April 25, 2024

Bhavana Tv

Its Your Channel

ರಾಷ್ಟ್ರೀಯ ಏಕತಾ ದಿವಸ್ ಸೈಕಲ್ ರ‍್ಯಾಲಿಗೆ ಮುರುಡೇಶ್ವರದಲ್ಲಿ ಶಾಸಕ ಸುನೀಲ ನಾಯ್ಕ ಸ್ವಾಗತ

ಭಟ್ಕಳ: ರಾಷ್ಟ್ರೀಯ ಏಕತಾ ದಿವಸ್ ಅಂಗವಾಗಿ ಸಿಐಎಸ್‌ಎಫ್ (ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್) ವತಿಯಿಂದ ಆಯೋಜಿಸಲಾಗಿರುವ ಕೇರಳ ತಿರುವನಂತಪುರ-ಗುಜರಾತ್ ಕೆವಾಡಿಯಾ ಸೈಕಲ್ ರ‍್ಯಾಲಿಗೆ ತಾಲೂಕಿನ ಮುರುಡೇಶ್ವರದಲ್ಲಿ ಶಾಸಕ ಸುನೀಲ ನಾಯ್ಕ ಸ್ವಾಗತ ಕೋರಿದರು.

ಈ ಸಂದರ್ಭದಲ್ಲಿನ ಮಾತನಾಡಿದ ಅವರು ಭಾರತ ವಿವಿಧತೆಯಲ್ಲಿ ಏಕತೆಯನ್ನು ಸಾರುವ ರಾಷ್ಟ್ರವಾಗಿದೆ. ರಾಷ್ಟ್ರ ಏಕತೆಯಿಂದ ಸದೃಢಗೊಂಡಿದ್ದು, ದೇಶದ ಸುರಕ್ಷತೆಗಾಗಿ ಎಲ್ಲರೂ ಕೈ ಜೋಡಿಸಬೇಕಾಗಿದೆ ಎಂದರು. ನಂತರ ರ‍್ಯಾಲಿಯಲ್ಲಿ ಪಾಲ್ಗೊಂಡಿರುವ ಎಲ್ಲ ಸೈಕಲ್ ಸವಾರರಿಗೂ ಹೂಗಚ್ಚ ನೀಡಿ ಅಭಿನಂದಿಸಲಾಯಿತು. ಮಂಗಳೂರು ಎಮ್‌ಆರ್‌ಪಿಎಲ್, ಸಿಐಎಸ್‌ಎಫ್ ಅಸಿಸ್ಟೆಂಟ್ ಕಮಾಂಡೆAಟ್ ಓ.ಎಸ್.ಪರ್ಮಾ ಸೈಕಲ್ ರ‍್ಯಾಲಿಯ ಉದ್ದೇಶವನ್ನು ವಿವರಿಸಿದರು.
ನಂತರ ಶಾಸಕರು ಸೈಕಲ್ ರ‍್ಯಾಲಿಗೆ ಹಸಿರು ನಿಶಾನೆ ತೋರಿಸಿ ಮುಂದಕ್ಕೆ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಇನ್‌ಸ್ಪೆಕ್ಟರ್ ನಾಗರಾಜ್, ಪ್ರಸನ್ನ, ಮುರುಡೇಶ್ವರ ಪೊಲೀಸ್ ಠಾಣೆಯ ಎಸ್‌ಐ ರವೀಂದ್ರ ಬಿರಾದಾರ ಮೊದಲಾದವರು ಉಪಸ್ಥಿತರಿದ್ದರು. ಕಳೆದ ಸೆ. ೨೯ರಂದು ಕೇರಳ ತಿರುವನಂತ
ಸಿಐಎಸ್‌ಎಫ್ ರ‍್ಯಾಲಿಯು ಹೊರಟಿದ್ದು, ರಾಷ್ಟ್ರೀಯ ಏಕತಾ ದಿನಾಚರಣೆಯ ದಿನವಾದ ಅಕ್ಟೋಬರ್ ೩೧ರಂದು ಕೆವಾಡಿಯವನ್ನು ತಲುಪಲಿದೆ. ಅಂದು ನರ್ಮದಾ ನದಿಯ ದಂಡೆಯ ಮೇಲಿರುವ ವಲ್ಲಭಭಾಯಿ (ಏಕತಾ) ಪ್ರತಿಮೆಯ ಮುಂದೆ ಭವ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ೧೫ ಸೈಕಲ್ ಸವಾರರು ಸೇರಿದಂತೆ ಒಟ್ಟೂ ೪೧ ಸಿಐಎಸ್‌ಎಫ್ ಸಿಬ್ಬಂದಿಗಳು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ.

error: