April 19, 2024

Bhavana Tv

Its Your Channel

ಮಂಕಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ತಂಬಾಕು ಮಾರಾಟಗಾರರ ಅಂಗಡಿಗಳು ಮೇಲೆ ಅಧಿಕಾರಿಗಳು ದಾಳಿ

ಹೊನ್ನಾವರ,:- ದಿನಾಂಕ: ೦೮/೦೭/೨೦೨೧ರ ಪೂರ್ವಾಹ್ನದಿಂದ ಅಪರಾಹ್ನ ೨ ಘಂಟೆಯವರೆಗೆ ಜಿಲ್ಲಾ ತಂಬಾಕು ನಿಯಂತ್ರಣಾ ಘಟಕ ಕಾರವಾರ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ಹೊನ್ನಾವರ, ಪಟ್ಟಣ ಪಂಚಾಯತ ಮಂಕಿ, ಹಾಗೂ ಆರಕ್ಷಕ ಠಾಣೆ ಮಂಕಿಯನ್ನೊಳಗೊAಡ ತಂಬಾಕು ನಿಯಂತ್ರಣಾ ಅಧಿಕಾರಿಗಳ ತಂಡವು ಪಟ್ಟಣ ಪಂಚಾಯತ ಮಂಕಿ ವ್ಯಾಪ್ತಿಯಲ್ಲಿ ಹಠಾತ್ ದಾಳಿ ನಡೆಸಿ, ತಂಬಾಕು ಮಾರಾಟಗಾರರ ಅಂಗಡಿಗಳಿಗೆ ತೆರಳಿ ಪರಿಶೀಲಿಸಿದ್ದು, ಕೋಟ್ಟಾ ಕಾಯ್ದೆ ೨೦೦೩ರ ಅಡಿಯಲ್ಲಿ ಸೆಕ್ಷನ್ (೪)ರಡಿಯಲ್ಲಿ ೧೭ ಕೇಸು , ಸೆಕ್ಷನ್-೬ (ಎ) ರಡಿಯಲ್ಲಿ ೧೭ ಕೇಸು ದಾಖಲಿಸಿ ಒಟ್ಟೂ ಅಂಗಡಿಕಾರರಿAದ ೨೯೦೦ ರೂಪಾಯಿಗಳನ್ನು ದಂಡ ವಿಧಿಸಲಾಗಿದೆ.
ಈ ಸಂಧರ್ಭದಲ್ಲಿ ಅಂಗಡಿಕಾರರಿಗೆ ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಪ್ರೇಮಕುಮಾರ ನಾಯ್ಕ ಹಾಗೂ ತಾಲೂಕಾ ಆರೋಗ್ಯಾಧಿಕಾರಿಯಾದ ಡಾ|| ಉಷಾ ಹಾಸ್ಯ ಗಾರ್ ರವರು ತಂಬಾಕು ನಿಯಂತ್ರಣಾ ಹಾಗೂ ಜಾರಿಯಲ್ಲಿರುವ ಕಾಯ್ದೆಗಳು, ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ನಿಷೇದ, ಅನಧಿಕೃತವಾಗಿ ನಾಮಫಲಕ ಅಳವಡಿಸದೇ ನಿಷೇದಿತ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡವುದು, ತಂಬಾಕು ಉತ್ಪನ್ನ ಬಳಕೆಯಿಂದ ಸಾರ್ವಜನಿಕರ ಮೇಲೆ ಉಂಟಾಗುವ ದುಷ್ಪರಿಣಾಮದ ಕುರಿತು ಆರೋಗ್ಯ ಶಿಕ್ಷಣ ನೀಡಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಅಜೇಯ ಭಂಡಾರಕರ್‌ರವರು ದಾಳಿಯಲ್ಲಿ ಭಾಗವಹಿಸಿ, ಮಂಕಿ ಪಟ್ಟಣ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟದ ಕುರಿತು ಅಂಗಡಿಕಾರರಿಗೆ ಎಚ್ಚರಿಕೆ ನೀಡಿ ಸರ್ಕಾರದ ನಿಯಮವನ್ನು ಮೀರಿ ವ್ಯವಹರಿಸಿದ್ದಲ್ಲಿ ಅಂಗಡಿಗಳ ಪರವಾನಿಗೆಯನ್ನು ಮುಟ್ಟುಗೋಲು ಹಾಕಿಕೊಂಡು ಕ್ರಮ ವಹಿಸಲಾಗುವುದು. ಹಾಗೂ ಕೋವಿಡ್ -೧೯ ಸಾಂಕ್ರಾಮಿಕ ರೋಗ ಹತೋಟಿಯ ಕುರಿತು ಸಾಮಾಜಿಕ ಅಂತರ, ಮಾಸ್ಕ ಧರಿಸುವಿಕೆ, ಕೋವಿಡ್ -೧೯ ಲಸಿಕೆ ಪಡೆಯುವ ಬಗ್ಗೆ ವಿವರಿಸಿ ಈ ವರೆಗೆ ಪಟ್ಟಣ ಪಂಚಾಯತ ಮಂಕಿ ವ್ಯಾಪ್ತಿಯಲ್ಲಿ ಸಾಮಾಜಿಕ ಅಂತರ ಉಲ್ಲಂಘನೆ ಪ್ರಕರಣ ೦೭ ಮಾಸ್ಕ ಧರಿಸದ ಇರುವುದು ೧೬೮ ಒಟ್ಟೂ ಇಲ್ಲಿಯವರೆಗೆ ಮೊತ್ತ ೨೦೩೦೦ ಅನ್ನು ಪಟ್ಟಣ ಪಂಚಾಯತ ಮಂಕಿ ವತಿಯಿಂದ ಸಂಗ್ರಹಿಸಲಾಗಿದೆ. ಆದುದರಿಂದ ಸಾರ್ವಜನಿಕರು ಹಾಗೂ ಅಂಗಡಿಕಾರರು ಸೂಕ್ತ ಮುಂಜಾಗ್ರತಾ ಕ್ರಮ ವಹಿಸಿ ಸರ್ಕಾರದಿಂದ ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿಯಂತೆ ನಿಯಮ ಪಾಲನೆ ಕಡ್ಡಾಯವಾಗಿರುತ್ತದೆ ಎಂದು ತಿಳುವಳಿಕೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣಾ ಘಟಕದ ಸಿಬ್ಬಂಧಿಯಾದ * ನದಾಫ್ ಸಾಬ್, ಪಟ್ಟಣ ಪಂಚಾಯತ ಮಂಕಿಯ ಸಿಬ್ಬಂಧಿಗಳಾದ ಶ್ರೀ ವಿಷ್ಣು ನಾಯ್ಕ , ಶ್ರೀನಿವಾಸ ಹಳೇರ, ಗಣೇಶ ನಾಯ್ಕ, ಮಂಜುನಾಥ ನಾಯ್ಕ ಹಾಗೂ ಮಂಕಿಯ ಆರಕ್ಷಕಠಾಣೆಯ ಸಹಾಯಕ ಪೋಲಿಸ್ ನಿರೀಕ್ಷಕರಾದ ಶ್ರೀ ಅಪ್ಪಣ್ಣ ರವರು ದಾಳಿಯಲ್ಲಿ ಭಾಗವಹಿಸಿದ್ದರು.

error: