April 24, 2024

Bhavana Tv

Its Your Channel

ಗೋಲ್ ಇಂಟರ್ ನ್ಯಾಶನಲ್ ಪಬ್ಲಿಕ್ ಶಾಲೆಯ ನೂತನವಾಗಿ ವಿಸ್ತರಿಸಲಾದ ಕಟ್ಟಡದ ಉದ್ಘಾಟನಾ ಸಮಾರಂಭ

ಮoಕಿ : ಹೊನ್ನಾವರ ತಾಲೂಕಿನ ಮಂಕಿಯ ಗೋಲ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ನೂತನವಾಗಿ ವಿಸ್ತರಿಸಲಾದ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಮಾರ್ಚ 5 ಶನಿವಾರ ಬೆಳಿಗ್ಗೆ 10ಗಂಟೆಗೆ ಗೋಲ್ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದೆ. ಅಂದು ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ಶ್ರೀ ಶ್ರೀ ಗಂಗಾಧರೇoದ್ರ ಸರಸ್ವತಿ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಪೂಜಾ ಸಮಾರಂಭ ಹಾಗೂ ಉದ್ಘಾಟನೆ ನಡೆಯಲಿದೆ.

ಉದ್ಘಾಟನಾ ಸಮಾರಂಭವನ್ನು ಬೆಳಿಗ್ಗೆ ಸ್ವಾಮಿಜಿಯವರನ್ನು ಹಾಗೂ ಗಣ್ಯರನ್ನು ವಿಶೇಷವಾಗಿ ಮೆರವಣಿಗೆಯ ಮುಖಾಂತರ ವಿದ್ಯಾರ್ಥಿಗಳು ಹಾಗೂ ಪೋಷಕವೃಂದ ಶಾಲೆಗೆ ಬರಮಾಡಿಕೊಳ್ಳಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಲ್ ಇಂಟರ್‌ನ್ಯಾಶನಲ್ ಪಬ್ಲಿಕ್ ಶಾಲೆಯ ಸಂಸ್ಥಾಪಕರು ಎ.ಆರ್.ನಾಯ್ಕ ವಹಿಸಲಿದ್ದಾರೆ.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ| ಸುಮನ್ ಡಿ, ಪನ್ನೆಕರ್ (ಐ.ಪಿ.ಎಸ್), ಅವಿನಾಶ್ ಶಿಂಧೆ (ಐ.ಎ.ಎಸ್), ಹರೀಶ ಎಲ್. ಗಾಂವ್ ಕರ್, (ಡಿ.ಡಿ.ಪಿ.ಆಯ್ ಕಾರವಾರ) ಮಮತಾದೆವಿ ಜಿ.ಎಸ್ (ಅಸಿಸ್ಟೆಂಟ್ ಕಮಿಷನರ್) ಇವರುಗಳು ಆಗಮಿಸಲಿದ್ದಾರೆ.
ನಂತರ ಗೋಲ್ ಇಂಟರ್‌ನ್ಯಾಶನಲ್ ಪಬ್ಲಿಕ್ ಶಾಲೆಯ ಮಕ್ಕಳಿಂದ ವಿಭಿನ್ನವಾದ ನೃತ್ಯರೂಪಕ ‘ನಮಸ್ತೆ ಇಂಡಿಯಾ’ ನಡೆಯಲಿದೆ. ಗೋಲ್ ಶಾಲೆ ಪ್ರತೀವರ್ಷ ತನ್ನ ವಾರ್ಷಿಕೋತ್ಸವದಲ್ಲಿ ವಿಶೇಷ ನೃತ್ಯ ಹಾಗೂ ಸಂಗೀತ ಪ್ರಯೋಗಗಳನ್ನು ಮಾಡುತ್ತಾ ಬಂದಿದೆ. ಹಾಗೆಯೇ ಈ ಬಾರಿ ಭಾರತದ ಹಿರಿಮೆ ಗರಿಮೆ. ನಮ್ಮ ಸಂಸ್ಕೃತಿ ಹಾಗೂ ಸಾಹಿತ್ಯ, ಸಂಗೀತ, ಭಕ್ತಿಪಂಥ, ನಮ್ಮ ದೇಶವನ್ನು ಆಳಿರುವ ಮಹಾರಾಜರುಗಳು, ಅವರು ಬಿಟ್ಟುಹೋಗಿರುವ ಶ್ರೀಮಂತ ಪರಂಪರೆ ಪ್ರಪಂಚಕ್ಕೆ ಭಾರತ ದೇಶ ವಿವಿಧ ಕ್ಷೇತ್ರಗಳಲ್ಲಿ ನೀಡಿರುವ ಕೊಡುಗೆಗಳನ್ನು ಹಾಗೂ ಭಾರತದ ವೈಶಿಷ್ಟ್ಯಗಳನ್ನು ಸುಮಾರು ಐದುನೂರು ಪುಟಾಣಿಗಳು ಈ ನೃತ್ಯ ರೂಪಕದ ಮುಖಾಂತರ ವೇದಿಕೆಯಲ್ಲಿ ಅನಾವರಣಗೊಳಿಸಲಿದ್ದಾರೆ. ಈ ನೃತ್ಯ ರೂಪಕಕ್ಕಾಗಿ ಬೆಂಗಳೂರಿನಿAದ ವಿಶೇಷ ವೇಷಭೂಷಣಗಳನ್ನು ತರಿಸಲಾಗಿದ್ದು ಹೊನ್ನಾವರ ತಾಲೂಕಿನ ಕಲಾವಿದರಾದ ದಾಮೋದರ ವಿಶೇಷ ರಂಗಸಜ್ಜಿಕೆ ಹಾಗೂ ರಂಗ ಪರಿಕರಗಳನ್ನು ಮಾಡಿದ್ದಾರೆ. ಮಕ್ಕಳಿಗೆ ನಮ್ಮ ದೇಶವನ್ನು ಹಾಗೂ ದೇಶದ ಹಿರಿಮೆ ಗರಿಮೆ ಗಳನ್ನು ಮನದಟ್ಟುಗೊಳಿಸುವಲ್ಲಿ ಮತ್ತು ದೇಶದ ಬಗ್ಗೆ ಅಭಿಮಾನವನ್ನು ಮೂಡಿಸುವಲ್ಲಿ ಈ ನೃತ್ಯರೂಪಕ ಸಹಕಾರಿಯಾಗಲಿದೆ. ನೃತ್ಯರೂಪಕದ ಪರಿಕಲ್ಪನೆಯನ್ನು ಹಾಗೂ ನಿರ್ದೇಶನವನ್ನು ಗೋಲ್ ಇಂಟರ್‌ನ್ಯಾಶನಲ್ ಶಾಲೆಯ ನಿರ್ದೇಶಕಿಯಾದ ದೀಪಾ. ಎನ್. ರಾವ್ ಮಾಡಿದ್ದಾರೆ. ಸಂಪೂರ್ಣ ಕಾರ್ಯಕ್ರಮದ ಉಸ್ತುವಾರಿಯನ್ನು ಗೋಲ್ ಶಾಲೆಯ ಶಿಕ್ಷಕವೃಂದ ವಹಿಸಿಕೊಂಡಿದ್ದು ಈ ವಿಶೇಷವಾದಂತಹ ಪ್ರಸ್ತುತಿಗೆ ಮತ್ತು ನೂತನವಾಗಿ ವಿಸ್ತರಿಸಲಾದ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ಎಲ್ಲರನ್ನು ಆದರದಿಂದ ಆಮಂತ್ರಿಸಲಾಗಿದೆ.

error: