March 29, 2024

Bhavana Tv

Its Your Channel

ಹಿರೇಗುತ್ತಿ ಹೈಸ್ಕೂಲಿನಲ್ಲಿ ತಾಯಂದಿರ ಸಭೆ

ಹಿರೇಗುತ್ತಿ: “ಮಗುವಿನ ಸರ್ವತೋಮುಖ ಬೆಳವಣಿಗೆಗೆ ತಾಯಿ ಸ್ಥಾನ ಮಹತ್ವದ್ದು. ತಾಯಿ ಮಗುವಿನ ಪ್ರತಿ ಹಂತದಲ್ಲಿ ಧೈರ್ಯ ತುಂಬುತ್ತಾಳೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪರಿಶ್ರಮಿಸುತ್ತಾಳೆ. ಎಂದು ಹೈಸ್ಕೂಲ್ ಆಡಳಿತ ಮಂಡಳಿ ಮಹಾತ್ಮಾಗಾಂಧಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಹೊನ್ನಪ್ಪ ನಾಯಕ ನುಡಿದರು.
ಅವರು ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನಲ್ಲಿ ನಡೆದ 10 ನೇ ತರಗತಿಯ ವಿದ್ಯಾರ್ಥಿಗಳ ತಾಯಂದಿರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ “ವಿದ್ಯಾರ್ಥಿಗಳ ತಾಯಂದಿರು ಹಾಗೂ ಶಿಕ್ಷಕರು ಮಕ್ಕಳ ಕಲಿಕೆಯನ್ನು ಉತ್ತಮಗೊಳಿಸಲು ಯಾವ ರೀತಿ ಯೋಜನೆ ಹಮ್ಮಿಕೊಳ್ಳಬೇಕು ಎಂಬ ಘನ ಉದ್ದೇಶವನ್ನು ಈ ತಾಯಂದಿರ ಸಭೆ ಹೊಂದಿದೆ” ಎಂದರು.

 ಮಾಜಿ ತೊರ್ಕೆ ಗ್ರಾಮ ಪಂಚಾಯತ ಅಧ್ಯಕ್ಷೆ ಹಾಗೂ ಪಾಲಕ ಪ್ರತಿನಿಧಿ ಸುಮಿತ್ರಾ ಗೌಡ ಮೂಲೆಕೇರಿ ಮಾತನಾಡಿ “ಹಿರೇಗುತ್ತಿ ಹೈಸ್ಕೂಲಿನಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ, ಉತ್ತಮ ನುರಿತ ಶಿಕ್ಷಕರಿದ್ದಾರೆ. ನಮ್ಮ ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿದೆ. ಶಿಕ್ಷಕರು ತ್ಯಾಗ ಮತ್ತು ಪ್ರೀತಿಯಿಂದ ಶಿಕ್ಷಣ ನೀಡುವಂತಾಗಲಿ” ಎಂದರು.

   ಮುಖ್ಯಾಧ್ಯಾಪಕ  ರೋಹಿದಾಸ ಎಸ್ ಗಾಂವಕರ ಮಾತನಾಡಿ “ನಮ್ಮ ಶಾಲೆಯಲ್ಲಿ ನುರಿತ ಹಾಗೂ ಅನುಭವಿ ಶಿಕ್ಷಕರು, ಹಲವು ಸ್ಪರ್ಧಾತ್ಮಕ ಪರೀಕ್ಷಾ ತಯಾರಿ, ಶಿಸ್ತಿನಿಂದ ಕೂಡಿದ ವಿದ್ಯಾಭ್ಯಾಸ & ಗಣಕೀಕೃತ ಶಿಕ್ಷಣ, ಉತ್ತಮ ವಿಜ್ಞಾನ ಪ್ರಯೋಗಾಲಯ ಹಾಗೂ ಗ್ರಂಥಾಲಯ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ” ಎಂದರು.

 ಕಾರ್ಯಕ್ರಮದ ವೇದಿಕೆಯಲ್ಲಿ ಪಾಲಕರಾದ ಲಕ್ಷಿö್ಮÃ ಗೌಡ, ಶಿಕ್ಷಕರಾದ ಎನ್ ರಾಮು ಹಿರೇಗುತ್ತಿ, ವಿಶ್ವನಾಥ ಬೇವಿನಕಟ್ಟಿ, ಬಾಲಚಂದ್ರ ಹೆಗಡೇಕರ, ನಾಗರಾಜ ನಾಯಕ, ಮಹಾದೇವ ಗೌಡ, ಬಾಲಚಂದ್ರ ಅಡಿಗೋಣ, ಜಾನಕಿ ಗೊಂಡ, ಇಂದಿರಾ ನಾಯಕ, ಶಿಲ್ಪಾ ನಾಯಕ, ಮದನ ನಾಯಕ, ಕವಿತಾ ಅಂಬಿಗ, ಉಪಸ್ಥಿತರಿದ್ದರು. 
    ನಾಗಶ್ರೀ  ಸಂಗಡಿಗರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ವಿದ್ಯಾರ್ಥಿ ಎಮ್.ಜಿ.ನಾಗಭೂಷಣ ಸರ್ವರನ್ನೂ ಸ್ವಾಗತಿಸಿದರು. ವಿದ್ಯಾರ್ಥಿ ಕಾಂಚಿಕಾ ನಾಯಕ ನಿರೂಪಣೆ ಮಾಡಿದರು. ವಿದ್ಯಾರ್ಥಿ ವಿಜೇತ ಗುನಗಾ ವಂದಿಸಿದರು. ಗೋಪಾಕೃಷ್ಣ ಗುನಗಾ, ಗೋವಿಂದ ನಾಯ್ಕ  ಸಹಕರಿಸಿದರು. ಎಲ್ಲಾ ವಿದ್ಯಾರ್ಥಿ ತಾಯಂದಿರು ಉಪಸ್ಥಿತರಿದ್ದರು.    
error: