March 29, 2024

Bhavana Tv

Its Your Channel

ಹಿರೇಗುತ್ತಿ ಮಹಾತ್ಮಗಾಂಧಿ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳ ಪಾಲಕರ ಸಭೆ

ಕುಮಟಾ: “ತಮ್ಮ ಮಕ್ಕಳ ಶಿಕ್ಷಣದ ಗುಣಮಟ್ಟ ಹಾಗೂ ಕಲಿಕೆಯಲ್ಲಿ ಮಕ್ಕಳ ಫಲಿತಾಂಶದ ಗುಣಮಟ್ಟ ಮತ್ತು ಭವಿಷ್ಯ ಹಾಗೂ ಪರೀಕ್ಷಾ ದೃಷ್ಟಿಯಿಂದಲೂ ತಮ್ಮ ಮಕ್ಕಳನ್ನು ಯಾವ ರೀತಿಯ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬುವುದರ ಉದ್ದೇಶದಿಂದ ಪಾಲಕರ ಸಭೆಯನ್ನು ಆಯೋಜಿಸಿದ್ದೇವೆ” ಎಂದು ಶಾಲಾ ಆಡಳಿತ ಮಂಡಳಿ ಮಹಾತ್ಮಗಾಂಧೀ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಹೊನ್ನಪ್ಪ ಎನ್ ನಾಯಕ ನುಡಿದರು.
ಅವರು ಹಿರೇಗುತ್ತಿ ಮಹಾತ್ಮಗಾಂಧಿ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳ ಪಾಲಕರ ಸಭೆಯಲ್ಲಿ ಮಾತನಾಡುತ್ತ “ಕಾಲ ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗಬೇಕು ಜೊತೆಗೆ ನಾವು ನೀವು ಶಿಕ್ಷಣ ಕ್ಷಣ ಕ್ಷಣ ಸಾಗುತ್ತಿರಬೇಕು” ಎಂಬAತೆ ನಮ್ಮ ಇಂಗ್ಲೀಷ್ ಮೀಡಿಯಂ ಸ್ಕೂಲ್ ಉತ್ತಮವಾದ ಶಿಕ್ಷಣವನ್ನು ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸೌಲಭ್ಯಗಳೊಂದಿಗೆ ಅತ್ಯುತ್ತಮವಾದ ಶಿಕ್ಷಣವನ್ನು ನೀಡುವ ಯೋಜನೆಯನ್ನು ಹಾಕಿಕೊಂಡಿದೆ” ಎಂದರು.
ಎನ್.ಟಿ ನಾಯಕ ಆಡಳಿತ ಮಂಡಳಿಯ ಸದಸ್ಯರು ಮಾತನಾಡಿ “ವಿದ್ಯಾರ್ಥಿಗಳ ಕಲಿಕೆಯಲ್ಲಿ ಶಿಕ್ಷಕರ ಜೊತೆಗೆ ಪಾಲಕರ ಜವಬ್ದಾರಿಯೂ ಅತೀ ಮುಖ್ಯ. ಪ್ರಯತ್ನ ಮತ್ತು ಶೃದ್ಧೆಯಿಂದ ಎಂತಹ ವಿದ್ಯೆಯನ್ನಾದರೂ ಕರಗತ ಮಾಡಿಕೊಳ್ಳಬಹುದು” ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಮುಖ್ಯಾಧ್ಯಾಪಕಿ ಸುಮನ್ ಫರ್ನಾಂಡೀಸ್ ಮಾತನಾಡಿ “ಪ್ರತಿಯೊಬ್ಬರಿಗೂ ಗುರಿ ಮತ್ತು ಕನಸು ಇರಬೇಕು. ಅಂತಹ ಗುರಿ ಮತ್ತು ಕನಸಿಗೆ ಉತ್ತಮ ಶಿಕ್ಷಣ ಅವಶ್ಯಕ. ಅಂತಹ ಶಿಕ್ಷಣದ ಪ್ರಗತಿಗೆ ತಮ್ಮೆಲ್ಲರ ಸಲಹೆ, ಸೂಚನೆ ಅವಶ್ಯಕವಾಗಿರುತ್ತದೆ” ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಆಡಳಿತ ಮಂಡಳಿ ಸೆಕ್ರೆಟರಿ ಮೋಹನ ಬಿ ಕೆರೆಮನೆ, ಚಂದ್ರಹಾಸ ನಾಯಕ ಮೊಗಟಾ, ಸಂಧ್ಯಾ ನಾಯಕ ಹಾಗೂ ಶಿಕ್ಷಕರಾದ ಬಾಲಚಂದ್ರ ಅಡಿಗೋಣ, ಜಯಶ್ರೀ ಪಟಗಾರ, ತನುಜಾ ಹರಿಕಂತ್ರ ಉಪಸ್ಥಿರಿದ್ದರು.
ಕಾರ್ಯಕ್ರಮವು ನಾಗಶ್ರೀ ಸಂಗಡಿಗರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ವಸಂತಬಾಯಿ ಎಮ್ ಸರ್ವರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸುಮನ್ ಫರ್ನಾಂಡೀಸ್ ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪಾಲಕರಾದ ಸುನೀಲ್ ಕಾಮತ್, ಜಗದೀಶ ನಾಯಕ, ಸ್ವಾತಿ ನಾಯಕ, ಭಾಗ್ಯ ನಾಯಕ, ವೈಶಾಲಿ ಕಾಮತ್ ಪಾಲಕ ವೃಂದದವರು ಉಪಸ್ಥಿತರಿದ್ದರು. ಗೋಪಾಲಕೃಷ್ಣ ಗುನಗಾ, ಗೋವಿಂದ ನಾಯ್ಕ, ಪುಷ್ಪಾ ಪಟಗಾರ ಸಹಕರಿಸಿದರು.

error: