April 20, 2024

Bhavana Tv

Its Your Channel

ಮುರ್ಡೇಶ್ವರ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ

ಮುರ್ಡೇಶ್ವರ ಲಯನ್ಸ್ ಕ್ಲಬ್‌ನ ನೂತನ ಅಧ್ಯಕ್ಷರಾದ ಎಮ್.ವಿ ಹೆಗಡೆ, ಕಾರ್ಯದರ್ಶಿಗಳಾದ ನಾಗೇಶ ಮಡಿವಾಳ, ಕೋಶಾಧ್ಯಕ್ಷರಾದ ಬಸ್ತಾö್ಯಂವ್ ಡಿಕೋಸ್ತಾ
ಮುರ್ಡೇಶ್ವರ ಲಯನ್ಸ್ ಕ್ಲಬ್ ತನ್ನ ಸಮಾಜಮುಖಿ ಕಾರ್ಯಗಳಿಂದ ಇತರರಿಗೆ ಮಾದರಿಯಾಗಿದೆ ಎಂದು ೩೧೭ಬಿ ಲಯನ್ ಜಿಲ್ಲೆಯ ಹಿಂದಿನ ಗರ‍್ನರ್ ಡಾ.ಗಿರೀಶ ಕುಚಿನಾಡ್‌ರವರು ಹೇಳಿದರು.
ಅವರು ಮುರ್ಡೇಶ್ವರದ ಇಂದ್ರಪ್ರಸ್ಥ ಹೊಟೇಲ್‌ಲ್ಲಿ ನಡೆದ ಮುರ್ಡೇಶ್ವರ ಲಯನ್ಸ್ ಕ್ಲಬ್‌ನ ೨೦೨೨-೨೩ನೇ ಲಯನ್ ವರ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ಇದೇ ವೇಳೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿಕ್ಷಕರೂ, ಬರಹಗಾರರೂ ಆದ ಸಂದೀಪ ಭಟ್‌ರವರು ಮಾನವ ಸಂಬAಧ ಹಾಗೂ ಸೇವೆಯ ಮಹತ್ವದ ಕುರಿತು ವಿವಿಧ ನಿದರ್ಶನಗಳ ಮೂಲಕ ಮಹತ್ವದ ಮಾಹಿತಿ ಹಂಚಿಕೊAಡರು.
ಮುರ್ಡೇಶ್ವರ ಲಯನ್ಸ್ ಕ್ಲಬ್‌ನ ನೂತನ ಅಧ್ಯಕ್ಷರಾದ ಎಮ್.ವಿ ಹೆಗಡೆ, ಕಾರ್ಯದರ್ಶಿಗಳಾದ ನಾಗೇಶ ಮಡಿವಾಳ, ಕೋಶಾಧ್ಯಕ್ಷರಾದ ಬಸ್ತಾö್ಯಂವ್ ಡಿಕೋಸ್ತಾ ರವರಿಗೆ ಪ್ರಮಾಣವಚನ ಬೋಧಿಸಲಾಯಿತು.
ಮೊದಲ ಉಪಾಧ್ಯಕ್ಷರಾಗಿ ಜಗದೀಶ್ ಜೈನ್, ಎರಡನೇ ಉಪಾಧ್ಯಕ್ಷರಾಗಿ ಗಜಾನನ ಭಟ್, ಸಹ ಕಾರ್ಯದರ್ಶಿಯಾಗಿ ಪಾಂಡುರAಗ ಅಳ್ವೆಗದ್ದೆ, ಸದಸ್ಯತ್ವ ಅಭಿಯಾನದ ಅಧ್ಯಕ್ಷರಾಗಿ ವಿಶ್ವನಾಥ ಕಾಮತ್, ಕ್ಲಬ್ ಸಮನ್ವಯಾಧಿಕಾರಿಯಾಗಿ ಡಾ.ಹರಿಪ್ರಸಾದ ಕಿಣಿ, ಸೇವಾ ಚಟುವಟಿಕೆಗಳ ಅಧ್ಯಕ್ಷರಾಗಿ ವಿಶ್ವನಾಥ ಮಡಿವಾಳ, ವ್ಯಾವಹಾರಿಕ ಸಂವಹನದ ಅಧ್ಯಕ್ಷರಾಗಿ ಕಿರಣ ಮಾನಕಾಮೆ, ಲಯನ್ ಟೇಮರ್ ಆಗಿ ಡಾ.ಮನೋಜ ಆಚಾರ್ಯ, ಟೇಲ್‌ಟ್ವಿಸ್ಟರ್ ಆಗಿ ಕೃಷ್ಣ ಹೆಗಡೆ, ನಿರ್ದೇಶಕರುಗಳಾಗಿ ಬಾಬು ಮೊಗೇರ್, ಎ.ಎನ್ ಶೆಟ್ಟಿ, ದಯಾನಂದ ಮೆಣಸಿನಮನೆ, ನಾಗರಾಜ ಕಾಮತ, ಜಯಪ್ರಕಾಶ ಕರ್ಕಿಕರ್, ಕಿರಣ ಕಾಯ್ಕಿಣಿ, ತಿಲಕ್ ರಾವ್, ದ್ಯಾನೇಶ್ ಮಾನಕಾಮೆ, ಯಾದವ್ ಮೊಗೇರ್ ಹಾಗೂ ಗೌರೀಶ್ ಟಿ ನಾಯ್ಕರವರನ್ನು ನಿಯುಕ್ತಿಗೊಳಿಸಲಾಯಿತು.
ಲಯನ್ ಜಿಲ್ಲೆಯ ಜೋನ್ ಚೇರ್‌ಪರ್ಸನ್‌ರಾಗಿ ಆಯ್ಕೆಯಾದ ನಾಗರಾಜ ಭಟ್ ಹಾಗೂ ಡಿಸ್ಟಿçಕ್ಟ್ ಚೇರ್‌ಪರ್ಸನ್‌ಗಳಾಗಿ ಆಯ್ಕೆಯಾದ ಡಾ.ಆಯ್.ಆರ್.ಭಟ್, ಡಾ.ವಾಧಿರಾಜ ಭಟ್, ಡಾ.ಸುನೀಲ್ ಜತ್ತನ್, ಸುಬ್ರಾಯ ನಾಯ್ಕ, ಗೌರೀಶ ಆರ್ ನಾಯ್ಕ, ಮಂಜುನಾಥ ನಾಯ್ಕ, ರಾಮದಾಸ ಶೇಟ್, ಶಿವಾನಂದ ದೈಮನೆ, ಪಿಲಿಫ್ ಅಲ್ಮೇಡಾರವರನ್ನು ಅಬಿನಂದಿಸಲಾಯಿತು.
ನಿಕಟಪೂರ್ವ ಅಧ್ಯಕ್ಷರಾದ ಶಿವಾನಂದ ದೈಮನೆಯವರು ನೂತನ ಅಧ್ಯಕ್ಷರಾದ ಎಮ್.ವಿ.ಹೆಗಡೆಯವರಿಗೆ ಅಧಿಕಾರ ಹಸ್ತಾಂತರಿಸಿದರು. ನೂತನ ಅಧ್ಯಕ್ಷರು ಮಾತನಾಡಿ ಕ್ಲಬ್‌ನ ಎಲ್ಲಾ ಸದಸ್ಯರ ಸಹಯೋಗದೊಂದಿಗೆ ಎಲ್ಲರಿಗೂ ಮಾದರಿಯಾಗುವ ರೀತಿಯಲ್ಲಿ ಹಲವಾರು ಸೇವಾ ಕಾರ್ಯಗಳನ್ನು ಮಾಡಲು ಸಿದ್ಧರಿರುವುದಾಗಿ ತಿಳಿಸಿದರು.
ಇದೇ ವೇಳೆ ಅಗ್ನಿಶಾಮಕ ದಳದ ಸಿಬ್ಬಂದಿಯವರು ರಾಷ್ಟçಮಟ್ಟದ ಕಬಡ್ಡಿಯಲ್ಲಿ ಭಾಗವಹಿಸಿದ ನಿಮಿತ್ತ ಸನ್ಮಾನಿಸಲಾಯಿತು. ಎಸ್.ಎಸ್.ಎಲ್ ಪರೀಕ್ಷೆಯಲ್ಲಿ ಭಟ್ಕಳ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಹರ್ಷಿತಾ ವಿಷ್ಣು ನಾಯ್ಕ ಹಾಗೂ ಪಿ.ಯು.ಸಿಯ ಕಲಾ ವಿಭಾಗದಲ್ಲಿ ಮುಸ್ಕಾನ್ ಖಾನ್, ವಿಜ್ಞಾನ ವಿಭಾಗದಲ್ಲಿ ಹರೀಶ ಹೆಬ್ಬಾರ, ವಾಣಿಜ್ಯ ವಿಭಾಗದಲ್ಲಿ ಶ್ರೀನಿಧಿ ಪೈರವರನ್ನು ಭಟ್ಕಳ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ನಿಮಿತ್ತ ಗೌರವಿಸಿ ಸನ್ಮಾನಿಸಲಾಯಿತು.
ಲಯನ್ ಕಾರ್ಯದರ್ಶಿ ನಾಗೇಶ ಮಡಿವಾಳ ಲಯನ್ ವರ್ಷದ ಸಮಗ್ರ ವರದಿಯನ್ನು ಮಂಡಿಸಿದರು. ಜಗದೀಶ ಜೈನ್ ಸ್ವಾಗತಿಸಿದರು. ಬಸ್ತಾö್ಯಂವ್ ಡಿಕೋಸ್ತಾ ವಂದಿಸಿದರು. ಲಯನ್ ಸದಸ್ಯರಾದ ಕೆ.ಬಿ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.

error: