February 6, 2023

Bhavana Tv

Its Your Channel

ಆರ್. ಎನ್. ಎಸ್ ಕಾಲೇಜಿನ ವಿದ್ಯಾರ್ಥಿಗಳು 100 ಕ್ಕೆ 100 ಫಲಿತಾಂಶ

ಮುರುಡೇಶ್ವರ :– ಆರ್. ಎನ್. ಎಸ್ ಪ್ರಥಮ ದರ್ಜೆ ಕಾಲೇಜಿನ 2021-22 ನೇ ಸಾಲಿನ ಆರನೇ ಸೆಮಿಸ್ಟಪರೀಕ್ಷೆಯಲ್ಲಿ 34 ವಿದ್ಯಾರ್ಥಿಗಳಲ್ಲಿ 34 ವಿದ್ಯಾರ್ಥಿಗಳು ಪಾಸಾಗಿದ್ದು ಶೇ. 100 ಕ್ಕೆ 100 ಫಲಿತಾಂಶ ಬಂದಿರುತ್ತದೆ. ಅದರಲ್ಲಿ 30 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದು, 04 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿಪಾಸಾಗಿರುತ್ತಾರೆ. ಕು. ರೋಷನ್ ದೇವಾಡಿಗ್ ಇವನು ಕಂಪ್ಯೂಟರ್ ಅಪ್ಲಿಕೇಶನ್, ನಾಗಶ್ರೀ ನಾಯ್ಕ, ರಕ್ಷಿತಾನಾಯ್ಕ, ರೇಷ್ಮಾನಾಯ್ಕ ಹಾಗೂ ಶಿಫಾನಾಜ್ ಇವರು ಪ್ರಿನ್ಸಿಪಾಲ ಆಫ್ ಫಾರಿನ್ ಎಕ್ಸ್ಚೇಂಜ್, ನಿವೇದಿತಾ ನಾಯ್ಕ,ರಕ್ಷಿತಾನಾಯ್ಕ,ಸಿಂಚನಾ ಕೊಟದಮಕ್ಕಿ ಇವರು ಮ್ಯಾನೇಜ್ಮೆಂಟ್ ಅಕೌಂಟಿAಗ್ ವಿಷಯದಲ್ಲಿ 100/100 ಅಂಕಗಳನ್ನು ಪಡೆದಿರುತ್ತಾರೆ. ಕು. ರಕ್ಷಿತಾನಾಯ್ಕ 95.85%,ಕು. ಶಿಫಾನಾಜ್ 94.14% ,ಹಾಗೂ ರೇಷ್ಮಾನಾಯ್ಕ 93% ರಷ್ಟುಅಂಕಗಳನ್ನುಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಇವರನ್ನು ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಸಂಜಯ್ಕೆಎಸ್ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿ ವೃಂದದವರು ಅಭಿನಂದಿಸಿದ್ದಾರೆ.

About Post Author

error: