April 24, 2024

Bhavana Tv

Its Your Channel

ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನದ ಸೌಂದರೀಕರಣಕ್ಕಾಗಿ, ಮುರ್ಡೇಶ್ವರದ ನಾಗರಿಕಾ ಸೇವಾ ಸಮಿತಿಯಿಂದ ಬೇಡಿಕೆ ಪಟ್ಟಿ ಸಲ್ಲಿಕೆ

ಮುರ್ಡೇಶ್ವರ: ಮುರ್ಡೇಶ್ವರದ, ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನದ ಸೌಂದರೀಕರಣಕ್ಕಾಗಿ, ಮುರ್ಡೇಶ್ವರದ ನಾಗರಿಕಾ ಸೇವಾ ಸಮಿತಿಯಿಂದ ಅರಣ್ಯವಲಯಾಧಿಕಾರಿ ಕಾರ್ಯಾಲಯ, ಮಂಕಿ(ಉ.ಕ.), ರವರ ಮುಖಾಂತರ ಬೇಡಿಕೆ ಪಟ್ಟಿಯನ್ನು ಸಲ್ಲಿಸಲಾಯಿತು.

ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನದ ಸೌಂದರೀಕರಣಕ್ಕಾಗಿ ೧೭ ಬೇಡಿಕೆಗಳನ್ನು ಸಲ್ಲಿಸಲಾಯಿತು, ವೃಕ್ಷೋದ್ಯಾನದಲ್ಲಿ ಮೂಲಭೂತ ಸೌಕರ್ಯಗಳ ವ್ಯವಸ್ಥೆ. ಅರಣ್ಯ ಉತ್ಪನ್ನಗಳ ಮಾರಾಟ ಮಳಿಗೆ. ಸಾರ್ವಜನಿಕರ ವೀಕ್ಷಣೆಗಾಗಿ ವಿವಿಧ ರೀತಿಯ ವೃಕ್ಷಗಳ ಸಂಗ್ರಹ. ಐತಿಹಾಸಿಕ ಚರಿತ್ರೆಯನ್ನು ಸಾರುವ ಪ್ರತಿಮೆಗಳ ನಿರ್ಮಾಣ. ಜನಪದ ಕೌಶಲ್ಯಗಳು. ಗುಡಿಕೈಗಾರಿಕೆಗಳು. ಕಾರಂಜಿಗಳ ವ್ಯವಸ್ಥೆ. ಭರತನಾಟ್ಯ ನೃತ್ಯಾವಳಿಗೆ ಸಂಬoಧಪಟ್ಟ ವಿಗೃಹಗಳು. ಭೂಕೈಲಾಸ ಮಾದರಿಯ ಚಿತ್ರಣ. ವಿವಿಧ ರೀತಿಯ ಹೂಗಿಡಗಳ ಸಂಗ್ರಹ. ಮುರ್ಡೇಶ್ವರಕ್ಕೆ ಸಂಬAಧಪಟ್ಟ ಕ್ಷೇತ್ರ ಪರಿಚಯದ ವಿನ್ಯಾಸಗಳು. ವಿವಿಧ ವಸ್ತು ಪ್ರದರ್ಶನಾಲಯ. ಜಲಚರ ವಸ್ತು ಸಂಗ್ರಹಾಲಯ. ಜಲಪ್ರಯಾಣ. ಆಧುನಿಕೃತ ಉಪಹಾರ ಗೃಹಗಳು. ತಂಪು ಪಾನೀಯಗಳ ವ್ಯವಸ್ಥೆ ಆಕರ್ಷಣೀಯ ವೀಕ್ಷಣೆಗಾಗಿ ಪುಟಾಣಿ ರೈಲು…….. ಇತ್ಯಾದಿ ಬೇಡಿಕೆಗಳನ್ನು ಇಡಲಾಯಿತು.
ಇದಕ್ಕೆ ಸ್ಪಂದಿಸಿದ ವರದ ರಂಗನಾಥ, ರೇಂಜ್ ಫಾರೇಸ್ಟ್ ಆಫೀಸರ್, ಮಂಕಿ(ಉ.ಕ.) ರವರು ಸಮಿತಿ ಸದಸ್ಯರನ್ನು ಆತ್ಮೀಯವಾಗಿ ಬರಮಾಡಿಕೊಂಡು, ಮುಡೇಶ್ವರದ ಈ ವೃಕ್ಷೋದ್ಯಾನದ ಸೌಂದರೀಕರಣ ಕುರಿತಂತೆ ವಿಷಯಗಳನ್ನು ಚರ್ಚಿಸಿ, ಮುರ್ಡೇಶ್ವರದ ಅಭಿವೃದ್ಧಿ ದೃಷ್ಠಿಯಿಂದ, ತಮ್ಮ ಮೇಲಾಧಿಕಾರಿಗಳಿಗೆ ಮನವರಿಕೆ ಮಾಡಿ, ಅಗತ್ಯಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

error: