February 14, 2025

Bhavana Tv

Its Your Channel

ಸ್ವಚ್ಚತೆಯೇ ಆರೋಗ್ಯ ಎನ್ನುವ ಘೋಷವಾಕ್ಯದಡಿಯಲ್ಲಿ ಪ್ರತಿವಾರ ಯುವಾ ಬ್ರಿಗೇಡ್ ಕುಮಟಾ ವತಿಯಿಂದ ದಂತೆ ಈ ವಾರ ಬಸ್ ತಂಗುದಾಣ ಸ್ವಚ್ಚ

ಕುಮಟಾ ; ಸ್ವಚ್ಚತೆಯೇ ಆರೋಗ್ಯ ಎನ್ನುವ ಘೋಷವಾಕ್ಯದಡಿಯಲ್ಲಿ ಪ್ರತಿವಾರದಂತೆ ಈ ವಾರವು ತಾಲೂಕಿನ ಹೃದಯಭಾಗದಲ್ಲಿ ಇರುವ ಬಸ್ ತಂಗುದಾಣವು ಅನೇಕ ದಿನಗಳಿಂದ ಬಣ್ಣದಿಂದ ಮಾಸಿದ್ದು ಅದನ್ನು ಇಂದು ಯುವಾ ಬ್ರಿಗೇಡ್ ಕುಮಟಾ ಕಾರ್ಯಕರ್ತರು ಸೇರಿ ಸ್ವಚ್ಚ ಮಾಡಿ ಬಣ್ಣ ಬಳಿದರು, ಗಿಬ್ ಸರ್ಕಲ್ ಹತ್ತಿರದ ಬಸ್ ತಂಗುದಾದ ಸುತ್ತಲು ಸ್ವಚ್ಚಮಾಡಿ ಬಣ್ಣ ಬಳಿಯಲಾಯಿತುಇದು ಯುವಾ ಬ್ರಿಗೇಡ್ ಕುಮಟಾ ತಂಡ ಬಣ್ಣ ಬಳಿಯುತ್ತಿರುವ 6ನೇ ಬಸ್ ತಂಗುದಾಣವಾಗಿದೆ. ಹೆಗಡೆ ಕ್ರಾಸ್, ಮೂರುರ್ ಕ್ರಾಸ, ಉಂಚಗಿ, ತಲಗೇರಿ, ಗಿಬ್ ಸರ್ಕಲ್, ಹೊನ್ನಮಾಂ, ಗೋರೇ ಕ್ರಾಸ್, ಹೆಗಲೆ ಕ್ರಾಸ್, ಹೆಗಡೆ ಹೀಗೆ ಬಸ್ ನಿಲ್ದಾಣಗಳನ್ನು ಸ್ವಚ್ಚಗೊಳಿಸಿ ಸ್ವಾರ್ವಜನಿಕರಿಗೆ ಅನುವು ಮಾಡಿಕೊಟ್ಟಿದ್ದಾರೆ.
ಯುವಾ ಬ್ರಿಗೇಡ್ ತಾಲೂಕ ಸಂಚಾಲಕ ಪ್ರಕಾಶ ನಾಯ್ಕ, ಜಿಲ್ಲಾ ಸಂಚಾಲಕ ಸತೀಶ ಪಟಗಾರ. ಸದಸ್ಯರಾದ ಬಬ್ಲು, ಗಿರೀಶ ಪಟಗಾರ, ರಾಘವೇಂದ್ರ ಗಾಡಿಗ, ಮಾರುತಿ ಪಟಗಾರ, ಚಿದಂಬರ ಅಂಬಿಗ, ಸಚೀನ ಭಂಡಾರಿ, ಸಂದೀಪ ಮಡಿವಾಳ, ರವೀಶ ನಾಯ್ಕ, ಕಿರಣ ಕಡೆಮನೆ, ಅಣ್ಣಪ್ಪ ನಾಯ್ಕ ಇದ್ದರು.

error: