April 25, 2024

Bhavana Tv

Its Your Channel

ಕೊಲೆ ಪ್ರಕರಣ ಮರು ತನಿಖೆ ನಡೆಸುವಂತೆ ಹೈಕೋರ್ಟ ಆದೇಶ

ಭಟ್ಕಳ: ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ೨೦೧೦, ಅಕ್ಟೋಬರ್ ೨೩ರಂದು ನಡೆದಿದ್ದ ಮುರುಡೇಶ್ವರ ಹಿರೇದೋಮಿಯ ಯುವತಿ ಯಮುನಾ ನಾಯ್ಕ ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ಮರು ತನಿಖೆ ನಡೆಸುವಂತೆ ಹೈಕೋರ್ಟ ಆದೇಶ ನೀಡಿದೆ.

ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ವೆಂಕಟೇಶ್ ಹರಿಕಾಂತ್ ಎನ್ನುವ ವ್ಯಕ್ತಿ ಬರೋಬ್ಬರಿ ೬ ವರ್ಷ ೮ ತಿಂಗಳುಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ನಾಲ್ಕು ವರ್ಷದ ಹಿಂದೆ ಖುಲಾಸೆಗೊಂಡಿದ್ದು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಇದೀಗ ಧಾರವಾಡ ಉಚ್ಚ ನ್ಯಾಯಾಲಯದಿಂದಲೂ ನಿರಪರಾಧಿ ಎಂಬ ತೀರ್ಪು ಬಂದಿದೆ.

ಯುವತಿಯ ತಂದೆ ನಾಗಪ್ಪ ನಾಯ್ಕ ನೀಡಿದ ದೂರಿನಲ್ಲಿ ಹೆಸರಿಸಿದ್ದ ಕೊಲೆ ಘಟನೆ ನಡೆದ ಮನೆಯ ಮಾಲಕ ಮಹ್ಮದ್ ಸಾದೀಕ್ ದೊಣ್ಣ, ಖಾಸೀಫ್, ಮಹ್ಮದ್ ನಿಸಾರ್, ಮುರುಡೇಶ್ವರ ನ್ಯಾಶನಲ್ ಕಾಲೋನಿಯ ಯಾಸೀನ್ ಶೇಖ್, ನೀಲಗಿರಿ ಸಿದ್ದಿ ಮಹ್ಮದ್, ಹಬೀಬ್ ಶೇಖ್, ಅಂಡಾ ನಾಸೀರ್ ಇವರುಗಳ ವೀರ್ಯ, ಉಗುರು, ಕೂದಲು ಇತ್ಯಾದಿಗಳನ್ನು ಸಂಗ್ರಹಿಸಿ ಹೈದರಾಬಾದ್ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ (ಸಿಡಿಎ???ಡಿ), ಈ ಮೊದಲೇ ಕೊಲೆಗೀಡಾದ ಯುವತಿಯ ದೇಹದಲ್ಲಿ ಪತ್ತೆಯಾದ ವೀರ್ಯ, ಕೂದಲು ಇತ್ಯಾದಿಗಳೊಂದಿಗೆ ತಾಳೆ ಹಾಕಿ ಆರೋಪಿಯನ್ನು ಪತ್ತೆ ಹಚ್ಚುವಂತೆ ಆದೇಶ ನೀಡಿದೆ. ಅಲ್ಲದೇ ಇದೇ ಆರೋಪ ಪಟ್ಟಿಯಲ್ಲಿದ್ದ ಮಹಿಳೆಯರಾದ ಸಲ್ಮಾ ಹಾಗೂ ಫರ್ವೀನ್ ಹೆಸರನ್ನು ನ್ಯಾಯಾಲಯ ತನಿಖೆಯಿಂದ ಹೊರಗೆ ಇಟ್ಟಿದೆ. ಆರೋಪಿ ವೆಂಕಟೇಶ ಹರಿಕಾಂತನ ಪರ ಖ್ಯಾತ ನ್ಯಾಯವಾದಿ ರವಿಕಿರಣ ಮುರುಡೇಶ್ವರ ವಾದ ಮಂಡಿಸಿದ್ದರು. ನ್ಯಾಯಾಲಯದ ಈ ಆದೇಶ ಇಡೀ ಮುರುಡೇಶ್ವರ ಭಾಗದಲ್ಲಿ ಮತ್ತೊಮ್ಮೆ ಸಂಚಲನಕ್ಕೆ ಕಾರಣವಾಗಿದೆ.
ಅಂದು ನಡೆದ ಘಟನೆ ಏನು?
ಹೊಟ್ಟೆಪಾಡಿಗಾಗಿ ಮನೆಗೆಲಸ ಮಾಡಿಕೊಂಡಿದ್ದ ಮುರುಡೇಶ್ವರ ಹಿರೇದೋಮಿಯ ೨೧ರ ಹರೆಯದ ಯಮುನಾ ನಾಯ್ಕ, ಎಂದಿನAತೆ ಅಕ್ಟೋಬರ್ ೨೩, ೨೦೧೦ರಂದು ಮನೆಯಿಂದ ಹೊರಟವಳು ಸಂಜೆಯಾದರೂ ಮನೆಗೆ ವಾಪಸ್ಸಾಗಿರಲಿಲ್ಲ. ಮನೆಯವರೆಲ್ಲರೂ ಹುಡುಕಾಟ ನಡೆಸಿದರಾದರೂ ಆಕೆ ಪತ್ತೆಯಾಗಿರಲಿಲ್ಲ. ಮಾರನೆಯ ದಿನ ರವಿವಾರವೂ ಹುಡುಕಾಟ ನಡೆದಿದ್ದು, ಆಕೆಯ ಮೃತ ದೇಹ ಮಹ್ಮದ್ ಸಾದೀಕ್ ದೊಣ್ಣ ಹೆಸರಿನ ವ್ಯಕ್ತಿಯ ಮನೆಯ ಕಟ್ಟಿಗೆ ಸಂಗ್ರಹ ಸ್ಥಳದಲ್ಲಿ ಪತ್ತೆಯಾಗಿತ್ತು. ಆಕೆಯ ಮೇಲೆ ಅತ್ಯಾಚಾರ ನಡೆದು ಕೊಲೆಯಾಗಿರುವುದು ದೃಢವಾಗುತ್ತಿದ್ದಂತೆಯೇ ಮುರುಡೇಶ್ವರ ಹೊತ್ತಿ ಉರಿದಿತ್ತು. ವಿವಿಧ ಸಂಘಟನೆಗಳ ಮಧ್ಯ ಪ್ರವೇಶದೊಂದಿಗೆ ಪ್ರಕರಣ ಕೋಮು ಸಂಘರ್ಷದತ್ತ ವಾಲಿತ್ತು. ಪೊಲೀಸರು ೩ ವಿವಿಧ ತಂಡಗಳನ್ನು ಕಟ್ಟಿ ಆರೋಪಿಗಳ ಪತ್ತೆ ಕಾರ್ಯ ನಡೆಸಿದ್ದರು. ಕೊನೆಗೂ ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ವೆಂಕಟೇಶ ಹರಿಕಾಂತ ಎಂಬಾತನನ್ನು ಬಂಧಿಸಿ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಅತ್ಯಂತ ಪಾರದರ್ಶಕ ಹಾಗೂ ವೈಜ್ಞಾನಿಕವಾಗಿ ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿಕೊಂಡಿದ್ದರು. ಒಟ್ಟೂ ೫೧ ಸಾಕ್ಷ್ಯಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಒದಗಿಸಿದ್ದರು. ಆದರೆ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಾದ, ಪ್ರತಿವಾದ ನಡೆದು ನ್ಯಾಯಾಲಯ ಆರೋಪಿಯನ್ನು ಬಂಧನ ಮುಕ್ತಗೊಳಿಸಿತ್ತು. ಇದರ ವಿರುದ್ಧ ಪೊಲೀಸರು ಹೈಕೋರ್ಟ ಮೆಟ್ಟಿಲನ್ನು ಏರಿದ್ದರು. ಇದೀಗ ಹೈಕೋರ್ಟ ಸಹ ಆರೋಪಿ ವೆಂಕಟೇಶ ಹರಿಕಾಂತನನ್ನು ಆರೋಪದಿಂದ ಖುಲಾಷೆಗೊಳಿಸಿದೆ.

ಪತಿ ನಿರಪರಾಧಿ ಎಂದು ಅರಿತ ಪತ್ನಿ ಮಹಾದೇವಿ ತನ್ನ ಸಹೋದರ ಬಾಲಕೃಷ್ಣ ಸಹಕಾರದಲ್ಲಿ ಕಾನೂನು ಹೋರಾಟಕ್ಕೆ ಇಳಿದರು. ಶ್ರೀರಾಮ ಸೇನೆ ಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರ ಬೆಂಬಲದೊAದಿಗೆ ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಅವರನ್ನು ಭೇಟಿಯಾಗಿ ಸಂಪೂರ್ಣ ಪ್ರಕರಣದ ಬಗ್ಗೆ ವಿವರಿಸಿದ್ದು ವೆಂಕಟೇಶ್ ಪರ ವಾದ ಮಂಡಿಸಿದ್ದರು

ಯಾತನೆ ಅನುಭವಿಸಿರುವೆ: ಕಣ್ಣೀರಿಟ್ಟ ವೆಂಕಟೇಶ್ ನಾನು ನಿರಪರಾಧಿಯಾದರೂ ಅಂದು ಪೊಲೀಸರು ನನಗೆ ಚಿತ್ರ ಹಿಂಸೆ ನೀಡಿದ್ದಾರೆ. ೬ ವರ್ಷ ೮ ತಿಂಗಳನ್ನು ಜೈಲಿನಲ್ಲಿ ಕಳೆದಿದ್ದೇನೆ ,ಈ ವೇಳೆ ನನ್ನ ಹೆಂಡತಿ ಮಕ್ಕಳು ಅನುಭವಿಸಿದ ನನ್ನ ಕಳೆದು ಹೋದ ಜೀವನ ಮತ್ತೆ ಸಿಗುವುದಿಲ್ಲ . ಆದರೆ ಅತ್ಯಾಚಾರಕ್ಕೀಡಾಗಿ ಹತ್ಯೆಗೀಡಾಗಿರುವ ಯಮುನಾಗೆ ನ್ಯಾಯ ಸಿಗಬೇಕು. ನನ್ನನ್ನು ಹಿಂಸಿಸಿ ಶಿಕ್ಷೆ ಅನುಭವಿಸುವಂತೆ ಮಾಡಿದ ಅಂದಿನ ಡಿವೈಎಸ್‌ಪಿ ಎಂ.ನಾರಾಯಣ್‌ಗೆ ಶಿಕ್ಷೆಯಾಗಬೇಕು.

ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಅವರಿಂದ ನಮಗೆ ಹೊಸ ಜೀವನ ಸಿಕ್ಕಿದೆ ಎಂದು ವೆಂಕಟೇಶ್ ಹಾಗೂ ಪತ್ನಿ ಮಾಧವಿ, ಬಾಲಕೃಷ್ಣ ಹೇಳಿದ್ದಾರೆ. ಅವರು ಹಾಗೂ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಜಯಂತ್ ನಾಯ್ಕ್ ಇನ್ನಿತರರು ನ್ಯಾಯವಾದಿಗಳ ಕಚೇರಿಗೆ ಶನಿವಾರ ಆಗಮಿಸಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

೬ ವರ್ಷ ಜೈಲು ಶಿಕ್ಷೆ ಅನುಭವಿಸಿದ ವೆಂಕಟೇಶ್ ಆರೋಪಿ ಅಲ್ಲವೆಂದ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದು ಯಾರು? ಯುವತಿಯ ಮೈಮೇಲಿದ್ದ ವೀರ್ಯ ಯಾರದ್ದು? ಕೊಲೆ ಮಾಡಿದವನು ಹಾಗೂ ಸಂಭೋಗ ನಡೆಸಿದವನು ಬೇರೆ ಬೇರೆಯೆ? ಎಂಬಿತ್ಯಾದಿ ಯಕ್ಷ ಪ್ರಶ್ನೆಗಳಿಗೆ ಪೊಲೀಸರು ಇನ್ನೂ ಉತ್ತರ ಕಂಡುಕೊಳ್ಳಬೇಕಿದೆ.

error: