ಕುಮಟಾ ತಾಲೂಕಿನ ಮೂರೂರು ಜಾಕನಕೆರೆ ಶ್ರೀ ಜಟಗ ಮಾಸ್ತಿ ದೇವರ ವರ್ಧಂತಿ ಉತ್ಸವದ ಅಂಗವಾಗಿ ರಾತ್ರಿ ಶ್ರೀ ಮಾರುತಿ ಭಜನಾ ಮಂಡಳಿಯಿAದ ಭಜನಾ ಸಂಕೀರ್ತನೆ ನಡೆಯಿತು.
ಬೆಳಿಗ್ಗೆಯಿಂದ ಸಂಜೆಯ ತನಕ ಶ್ರೀ ದೇವರ ಸನ್ನಿದಿಯಲ್ಲಿ ದೇವತಾ ಪ್ರಾರ್ಥನೆ, ಹೋಮ, ಬಲಿ, ಪೂರ್ಣಾಹುತಿ, ಅನ್ನಸಂತರ್ಪಣೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನಡೆದವು.
ರಾತ್ರಿ ಕುಮಟಾದ ಶ್ರೀ ಮಾರುತಿ ಭಜನಾ ಮಂಡಳಿಯಿAದ ಭಕ್ತಿ ಭಜನಾ ಕಾರ್ಯಕ್ರಮ ನಡೆಯಿತು. ಗಾಯಕ ಶಂಕರ್ ನಾಯ್ಕ್ ಕಂಠದಲ್ಲಿ ಕೇಳಿ ಬಂದ ಜೈ ಜೈ ಹನುಮಾನ್ ಭಕ್ತಿಗೀತೆಗೆ, ಊರಿನ ಪುಟಾಣಿ ಮಕ್ಕಳೆಲ್ಲ ಕುಣಿದು ಭಕ್ತಿಭಾವದಲ್ಲಿ ಸಂಭ್ರಮಿಸಿದರು. ಮಾರುತಿ ನಾಯ್ಕ್ ಕೂಜಳ್ಳಿ, ವೀರೇಂದ್ರ ಗುನಗ, ಸೋನಾಲಿ ನಾಯ್ಕ್ ಮತ್ತಿತರರು ಹಾಡಿದರು. ಇವರಿಗೆ ಪೂರಕವಾಗಿ ವಿಜಯ ಮಹಾಲೆ ಹಾರ್ಮೋನಿಯಂ ಸಾಥ್ ಹಾಗೂ ಹರೀಶ್ ಶೇಟ್ ತಬಲಾ ಸಾಥ್ ನೀಡಿ ಸಹಕರಿಸಿದರು.
ವರದಿ: ನರಸಿಂಹ ನಾಯ್ಕ್ ಹರಡಸೆ.
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ