದವರು ಉಪಸ್ಥಿತರಿದ್ದರು.

error: