December 6, 2024

Bhavana Tv

Its Your Channel

ಮೀನುಗಾರಿಕೆ ಸಂದರ್ಭದಲ್ಲಿ ದೋಣಿಯಲ್ಲಿ ಕುಸಿದು ಸಾವು,

ಹೊನ್ನಾವರ: ತಾಲೂಕಿನ ಮಂಕಿ ಮಡಿಯಿಂದ ಮೀನುಗಾರಿಕೆಗೆ ತೆರಳಿದ ವ್ಯಕ್ತಿಯೋರ್ವ ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ಸಂದರ್ಭದಲ್ಲಿ ದೋಣಿಯಲ್ಲಿ ಕುಸಿದು ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಮೃತಪಟ್ಟ ವ್ಯಕ್ತಿ ಗಣಪತಿ ನಾಗಪ್ಪ ಖಾರ್ವಿ(51)ಎಂದು ಗುರುತಿಸಲಾಗಿದೆ. ಬುಧವಾರ ಬೆಳಿಗ್ಗೆ ತನ್ನ ಸಂಬAಧಿಗಳಾದ ದೇವರಾಜ ಮಂಜುನಾಥ ಖಾರ್ವಿ,ಹಾಗೂ ಸಂಜಯ ಈಶ್ವರ ಖಾರ್ವಿ ಇವರೊಂದಿಗೆ ಜಯಶ್ರೀರಾಮ ನಾಡದೋಣಿಯಲ್ಲಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದರು.
ಸಮುದ್ರದಲ್ಲಿ ಬಲೆ ಬೀಡುವ ಸಂದರ್ಭದಲ್ಲಿ ಗಣಪತಿ ನಾಗಪ್ಪ ಖಾರ್ವಿ ಇತನು ಕುಸಿದು ಮೃತ ಪಟ್ಟಿದ್ದಾನೆ. ಮೃತ ವ್ಯಕ್ತಿ ಹೆಂಡತಿ ಹಾಗೂ ಮೂವರು ಚಿಕ್ಕ ಮಕ್ಕಳನ್ನು ಅಗಲಿದ್ದಾನೆ. ಮಂಕಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಕ್ರೈಮ್ ಪಿ ಎಸ್ ಐ ಮುಸಾಹೀದ್ ಅಹಮ್ಮದ್ ಪ್ರಕಣದ ತನಿಖೆ ನಡೆಸುತ್ತಿದ್ದಾರೆ.

error: